newsics.com
ಅಲ್ವರಾ(ರಾಜಸ್ಥಾನ): ರಸ್ತೆ ಅಪಘಾತವೊಂದರಲ್ಲಿ ಮಾವ ಮತ್ತು ಸೊಸೆ ಮೃತಪಟ್ಟಿದ್ದು, ಆರು ತಿಂಗಳ ಮಗು ತಾಯಿಗಾಗಿ ಹಂಬಲಿಸುತ್ತಿರುವ ಹೃದಯವಿದ್ರಾವಕ ಘಟನೆ ಅಲ್ವರಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಒಂದೇ ದಿನ ಎರಡು ಜೀವ ಕಳೆದುಕೊಂಡ ಒಂದೇ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಮಾವ ಮತ್ತು ಸೊಸೆ ಬೈಕ್‌ನಲ್ಲಿ ರಸ್ತೆ ದಾಟುತ್ತಿರುವಾಗ ವೇಗವಾಗಿ ಬಂದ ವಾಹನವೊಂದು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಮೃತರಾಗಿದ್ದಾರೆ. ಮಹಿಳೆಯ ಆರು ತಿಂಗಳ ಮಗು ತಾಯಿ ಮಡಿಲಿಗಾಗಿ ಅಳುತ್ತಿದೆ.
ರಾಜಸ್ಥಾನದ ಅಲ್ವರಾ ಜಿಲ್ಲೆಯ ಹರ್ಸೌಲ್ ಠಾಣಾ ಕ್ಷೇತ್ರದ ಮಾಜರಾ ಗ್ರಾಮದ 50 ವರ್ಷದ ಸುಭಾಷ್ ಯಾದವ್ ಮತ್ತು 23 ವರ್ಷದ ಪೂಜಾ ಯಾದವ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ರಾಜ್ಯ ಹೆದ್ದಾರಿ-52 ಕ್ರಾಸ್ ಮಾಡುತ್ತಿದ್ದಾಗ ಅಪರಿಚಿತ ಕಾರು ಮಾವ-ಸೊಸೆಯಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಳಿಕ ಬೈಕನ್ನು ಸುಮಾರು 100 ಮೀಟರ್‌ವರೆಗೆ ಎಳೆದುಕೊಂಡು ಹೋಗಿದೆ.
ಪೂಜಾ ಯಾದವ್ ಬಿಎ ಅಂತಿಮ ಪರೀಕ್ಷೆ ಬರೆಯಲು ಮಾವನ ಜತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಎರಡು ವರ್ಷದ ಹಿಂದೆ ಸುಭಾಷ್ ಯಾದವ್ ಪುತ್ರ ಸುಕೇಶ್ ಜತೆ ಪೂಜಾ ಮದುವೆಯಾಗಿತ್ತು. ಮದುವೆ ಬಳಿಕವೂ ಪೂಜಾ ತಮ್ಮ ಶಿಕ್ಷಣ ಮುಂದುವರಿಸಿದ್ದರು. ಆರು ತಿಂಗಳ ಹಿಂದೆಯಷ್ಟೇ ಮುದ್ದಾದ ಮಗುವಿನ ತಾಯಿ ಆಗಿದ್ದರು. ಪೂಜಾ ಪತಿ ಸುಕೇಶ್ ಕೃಷಿ ಕೆಲಸದ ಜತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಸುಭಾಷ್ ಯಾದವ್ ಸಹ ಕೃಷಿ ಜತೆ ಎಲ್‌ಐಸಿ ಏಜೆಂಟ್ ಕೆಲಸ ಮಾಡಿಕೊಂಡಿದ್ದರು.
ಕರ್ಕಾಟಕ ರಾಶಿಗೆ ಸೂರ್ಯನ ಸಂಚಾರ: ಜು.16ರಿಂದ ಈ ರಾಶಿಗಳವರಿಗೆ ಭಾರೀ ಅದೃಷ್ಟ
ಮನೆಗಾಗಿ ಯುವತಿಯ ಪ್ರೇಮದ ನಾಟಕ! 20 ಯುವಕರ ಜತೆ ಡೇಟಿಂಗ್, ಗಿಫ್ಟ್ ಪಡೆದ ಐಫೋನ್ ಮಾರಿ ಸ್ವಂತ ಮನೆ ಖರೀದಿ!