newsics.com/ನ್ಯೂಸಿಕ್ಸ್
ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಡಿಕೆಶಿ, ಡಿಸಿಎಂ ಡಾ.ಜಿ ಪರಮೇಶ್ವರ್, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ತಮ್ಮೊಂದಿಗೆ ಬುಧವಾರ ಸಚಿವರಾಗಿ ಪ್ರಮಾಣ ಸ್ವೀಕರಿಸಿದ 13 ಸಚಿವರಿಗೆ ಗುರುವಾರ ಖಾತೆ ಹಂಚಿಕೆ ಮಾಡಿದ್ದಾರೆ.
ಆದರೆ, ಖಾತೆ ಹಂಚಿಕೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಣಕಾಸು ಇಲಾಖೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರಿಗೆ ಕಂದಾಯ ಮತ್ತು ಯುವ ಸಬಲೀಕರಣ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.
ಇನ್ನು ಅತ್ಯಂತ ಪ್ರಮುಖವಾಗಿ ಕರ್ನಾಟಕದ ನೂತನ ಗೃಹ ಸಚಿವರಾಗಿ ಪ್ರಿಯಾಂಕ್ ಖರ್ಗೆ ಆಯ್ಕೆಯಾಗಿದ್ದು, ಅವರಿಗೆ ಐಟಿಬಿಟಿ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.
ಪ್ರಮುಖ ಖಾತೆಗಳ ಹಂಚಿಕೆ ವಿವರ ಹೀಗಿದೆ:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ – ಹಣಕಾಸು ಮತ್ತು ಉಳಿದ ಎಲ್ಲ ಖಾತೆಗಳು
ಡಿಸಿಎಂ ಡಾ.ಜಿ. ಪರಮೇಶ್ವರ – ಕಂದಾಯ ಮತ್ತು ಯುವ ಸಬಲೀಕರಣ
ಬೈರತಿ ಸುರೇಶ್- ಸಾರಿಗೆ ಇಲಾಖೆ
ರಾಮಲಿಂಗಾರೆಡ್ಡಿ – ಜಲಸಂಪನ್ಮೂಲ
ಶರಣಪ್ರಕಾಶ್ ಪಾಟೀಲ – ವೈದ್ಯಕೀಯ
ಯತೀಂದ್ರ ಸಿದ್ದರಾಮಯ್ಯ – ನಗರಾಭಿವೃದ್ಧಿ
ಎಂ.ಬಿ. ಪಾಟೀಲ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಕೃಷ್ಣಬೈರೇಗೌಡ – ಬೆಂಗಳೂರು ನಗರಾಭಿವೃದ್ಧಿ
ಪ್ರಿಯಾಂಕ್ ಖರ್ಗೆ – ಗೃಹ ಮತ್ತು ಐಟಿಬಿಟಿ
ಕೆ.ಜೆ. ಜಾರ್ಜ್ – ಇಂಧನ ಮತ್ತು ಪ್ರವಾಸೋದ್ಯಮ
ಕೆ.ಹೆಚ್. ಮುನಿಯಪ್ಪ – ಆಹಾರ ಇಲಾಖೆ
ಯು.ಟಿ. ಖಾದರ್ – ಆರೋಗ್ಯ ಇಲಾಖೆ
ಸತೀಶ್ ಜಾರಕಿಹೊಳಿ – ಲೋಕೋಪಯೋಗಿ
ಈಶ್ವರ ಖಂಡ್ರೆ – ಗ್ರಾಮೀಣಾಭಿವೃದ್ಧಿ ಇಲಾಖೆ
U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ