Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕುಶಾಲನಗರ ಹುಡುಗಿ ಹೆಸರಲ್ಲಿ ಸೆಕ್ಸ್ ಮಸಾಜ್‌ ವಂಚನೆ: ಸಕಲೇಶಪುರದ ಎಂಟು ಮಂದಿ ಬಂಧನ
ಕರ್ನಾಟಕ

ಕುಶಾಲನಗರ ಹುಡುಗಿ ಹೆಸರಲ್ಲಿ ಸೆಕ್ಸ್ ಮಸಾಜ್‌ ವಂಚನೆ: ಸಕಲೇಶಪುರದ ಎಂಟು ಮಂದಿ ಬಂಧನ

Share
2 Min Read
SHARE

newsics.com

ಕುಶಾಲನಗರ(ಕೊಡಗು): ಆನ್ಲೈನ್ನಲ್ಲಿ ಸೆಕ್ಸ್ ಮಸಾಜ್ ಮಾಡಿಸುವ ಆಸೆ ತೋರಿಸಿ ಹಲವು ವ್ಯಕ್ತಿಗಳನ್ನು ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್‌ನ್ನು ಕೊಡಗು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಹುಡುಗಿಯರಿಂದ ಮಸಾಜ್ ಮಾಡಿಸುವ ಆಸೆ ತೋರಿಸಿ ಹುಡುಗಿಯರ ಫೋಟೊ ಕಳುಹಿಸಿ ಹಣ ಲೂಟಿ ಮಾಡುತ್ತಿದ್ದ ಜಾಲವನ್ನು ಕೊಡಗು ಜಿಲ್ಲೆಯ ಕುಶಾಲನಗರ ನಗರ ಪೊಲೀಸರು ಭೇದಿಸಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರದ ಎಂಟು ಆರೋಪಿಗಳನ್ನು ಬೆಂಗಳೂರಿನಲ್ಲಿ‌ ಬಂಧಿಸಲಾಗಿದೆ. ಸಕಲೇಶಪುರದ ಮಂಜುನಾಥ, ಸಂದೀಪ್ ಕುಮಾರ್ ಸಿಎಸ್, ಸಿ. ಬಿ. ರಾಕೇಶ್, ಕೆ. ಜಯಲಕ್ಷ್ಮಿ, ಸಹನಾ, ಪಲ್ಲವಿ, ಅಭಿಷೇಕ್ ಮತ್ತು ಅಪ್ರಾಪ್ತ ಬಾಲಕಿ ಬಂಧಿತರು. ಬಂಧಿತರಿಂದ ಎರಡು ಕಾರು 17 ಮೊಬೈಲ್, ಒಂದು ಟ್ಯಾಬ್, ಒಂದು ಲ್ಯಾಪ್ಟಾಪ್ ಹಾಗೂ ರೂ. 24,800 ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರವಾಸಿಗರು ಹೆಚ್ಚು ಬರುವ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಹನಿಟ್ರ್ಯಾಪ್ ಪ್ರಕರಣ(honey trap case) ನಡೆದಿದ್ದು ಹಾಸನ ಮೂಲದ 3 ಮಹಿಳೆಯರು ಮತ್ತು 5 ಯುವಕರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಗ್ಯಾಂಗ್ ಕುಶಾಲನಗರದ ಹುಡುಗಿ ಬೇಕಾ ಎಂದು ಆಮಿಷ ತೋರಿಸಿ ವಂಚನೆ ಮಾಡುತ್ತಿತ್ತು.

ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಚನಹಳ್ಳಿ ನಿವಾಸಿ ಮಂಜು ಎಂಬುವರು ಜೂನ್ 29ರಂದು Locanto App ನಲ್ಲಿ Kushalnagar Top Model Sexy Aunties Service Available Kushalnagar – 23 0 35 ಸೈಟ್ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದು, ಒಬ್ಬ ವ್ಯಕ್ತಿ ಮಾತನಾಡಿ ನಾನು ಕುಶಾಲನಗರದ ಕಾಳೇಘಾಟ್ ಲಾಡ್ಜ್ ಮೇನೇಜರ್ ಎಂಬುದಾಗಿ ಪರಿಚಯಿಸಿಕೊಂಡು ಲಾಡ್ಜ್ನಲ್ಲಿ ಹೆಂಗಸರಿಂದ ಸೆಕ್ಸ್/ಮಸಾಜ್ ಮಾಡಿಸಲಾಗುವುದು. ಆನ್ಲೈನ್ ಮೂಲಕ ಮುಂಗಡವಾಗಿ ಹಣ ಕಳುಹಿಸಿದರೆ ಈಗಲೇ ಹೆಂಗಸರ ಏರ್ಪಾಡು ಮಾಡಲಾಗುವುದು ಎಂದು ಆರೋಪಿಗಳು ಪೋನ್ ಮಾಡಿ ಸುಳ್ಳು ಮಾಹಿತಿ ನೀಡಿದ್ದಾರೆ. ಅಲ್ಲದೆ ದೂರುದಾರರ Whatsapp ಗೆ ಕೆಲವು ಹೆಂಗಸರ ಭಾವಚಿತ್ರಗಳನ್ನು ಕಳುಹಿಸಿ ಒಂದು ಗಂಟೆಗೆ ರೂ. 1500 ಮತ್ತು ಒಂದು ರಾತ್ರಿಗೆ ರೂ. 4000 ಗಳ ಹಣ ನೀಡಬೇಕಾಗುವುದು ಎಂದು ಹೇಳಿದ್ದಾರೆ.

ದೂರುದಾರರು ಗೂಗಲ್ ಪೇ ಮುಖಾಂತರ ರೂ. 1500 ಹಣವನ್ನು ಕಳುಹಿಸಿದ್ದು, ಅದೇ ವ್ಯಕ್ತಿ ಕರೆ ಮಾಡಿ ಕಾಳೇಘಾಟ್ ಲಾಡ್ಜ್ ಬಳಿ ಬಂದು ಲೋಕೇಷನ್ ಕಳುಹಿಸುವಂತೆ ಮತ್ತು ಯಾವ ಬಣ್ಣದ ಬಟ್ಟೆ ಹಾಕಿದ್ದೀರಾ ಎಂದು ತಿಳಿಸುವಂತೆ ಹೇಳಿದ್ದಾನೆ. ಆ ವ್ಯಕ್ತಿಯು ಹೇಳಿರುವಂತೆ ಕಾಳೇಘಾಟ್ ಲಾಡ್ಜ್ನ ಬಳಿ ಹೋಗಿ ಕರೆ ಮಾಡಿದಾಗ ಪುನಃ ಆನ್ಲೈನ್ನಲ್ಲಿ ಹಣ ಹಾಕಬೇಕು ಎಂದು ಹೇಳಿದ್ದಾರೆ.

ಇದರಿಂದ ಅನುಮಾನಗೊಂಡ ದೂರುದಾರ ಕಾಳೇಘಾಟ್ ಲಾಡ್ಜ್‌ಗೆ ತೆರಳಿ ರಿಸೆಪ್ಶನ್ನಲ್ಲಿ ಈ ಮೇಲಿನ ವಿಚಾರ ಹೇಳಿದಾಗ ಇಂತಹ ವ್ಯವಹಾರವೇ ಇಲ್ಲ. ಇದೇ ವಿಚಾರ ಹೇಳಿಕೊಂಡು 3 ರಿಂದ 4 ಜನ ಬಂದಿದ್ದರು. ನಿಮಗೆ ಯಾರೋ ಮೋಸ ಮಾಡಿದ್ದಾರೆ. ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಕಾಳೇಘಾಟ್ ಲಾಡ್ಜ್ ಸಿಬ್ಬಂದಿ ತಿಳಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೋಲಿಸರು ತನಿಖೆ ಮಾಡಿ ಹಾಸನ ಜಿಲ್ಲೆಯ ಸಕಲೇಶಪುರದ ಎಂಟು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈ ಕುರಿತು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ.

ಕ್ರೀಡೆ ಕಲಿಸುವ ನೆಪದಲ್ಲಿ ಹತ್ತಾರು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಯುವಕ‌ನ ಬಂಧನ

ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ವಿಕೃತಿ ಮೆರೆದ ಕಾಮುಕ

ಶಾಲಾ ಕೊಠಡಿಯಲ್ಲಿ ಹೆಡ್‌ ಮಾಸ್ಟರ್‌- ಲೇಡಿ ಟೀಚರ್‌ ರೊಮ್ಯಾನ್ಸ್‌

ಎದೆ ಹಾಲಿನ ಬ್ಯಾಂಕ್ ಮುಚ್ಚಿಸಿದ ಮುಸ್ಲಿಂ ಧರ್ಮ ಗುರುಗಳು

  ಮಂಗಳೂರು ತಲ್ಲಣಗೊಳಿಸಿದ್ದ ಚಡ್ಡಿ ಗ್ಯಾಂಗ್ ಬಂಧಿಸಿದ ಖಾಕಿ

TAGGED:massage fraud in the name of Kushalanagar girl: Eight arrested from Sakaleshpur
Share This Article
Facebook Twitter Copy Link Print
Previous Article ದಿನ ಭವಿಷ್ಯ 10-07-2024 … ಸಿಂಹ- ಸಂಗಾತಿ ಜತೆಗಿನ ಭಿನ್ನಾಭಿಪ್ರಾಯ ಹೆಚ್ಚಬಹುದು, ಮಕರ- ಅಪರಿಚಿತರೂ ಆಪ್ತರಂತೆ ವರ್ತಿಸಬಹುದು, ನಿಮ್ಮ ರಾಶಿಯಲ್ಲೇನಿದೆ?
Next Article ಸಮ್ಮತ ಲೈಂಗಿಕ ಸಂಪರ್ಕಕ್ಕೆ ವಯಸ್ಸಿನ ಮಿತಿ‌ ಏರಿಕೆ: ಜನರಿಗಿಲ್ಲ ಮಾಹಿತಿ- ಸುಪ್ರೀಂ ಕೋರ್ಟ್ ಹೇಳಿಕೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ಪ್ರಮುಖCrimeಕರ್ನಾಟಕ

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read
ಪ್ರಮುಖಕರ್ನಾಟಕ

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?