ಅಪರ್ಣಾಗೆ ವಾಯ್ಸ್ ಅನೌನ್ಸ್ ಮೂಲಕ ನಮ್ಮ‌ ಮೆಟ್ರೋ ಶ್ರದ್ಧಾಂಜಲಿ, ಎಂದೆಂದಿಗೂ ನಿಮ್ಮ ಧ್ವನಿ ಜೀವಂತ…

newsics.com ಬೆಂಗಳೂರು: ಖ್ಯಾತ ನಿರೂಪಕಿ ಅಪರ್ಣಾ ಅವರು ನಮ್ಮ ಮೆಟ್ರೋಗೆ (Namma Metro) ಧ್ವನಿಯಾಗಿದ್ದರು. ಮೆಟ್ರೋ ನಿಲ್ದಾಣ ಮತ್ತು ರೈಲುಗಳಲ್ಲಿ ಸೂಚನೆಗಳು ಅಪರ್ಣಾ ಅವರ ಧ್ವನಿಯಲ್ಲಿ ಕೇಳುತ್ತವೆ. ಮುಂದಿನ ನಿಲ್ದಾಣ ನಾಡಪ್ರಭು ಕೆಂಪೇಗೌಡ ನಿಲ್ದಾಣ.., ಬಾಗಿಲುಗಳು ಎಡಕ್ಕೆ ತೆರೆಯಲಿವೆ ಎಂಬ ಶಾರೀರ ಅಪರ್ಣಾ ಅವರದ್ದು. ಆದರೆ, ಇದೀಗ ಶಾರೀರ ಇದ್ದು ಶರೀರ ಇಹಲೋಕ ತ್ಯಜಿಸಿದೆ. ನಿರೂಪಕಿ ಅಪರ್ಣಾ ಅವರಿಗೆ ಬಿಎಂಆರ್ಸಿಎಲ್ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ವಾಯ್ಸ್ ಅನೌನ್ಸ್ ಮಾಡುವ ಮೂಲಕ ಗೌರವದ ಸಂತಾಪ ಸೂಚಿಸಿದ್ದಾರೆ. … Continue reading ಅಪರ್ಣಾಗೆ ವಾಯ್ಸ್ ಅನೌನ್ಸ್ ಮೂಲಕ ನಮ್ಮ‌ ಮೆಟ್ರೋ ಶ್ರದ್ಧಾಂಜಲಿ, ಎಂದೆಂದಿಗೂ ನಿಮ್ಮ ಧ್ವನಿ ಜೀವಂತ…