newsics.com
ಬೆಂಗಳೂರು: ನಾನು ನಂದಿನಿ ಬೆಂಗ್ಳೂರಿಗ್ ಬಂದೀನಿ ವಿಡಿಯೋ ಮೂಲಕ ಜನಪ್ರಿಯರಾದ, ಯೂಟ್ಯೂಬ್ ಹಾಗೂ ಫೇಸ್ ಬುಕ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿರುವ ‘ವಿಕ್ಕಿಪೀಡಿಯಾ’ (Vickypedia) ವಿಕಾಸ್ ಅವರನ್ನು ಪೊಲೀಸರು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ.
ವಿಕಾಸ್ ತನ್ನ ವಿಡಿಯೋದಲ್ಲಿ ಯುವಜನರು ಹಾಗೂ ಮಾದಕ ವಸ್ತು ಬಗ್ಗೆ ಮಾತನಾಡಿದ್ದರು. ಈ ಕಾರಣದಿಂದ ಬೈಯಪ್ಪನಹಳ್ಳಿ ಪೊಲೀಸರು ಅವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಮಯ ವಿಡಿಯೋಗಳಿಂದ ಜನಪ್ರಿಯರಾಗಿರುವ ವಿಕಾಸ್, ‘ನಾನು ನಂದಿನಿʼ ಎನ್ನುವ ಹಾಡಿನ ಮೂಲಕ ಇತ್ತೀಚೆಗೆ ವೈರಲ್ ಆಗಿದ್ದರು.
ಇತ್ತೀಚೆಗಿನ ಅವರ ವಿಡಿಯೋದಲ್ಲಿ “ಇಂದಿನ ಯುವಕರು ಎಂಜಾಯ್‌ಮೆಂಟ್‌ಗೆ ಅಂತ ಮದ್ಯಪಾನ ಮಾಡೋದು, ಸಿಗರೇಟ್ ಸೇದೋದು, ಹುಡುಗೀರ್ ಹಿಂದೆ ಹೋಗ್ತಾರೆ. ಆದರೆ, ನಾನು ಎಂಜಾಯ್‌ಮೆಂಟ್ ಮಾಡಲು ಡ್ರಗ್ಸ್ ತಗೋತೀನಿ” ಎಂದು ಹೇಳುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು.
ಇದು ಯುವಜನರನ್ನು ದಾರಿ ತಪ್ಪಿಸುತ್ತದೆ ಎನ್ನುವ ಕಾರಣದಿಂದ ಪೊಲೀಸರು ವಿಕಾಸ್ ಅವರನ್ನು ಠಾಣೆಗೆ ಕರೆದು ಎಚ್ಚರಿಕೆ ನೀಡಿದ್ದಾರೆ. ಇದಲ್ಲದೆ ವಿಡಿಯೋ ಮಾಡುವಾಗ ಅನುಸರಿಸಬೇಕಾದ ಕೆಲವೊಂದು ನಿಯಮದ ಬಗ್ಗೆ ಪೊಲೀಸರು ಪಾಠ ಮಾಡಿದ್ದಾರೆ ಎಂದು ತಿಳಿದುಬಂದಿದೆ
ವಿಕಾಸ್ ಹಾಗೂ ಅಮಿತ್ ಈ ವಿಡಿಯೋ ಮಾಡಿದ್ದರು. ಪೊಲೀಸರು ವಿಕಾಸ್ ಅವರಿಂದ ಮುಚ್ಚಳಿಕೆಯನ್ನೂ ಬರೆಸಿಕೊಂಡು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ.
ಮೈದಾನದಲ್ಲೇ ತಾಳ್ಮೆ ಕಳೆದುಕೊಂಡ ಇರ್ಫಾನ್ ಪಠಾಣ್- ಯೂಸುಫ್ ಪಠಾಣ್, ವೈರಲ್ ವಿಡಿಯೋ ನೋಡಿ
ಪುರುಷರನ್ನು ಬೈದು, ಅವಮಾನಿಸಿ ತಿಂಗಳಿಗೆ ಕೋಟಿ ಕೋಟಿ ಸಂಪಾದಿಸ್ತಾಳೆ ಈ ಮಹಿಳೆ!