newsics.com
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಹೇಳಿಕೊಳ್ಳುವಂತಹ ಹಿಟ್ ಚಿತ್ರಗಳು ತೆರೆಕಾಣುತ್ತಿಲ್ಲ. ಹೀಗಾಗಿ ಹಳೆಯ ಚಿತ್ರಗಳನ್ನೇ ಮರು ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.
ಈ ಹಿಂದೆ ಪುನೀತ್,ವಿಷ್ಣುವರ್ಧನ್, ರಾಜ್‌ಕುಮಾರ್ ನಟನೆಯ ಕೆಲವು ಸಿನಿಮಾಗಳು ಮರು ಬಿಡುಗಡೆಯಾಗಿದ್ದವು.
ಇದೀಗ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ನಟನೆಯ ‘ಶಾಸ್ತ್ರಿ’ ಚಿತ್ರ ನಾಳೆ (ಜುಂ.19) ಮರುಬಿಡುಗಡೆಯಾಗುತ್ತಿದೆ.
2005 ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾವನ್ನು ಬರೊಬ್ಬರಿ 19 ವರ್ಷಗಳ ಬಳಿಕ ಮರು ಬಿಡುಗಡೆ ಮಾಡಲಾಗುತ್ತಿದೆ.
ದರ್ಶನ್ ಮತ್ತು ಮಾನ್ಯಾ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ಬುಲೆಟ್ ಪ್ರಕಾಶ್, ಹನುಮಂತೇ ಗೌಡ, ಜಿಕೆ ಗೋಂವಿದ್ ರಾವ್, ಚಿತ್ರ ಶಿನಾಯ್ ಸೇರಿದಂತೆ ಹಲವರಿದ್ದಾರೆ.