Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ದಿನ ಭವಿಷ್ಯ > ದಿನ ಭವಿಷ್ಯ 10-07-2024 … ಸಿಂಹ- ಸಂಗಾತಿ ಜತೆಗಿನ ಭಿನ್ನಾಭಿಪ್ರಾಯ ಹೆಚ್ಚಬಹುದು, ಮಕರ- ಅಪರಿಚಿತರೂ ಆಪ್ತರಂತೆ ವರ್ತಿಸಬಹುದು, ನಿಮ್ಮ ರಾಶಿಯಲ್ಲೇನಿದೆ?
ದಿನ ಭವಿಷ್ಯಪಂಚಾಂಗ

ದಿನ ಭವಿಷ್ಯ 10-07-2024 … ಸಿಂಹ- ಸಂಗಾತಿ ಜತೆಗಿನ ಭಿನ್ನಾಭಿಪ್ರಾಯ ಹೆಚ್ಚಬಹುದು, ಮಕರ- ಅಪರಿಚಿತರೂ ಆಪ್ತರಂತೆ ವರ್ತಿಸಬಹುದು, ನಿಮ್ಮ ರಾಶಿಯಲ್ಲೇನಿದೆ?

Share
6 Min Read
SHARE

newsics.com

ದಿನ ಭವಿಷ್ಯ

10 ಜುಲೈ 2024, ಬುಧವಾರ

ಮೇಷ
ಏಕಕಾಲಕ್ಕೆ ಒತ್ತಡವಾದಂತೆ ಅನ್ನಿಸುವುದು. ಇಂದು ನಿಮ್ಮಲ್ಲಿ ಹೋರಾಟದ ಸ್ವಭಾವವು ಎದ್ದು ತೋರುವುದು. ಎಲ್ಲದಕ್ಕೂ ವಿರೋಧ ಮಾಡುವಿರಿ. ಖುಷಿಯಲ್ಲಿ ಕೊಟ್ಟ ಮಾತಿನಿಂದ ನಿಮಗೆ ಇಂದು ತೊಂದರೆಯಾದೀತು. ಆರೋಗ್ಯದ ವ್ಯತ್ಯಾಸದಿಂದ ವಿಶ್ರಾಂತಿ ಪಡೆಯುವಿರಿ. ಎಷ್ಟೋ ಕಾಲದ ನಂತರ ನಿಮ್ಮ ನಡುವೆ ಆಪ್ತತೆ ಇರಲಿದೆ. ಖರ್ಚಿನ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ಅವಶ್ಯ. ಲಾಭವಿಲ್ಲದೆ ಇಂದು ನೀವು ಯಾವ ಕೆಲಸವನ್ನೂ ಮಾಡಲಾರಿರಿ. ನಿಮಗೆ ಪ್ರಶಂಸೆಯು ಸಿಗಬಹುದು. ಮೇಲಧಿಕಾರಿಗಳು ನಿಮ್ಮ ಮೇಲೆ ಕಣ್ಣಿಡುವರು. ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲ ಇರುವುದು. ವಿದೇಶ ಪ್ರಯಾಣಕ್ಕೆ ಮಿತ್ರನ ಸಹಕಾರ ಸಿಗಬಹುದು. ದೂರ ಪ್ರಯಾಣಕ್ಕೆ ವೈದ್ಯರು ನಿರ್ಬಂಧ ಹಾಕಬಹುದು. ದೌರ್ಬಲ್ಯವನ್ನೇ ಅಸ್ತ್ರವಾಗಿಸಿಕೊಂಡು ಲಾಭ ಪಡೆಯುವಿರಿ.

ವೃಷಭ

ನೀವು ಅದೃಷ್ಟವನ್ನು ನಿರೀಕ್ಷಿಸುತ್ತ ಸಮಯ ಕಳೆಯುವಿರಿ. ಯಾರನ್ನಾದರೂ ಮೆಚ್ಚಿಸಲು ನಿಮ್ಮ ಕೆಲಸವನ್ನು ಪಕ್ಕಕ್ಕಿರಿಸುವಿರಿ. ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳಲು ಸತತ ಪ್ರಯತ್ನ ಮಾಡುವಿರಿ. ನಿರುದ್ಯೋಗದಿಂದ ನಿಮಗೆ ಬಹಳ ಬೇಸರವಾದೀತು. ಎಲ್ಲರೂ ನಿಮ್ಮ ಬಗ್ಗೆ ಮಾತನಾಡಿಕೊಳ್ಳುವರು. ಇಷ್ಟವಿಲ್ಲದ ಕಡೆ ಹೋಗಬೇಕಾಗಬಹುದು. ಹಣದ ಹರಿವೂ ಸದ್ಯಕ್ಕೆ ಅಷ್ಟಕ್ಕಷ್ಟೇ ಇರಲಿದೆ. ಅನ್ಯರ ಜತೆ ಸಣ್ಣ ವಾಗ್ವಾದ ನಡೆಯಲಿದೆ. ಮಾತಿನ ಮೇಲೆ ಹಿಡಿತವಿರಲಿ. ಹಣದ ಹರಿವಿನಲ್ಲಿ ವ್ಯತ್ಯಾಸವಾಗಲಿದೆ. ನಿಮ್ಮ ಜವಾಬ್ದಾರಿಯ ಕೆಲಸವನ್ನು ಬೇಗ ಮುಗಿಸಿ ಇನ್ನೊಬ್ಬರಿಗೆ ಸಹಾಯ ಮಾಡಲಿರುವಿರಿ. ಅಕಸ್ಮಾತ್ ಬಂದ ಸುದ್ದಿಯು ನಿಮಗೆ ಆತಂಕವನ್ನು ಉಂಟುಮಾಡೀತು. ಕೃತಜ್ಞತೆಯನ್ನೂ ತೋರದಷ್ಟು ನಿಷ್ಕರುಣೆ ಇರುವುದು. ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ. ನಿಮ್ಮ ಮನಸ್ಸಿಗೆ ಹಿಡಿಸದ ವಿಚಾರಗಳ ಚರ್ಚೆಯಿಂದ ನೀವು ದೂರ ಇರುವಿರಿ. ಉಪಕಾರದ ಸ್ಮರಣೆಯಿಂದ ಸಹಕಾರ ನೀಡುವಿರಿ.

ಮಿಥುನ

ಇಂದು ನೀವು ಬಹಳ ಕಷ್ಟಪಟ್ಟು ಕೆಲಸ ಮಾಡಲಿದ್ದೀರಿ. ತಾತ್ಸಾರ ಮಾಡದೇ ಕ್ರಮಬದ್ಧವಾಗಿ ಶತ್ರುಗಳನ್ನು ಗೆಲ್ಲಿರಿ. ಕ್ರೀಡಾಪಟುಗಳು ತಮ್ಮ ಅವಿರತ ಶ್ರಮವನ್ನು ನಡೆಸಲಿದ್ದಾರೆ. ತಾಯಿಯಿಂದ ನಿಮಗೆ ಧನ ಲಾಭವಾಗಬಹುದು. ನಿಮ್ಮ ಕೆಲಸದಲ್ಲಿ ನಿಷ್ಠೆ ಇರಲಿದೆ. ಯಂತ್ರೋಪಕರಣಗಳ ಮೇಲೆ ಅಧಿಕ ಮೋಹವಿರಲಿದೆ. ಎಲ್ಲವನ್ನೂ ನೀವೊಬ್ಬರೇ ಅನುಭವಿಸಬೇಕು ಎಂಬ ಯೋಚನೆ ಇರಲಿದೆ. ಇಲ್ಲವಾದರೆ ಇತರರ ತೀರ್ಮಾನಕ್ಕೆ ಶರಣಾಗಬೇಕಾದೀತು. ವಾಹನ‌ ಸಂಚಾರದಲ್ಲಿ ಕಿರಿಕಿರಿ ಇರುವುದು. ಕುಟುಂಬದ ಕೆಲಸದಲ್ಲಿ ಭಾಗವಹಿಸುವಿರಿ. ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡಬಹುದು ಎಂದು ತೋರಿಸುವಿರಿ. ಯೋಗ್ಯರ ಸಹವಾಸ ಮಾಡಿ. ಭೂಮಿಯ ವ್ಯವಹಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ತಾಳ್ಮೆಯ ಅಗತ್ಯತೆ ಕುರಿತು ಮನವರಿಕೆ ಅಗತ್ಯ. ಇನ್ನೊಬ್ಬರು ಕೊಡುವ ತೊಂದರೆಯಿಂದ ನೀವು ಬೇಸತ್ತು ಹೋಗಬಹುದು. ನಿಮಗೆ ಹೂಡಿಕೆ ಮಾಡಲು ಯಾರಿಂದಲಾದರೂ ಒತ್ತಡ ಬರಬಹುದು.

ಸಿಂಹ
ವಿದ್ಯಾಭ್ಯಾಸದಲ್ಲಿ ಕಾರ್ಯಕ್ಷಮತೆ ಗಮನಾರ್ಹ ಸುಧಾರಣೆ ಕಾಣಲಿದೆ. ನಿಮ್ಮ ಅಂದಿನ ಸ್ಥಿತಿಯನ್ನು ನೆನೆಸಿಕೊಂಡು ಹೆಮ್ಮೆಪಡಲಿದ್ದೀರಿ. ಪಿತ್ರಾರ್ಜಿತ ಆಸ್ತಿ ಪಡೆಯಲು ಹವಣಿಸುವಿರಿ. ಸಂಗಾತಿ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಇದರ ಪ್ರಭಾವವು ಕಚೇರಿಯ ಕೆಲಸದಲ್ಲಿಯೂ ಕಾಣಬಹುದು. ದುರಭ್ಯಾಸವನ್ನು ಬಿಡುವ ಹಂಬಲ ಇರುವುದು. ಮಕ್ಕಳು ನಿಮ್ಮನ್ನು ಹಾಸ್ಯ ಮಾಡಿಯಾರು. ಅನ್ಯರ ಸಂಬಂಧವು ನಿಮಗೆ ಅಪಕೀರ್ತಿಯನ್ನು ತರಬಹುದು. ನಕಾರಾತ್ಮಕ ಆಲೋಚನೆಯು ನಿಮ್ಮನ್ನು ಹಿಮ್ಮುಖ ಮಾಡಬಹುದು. ಹಿರಿಯರ ವಿಚಾರದಲ್ಲಿ ಅನಾದರ ತೋರಿದಂತೆ ಕಾಣಿಸುವುದು. ಕುಟುಂಬವು ನಿಮ್ಮ ಜತೆಗಿದೆ ಎಂಬ ಧೈರ್ಯವಿರಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗುವುದು. ಸಂಗಾತಿಯನ್ನು ನೀವು ಮರೆತು ವ್ಯವಹರಿಸುವಿರಿ. ಧಾರ್ಮಿಕ ಆಸಕ್ತಿಯು ಹೆಚ್ಚಾಗುವುದು.

ಕನ್ಯಾ
ನಿಮ್ಮ ಸಂಗಾತಿ ಜತೆಗಿನ ಭಿನ್ನಾಭಿಪ್ರಾಯದಿಂದ ದ್ವೇಷ ಉಂಟಾಗಬಹುದು. ಇಂದಿನ ನಿಮ್ಮ ಕೆಲಸವು ಶಿಸ್ತಿನಿಂದ ಇದ್ದರೂ ನಿಮ್ಮ ಜತೆಗಾರರು ಅದನ್ನು ಮೂದಲಿಸಲಿದ್ದಾರೆ. ನಿಮ್ಮ ಸಲಹೆಗಳನ್ನು ನಿಮ್ಮವರು ತೆಗೆದುಕೊಳ್ಳದೇ ಇರುವುದು ನಿಮಗೆ ಸಿಟ್ಟೂ ಬೇಸರವನ್ನೂ ಉಂಟುಮಾಡಬಹುದು. ಸತ್ಯ ಹೇಳುವ ಮನಸ್ಸಿದ್ದರೂ ನಿಮಗೆ ಕೆಲವು ತೊಂದರೆ ಎದುರಾಗುವುದರಿಂದ ಅದನ್ನು ಗೌಪ್ಯವಾಗಿ ಇಡುವಿರಿ. ಧಾರ್ಮಿಕ ಆಚರಣೆಗಳನ್ನು ಮಾಡಲು ಹೆಚ್ಚು ಆಸಕ್ತಿ ತೋರಿಸುವಿರಿ. ಇತರರ ಸ್ವಭಾವವನ್ನು ನೀವು ಆಡಿಕೊಳ್ಳುವುದು ಬೇಡ. ಬಂಧುಗಳ ಸಹವಾಸದಿಂದ ಬದಲಾಗುವ ಸಾಧ್ಯತೆ ಇದೆ. ನೀವು ಹೊಸ ಹೂಡಿಕೆ ಮಾಡಬೇಕಾದರೆ ಅದು ಶುಭವಾಗುತ್ತದೆ. ಕುಟುಂಬದಲ್ಲಿಯೂ ಶಾಂತಿ ಮತ್ತು ಸಂತೋಷ ಇರುತ್ತದೆ. ನಿಮಗಿಂತ ಭಿನ್ನವಾದ ವ್ಯಕ್ತಿಗಳ ಬಗ್ಗೆ ಯೋಚಿಸದೇ ನಿಮ್ಮ ನಿಲುವೇ ಸರಿ ಎಂಬಂತೆ ವರ್ತಿಸುವಿರಿ. ಬೇಡದ ವಿಚಾರಗಳ‌ ಕಡೆ ಹೆಚ್ಚು ಗಮನ ನೀಡದಿರಿ.

ತುಲಾ
ಭೂಮಿಯ ವ್ಯವಹಾರವನ್ನು ಸದ್ಯಕ್ಕೆ ನಿಲ್ಲಿಸಿ, ಕೆಲವು ದಿನಗಳ ನಂತರ ನಡೆಸುವುದು ಉತ್ತಮ. ಹೊಸತನವನ್ನು ಇಷ್ಟಪಟ್ಟು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ನಿಮ್ಮದಾದ ಆತ್ಮೀಯ ವೃತ್ತವನ್ನು ನಿರ್ಮಿಸಿಕೊಳ್ಳುವಿರಿ. ಕಳ್ಳತನದ ಅಪವಾದಗಳು ನಿಮಗೆ ಚಿಂತನೆಯನ್ನು ಕೊಡಬಹುದು. ವ್ಯಾಪಾರದಲ್ಲಿ ಮೋಸದಿಂದ ನಷ್ಟವಾಗಬಹುದು. ಹೆಚ್ಚು ಪರಿಶ್ರಮದಿಂದ ಕೆಲಸ ಮಾಡಬೇಕಾದೀತು. ವಿದ್ಯಾರ್ಥಿಗಳಿಗೆ ಓದುವಂತೆ ಒತ್ತಾಯ ಮಾಡಬೇಕಾದೀತು. ಇಂದಿ‌ನ ಕೋಪದಿಂದ ಏನನ್ನೂ ಸಾಧಿಸಲು ಸಾಧ್ಯವಾಗದು. ಹೂಡಿಕೆ ಹಣವನ್ನು ತೆಗೆಯುವ ನಿರ್ಧಾರವನ್ನು ಮಾಡಬೇಕಾದೀತು. ಊಹೆಯು ದಿಕ್ಕು ತಪ್ಪುವ ಸಾಧ್ಯತೆ ಇದೆ. ನಿಮ್ಮ‌ ರಕ್ಷಣೆಯ ಬಗ್ಗೆ ಕಾಳಜಿ ಇರಲಿ. ಕೋಪವು ನಿಮ್ಮ ಇಂದಿನ ಕೆಲಸವನ್ನು ಕೆಡಿಸಬಹುದು. ನಿಮ್ಮ ಪ್ರಾಮಾಣಿಕತೆಯು ಇತರರಿಗೆ ಇಷ್ಟವಾಗುವುದು. ಪಡೆದುದನ್ನು ನಿಯತ್ತಿನಿಂದ‌ ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ.

ವೃಶ್ಚಿಕ
ಯಾರ ಬಳಿಯಾದರೂ ಮಾತನಾಡಲು ಸಂಕೋಚ ಇರುವುದು. ಚಿಂತೆಯು ನಿಮ್ಮ ಮಾನಸಿಕ ಸ್ಥಿತಿಯನ್ನು ದುರ್ಬಲ ಮಾಡುವುದು. ಜೋಪಾನವಾಗಿ ಇರಿಸಿಕೊಂಡಿರುವ ನಿಮ್ಮ ಅಮೂಲ್ಯವಾದ ವಸ್ತುಗಳು ಕಣ್ಮರೆಯಾದದ್ದು ಇಂದು ತಿಳಿಯಲಿದೆ. ಆಸ್ತಿಯ ವಿಚಾರಕ್ಕೆ ಸಹೋದರರ ನಡುವೆ ವೈಮನಸ್ಯ ಉಂಟಾಗಬಹುದು. ದೂರ ಪ್ರಯಾಣದಿಂದ ಆರೋಗ್ಯವು ಹಾಳಾಗುವುದು. ಅಲ್ಪ ಜ್ಞಾನಿಗಳ ಸಹವಾಸದಿಂದ ನಿಮ್ಮ ಮರ್ಯಾದೆ ಹೋಗಬಹುದು. ಸಮ್ಮಾನಗಳು ಸಂತೋಷವನ್ನು ತರುವುದು. ವಿದೇಶದಲ್ಲಿ ಇದ್ದವರಿಗೆ ಸ್ವದೇಶಕ್ಕೆ ಹೋಗಲು ಅವಕಾಶ ಸಿಗಲಿದೆ. ತಪ್ಪು ನಿರ್ಧಾರಗಳನ್ನು ಮಾಡಿ ಕಷ್ಟಪಡಬೇಕಾದೀತು. ಅಧಿಕಾರದ ಅಸೆಯಿಂದ ನಿಮ್ಮ ವ್ಯಕ್ತಿತ್ವ ಬದಲಾಗಬಹುದು. ವ್ಯವಧಾನದ ಕೊರತೆಯನ್ನು ಎದುರಿಸುವಿರಿ. ನಿಮ್ಮ ಕೆಲಸವಾಗಲು ಯಾರನ್ನಾದರೂ ದೂರ ಮಾಡುವಿರಿ. ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುವರು. ಭೂಮಿಯಿಂದ ಸಂಪತ್ತು ಪಡೆಯುವಿರಿ.

ಧನು
ಸಜ್ಜನರ ಸಹವಾಸದಿಂದ ಒಳ್ಳೆಯವರೆನಿಸಿಕೊಳ್ಳುವಿರಿ. ನಿಮ್ಮ ಅಗತ್ಯಗಳ ಯಾದಿಯು ತುಂಬಾ ದೊಡ್ಡದಿದ್ದು ಅದನ್ನು ಪೂರೈಸಲು ಸತತ ಪ್ರಯತ್ನ ಮಾಡುವಿರಿ. ಸ್ವಾಭಿಮಾನಕ್ಕೆ ಧಕ್ಕೆಯಾಗಿ ಮನಸ್ಸಿನಲ್ಲಿ ಬಹಳ ಹಿಂಸೆ ಅನುಭವಿಸಬಹುದು. ಸ್ವಂತಿಕೆ ಉಳಿಸಿಕೊಳ್ಳುವುದು ಕಷ್ಟವಾದೀತು. ದಾಂಪತ್ಯದಲ್ಲಿ ಸುಖವಿದ್ದರೂ ಸಣ್ಣ ಕಿರಿಕಿರಿಗಳು ಬಂದು ಹೋಗಬಹುದು. ದಿನಚರ್ಯೆಯಲ್ಲಿ ವ್ಯತ್ಯಾಸವನ್ನು ಇಂದು ಕಾಣಬಹುದಾಗಿದೆ. ಹಠ ಸ್ವಭಾವವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಕ್ಷಣದ ಕೋಪವು ನಿಮ್ಮ ಉತ್ಸಾಹವನ್ನು ಕುಂದಿಸೀತು. ನಿಮ್ಮ ಕೆಲಸವೆಲ್ಲವೂ ಪರರ ಉಪಕಾರಕ್ಕೇ ಆಗುವುದು. ಮಾತಿನಲ್ಲಿ ಕಠೋರತಯು ಕಡಿಮೆಯಾದರೆ ಒಳ್ಳೆಯದು. ಇಂದು ಪೋಷಕರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅಪರಿಚಿತರ ಮಾತನ್ನು ನೀವು ನಂಬುವಿರಿ. ಪರೀಕ್ಷೆಯ ಭಯವನ್ನು ನೀವು ಬಿಡಬೇಕು.

ಮಕರ
ಅಪರಿಚಿತರೂ ಆಪ್ತರಂತೆ ವರ್ತಿಸಬಹುದು. ನಿಮ್ಮ ಎಲ್ಲ ಗೌಪ್ಯತೆಯನ್ನು ಹೇಳುವಿರಿ. ಹಗುರವಾದ ಮಾತುಗಳು ನಿಮಗೆ ಅಪಮಾನವನ್ನು ಮಾಡುವುದು. ಯಾರನ್ನೂ ಹಗುರವಾಗಿ ಕಾಣುವುದು ಬೇಡ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಶ್ಯಕತೆ ಇಲ್ಲ. ಅದು ತಾನಾಗಿಯೇ ಗೊತ್ತಾಗಲಿದೆ. ಗೌರವಯುತವಾಗಿ ಎಲ್ಲರ ಜತೆ ನಡೆದುಕೊಳ್ಳುವಿರಿ. ಸಮಯಕ್ಕೆ ಹೆಚ್ಚು ಮಹತ್ವವನ್ನು ನೀವು ಕೊಡಲಿದ್ದೀರಿ. ಕಛೇರಿಯ ಕೆಲಸವೇ ಇಂದು ಅಧಿಕವಾದೀತು. ಅನ್ಯಾಯವನ್ನು ಖಂಡಿಸುವ ಮಾನಸಿಕತೆ ಇರಲಿದೆ. ಇನ್ನೊಬ್ಬರ ಸ್ಥಿತಿಯನ್ನು ಕಂಡು ನೀವು ನೆಮ್ಮದಿಯಿಂದ ಇರುವಿರಿ. ಸಂಗಾತಿಯಿಂದ ಅನಿರೀಕ್ಷಿತ ಸಮಾಚಾರ ಬರಬಹುದು. ಏನನ್ನೂ ಹೇಳದೇ ನಿಮ್ಮಷ್ಟಕ್ಕೆ ಗಮನಿಸಿ. ಇಂದು ಅನಗತ್ಯ ವಸ್ತುಗಳಿಗಾಗಿ ವ್ಯರ್ಥವಾಗಿ ಖರ್ಚಾಗಬಹುದು. ಅದನ್ನು ತಪ್ಪಿಸಿಕೊಳ್ಳುವುದು ಉತ್ತಮ. ನೀವು ದೈಹಿಕಪೀಡೆಯಿಂದ ಬಳಲುತ್ತಿದ್ದರೆ ದುಃಖವು ಹೆಚ್ಚಾಗಬಹುದು.

ಕುಂಭ
ನಿಮ್ಮ ಮಾತುಗಳು ಸಂಬಂಧದಲ್ಲಿ ಒಡಕು ತರುವಂತಹವು ಆಗಿರುತ್ತವೆ. ಒತ್ತಡದಿಂದ ನಿಮಗೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಇಲ್ಲವಾದರೆ ಮಾಡುವ ಕೆಲಸವು ಅಶಿಸ್ತಿನಿಂದ ಇರಬಹುದು. ನಿರೀಕ್ಷೆ ಮೀರಿದ ಅನುಕೂಲತೆಗಳು ಇದ್ದರೂ ಸಂತೃಪ್ತಿಯು ಇರಲಾರದು. ಪ್ರಣಯದಲ್ಲಿ ಅತಿಯಾದ ಆಸಕ್ತಿಯೂ ಇರಲಾರದು. ಉತ್ಪಾದನಾ ಕ್ಷೇತ್ರದಲ್ಲಿ ಸಾಧಿಸುವ ಯೋಜನೆ ಇರಲಿದೆ. ಹಳೆಯ ಘಟನೆಯು ಇಂದು ಕಾರಣಾಂತರದಿಂದ ನೆನಪಾಗಿ ಕಾಡಲಿದೆ. ದೇಶವನ್ನು ಸುತ್ತುವ ಮನಸ್ಸಾದೀತು. ವೈದ್ಯಕೀಯ ವಿಚಾರದಲ್ಲಿ ನಿಮಗೆ ಕೆಲವು ಕುತೂಹಲವು ಉಂಟಾಗಬಹುದು. ಆಪ್ತರ ಜತೆ ಸಮಾಲೋಚನೆ ನಡೆಸುವಿರಿ. ಹಳೆಯ ವಸ್ತುಗಳ ಬಗ್ಗೆ ತಾತ್ಸಾರ ಭಾವ ಬರಬಹುದು. ಇಂದು ನಿಮ್ಮ ಕೆಲಸವನ್ನು ಬದಲು ಮಾಡಿಕೊಳ್ಳಲಿದ್ದೀರಿ. ಶುಭ ಸಮಾರಂಭದಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ. ಅಧಿಕಾರಕ್ಕೆ ಸಂಬಂಧಿಸಿದಂತೆ ಮಿತ್ರನಿಂದ ನಿಮಗೆ ವಂಚನೆಯಾಗಿರುವುದು ಗೊತ್ತಾಗುವುದು.

ಮೀನ

ನಿಮಗೆ ಆಗದವರ ಬಗ್ಗೆ ಕಿವಿಚುಚ್ಚುವುದು ಬೇಡ. ಹಣದ ಕೊರತೆಯಿಂದ ಸಾಲ ಮಾಡುವ ಸಾಧ್ಯತೆಯಿದೆ. ವಾಹನ ಖರೀದಿಯ ವಿಚಾರದಲ್ಲಿ ಗೊಂದಲಗಳು ಬರಬಹುದು. ಸಂತೋಷವನ್ನು ಅನುಭವಿಸುವ ತಾಳ್ಮೆ ಇರದು. ಹಣಕಾಸಿನ ವ್ಯವಹಾರದಲ್ಲಿ ನಿಮಗೆ ಹೆಚ್ಚು ಸಂದೇಹಗಳು ಬರಬಹುದು. ಅತ್ಯಾಪ್ತರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮನೋರಂಜನೆಯನ್ನು ಇಂದು ಹೆಚ್ಚು ಇಷ್ಟಪಡುವಿರಿ. ಕೇಳಿ ಬಂದವರಿಗೆ ಯಥಾಯೋಗ್ಯ ಸಹಾಯ ಮಾಡುವಿರಿ. ಕೋಪ ಕಡಿಮೆ ಮಾಡಿಕೊಂಡಿದ್ದರ ಪರಿಣಾಮ ನಿಮ್ಮ ಆಪ್ತರ ಸಂಖ್ಯೆ ಹೆಚ್ಚಾಗಿದೆ. ಧಾರ್ಮಿಕ ಆಚರಣೆಯಿಂದ ಸಂಕಷ್ಟಗಳು ದೂರಾಗುವ ನಂಬಿಕೆ ಇರಲಿದೆ. ತಂದೆಯಿಂದ ದೂರವಿರುವ ಯೋಚನೆ ಮಾಡುವಿರಿ. ಸರ್ಕಾರದ ಕಡೆಯಿಂದ ಆಗುವ ನಿಮ್ಮ ಕೆಲಸವನ್ನು ಪ್ರಭಾವಿ ವ್ಯಕ್ತಿಗಳ ಮೂಲಕ ಮುನ್ನಡೆಸುವಿರಿ.

ಶುಭೋದಯ… ಕ್ರೋಧಿ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಚತುರ್ಥಿ/ ಪಂಚಮಿ, ಬುಧವಾರ 10-07-2024

ಕರ್ಕಾಟಕ ರಾಶಿಗೆ ಸೂರ್ಯನ ಸಂಚಾರ: ಜು.16ರಿಂದ ಈ ರಾಶಿಗಳವರಿಗೆ ಭಾರೀ ಅದೃಷ್ಟ

TAGGED:Day Prediction 10-07-2024 ... what is your zodiac sign?
Share This Article
Facebook Twitter Copy Link Print
Previous Article ಬಹುಭಾಷಾ ಗಾಯಕಿ ಉಷಾ ಉತ್ತುಪ್ ಎರಡನೇ ಪತಿ ಜಾನಿ ಚಾಕೋ ನಿಧನ
Next Article ಕುಶಾಲನಗರ ಹುಡುಗಿ ಹೆಸರಲ್ಲಿ ಸೆಕ್ಸ್ ಮಸಾಜ್‌ ವಂಚನೆ: ಸಕಲೇಶಪುರದ ಎಂಟು ಮಂದಿ ಬಂಧನ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

Today’s Horoscope ಇಂದಿನ ರಾಶಿ ಭವಿಷ್ಯ 01-06-2026, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

4 Min Read
ಜ್ಯೋತಿಷ್ಯಪಂಚಾಂಗಪ್ರಮುಖ

VASTU ಈ ಗಿಡಗಳನ್ನು ಯಾವತ್ತೂ ಗಿಫ್ಟ್ ಕೊಡಬೇಡಿ, ಇದರಿಂದ ಅಪಾಯವೇ ಹೆಚ್ಚು!

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

ASTRO ಇಂದು ಸಿದ್ಧಿ ಯೋಗ, ಶಿವ ಯೋಗ: ಈ ಏಳು ರಾಶಿಗಳ ಜನರಿಗೆ ಧನಪ್ರಾಪ್ತಿ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 31-05-2026, ಭಾನುವಾರ, ಇಂದು ಹೇಗಿದೆ ನಿಮ್ಮ ಅದೃಷ್ಟ?

4 Min Read

Social Networks

Facebook-f Instagram Twitter
Welcome Back!

Sign in to your account

Lost your password?