newsics.com
ಹೈದರಾಬಾದ್: ನಾಗ್ ಅಶ್ವಿನ್ ನಿರ್ದೇಶನದ ಮೈಥೋಲಾಜಿಕಲ್ ಸೈನ್ಸ್ ಫಿಕ್ಷನ್ ಸಿನಿಮಾ ”ಕಲ್ಕಿ 2898 ಎಡಿ” ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ಸ್ಟಾರ್ ನಟರ ಸಿನಿಮಾದ ಬಾಕ್ಸ್ ಆಫೀಸ್ ಪ್ರಯಾಣ ಉತ್ತಮವಾಗಿ ಸಾಗಿದ್ದು,ವಿಶ್ವಾದ್ಯಂತ ಸಿನಿಮಾ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರವನ್ನು ನೋಡಲು ಜಪಾನ್ನಿಂದ ಫ್ಯಾನ್ಸ್ ಆಗಮಿಸಿದ್ದರು.
ಪ್ರಭಾಸ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದು. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಕೇವಲ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ‘ಕಲ್ಕಿ 2898 ಎಡಿ’ ಸಿನಿಮಾ ವೀಕ್ಷಿಸಲು ಜಪಾನಿನ ಕೆಲವು ಪ್ರಭಾಸ್ ಅಭಿಮಾನಿಗಳು ಭಾರತಕ್ಕೆ ಆಗಮಿಸಿದ್ದಾರೆ. ಇದು ಪ್ರಭಾಸ್ ಅಭಿಮಾನಿ ಬಳಗ ಎಷ್ಟು ದೊಡ್ಡದಿದೆ ಎಂಬುದಕ್ಕೆ ಕೈಗನ್ನಡಿ ಹಿಡಿದಹಾಗಿದೆ. ಸದ್ಯ ಈ ಫೋಟೋಗಳು ವೈರಲ್ ಆಗುತ್ತಿವೆ.
ಕಲ್ಕಿ 2898 ಎಡಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರವನ್ನು ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದವರು ನಟಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಮುಖ ಕಲಾವಿದರು ಅತಿಥಿ ಪಾತ್ರ ಮಾಡಿದ್ದಾರೆ. ಹೀಗಾಗಿ ‘ಕಲ್ಕಿ 2898 ಎಡಿ’ ಸಿನಿಮಾದ ಕ್ರೇಜ್ ದೊಡ್ಡದಾಗಿದೆ. ‘ಕಲ್ಕಿ 2898 ಎಡಿ’ ಚಿತ್ರವನ್ನು ಜಪಾನಿನ್ನಿಂದ ಆಗಮಿಸಿ ವೀಕ್ಷಿಸಿದ್ದಾರೆ.
ಜಪಾನ್ನ ಮೂವರು ಹೈದರಾಬಾದ್ಗೆ ಬಂದಿದ್ದಾರೆ. ಈ ವೇಳೆ ಅವರು ಭೈರವ ಮಾನ್ಸ್ಟರ್ ಟ್ರಕ್ ಎದುರು ಪೋಸ್ಟರ್ ಹಿಡಿದು ನಿಂತಿದ್ದಾರೆ. ಆ ಬಳಿಕ ಅವರು ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ಅವರು ಭರ್ಜರಿ ಖುಷಿಪಟ್ಟಿದ್ದಾರೆ. ನಂತರ ಅವರು ಜಪಾನ್ಗೆ ಮರಳಿದ್ದಾರೆ. ಪ್ರಭಾಸ್ ಅವರಿಗೆ ಎಷ್ಟೊಂದು ದೊಡ್ಡ ಅಭಿಮಾನಿ ಬಳಗ ಇದೆ ಎಂದು ಎಲ್ಲರೂ ಅಚ್ಚರಿ ಹೊರಹಾಕಿದ್ದಾರೆ.
ಹಾಸನದಲ್ಲಿ ಮಾರಕ ಡೆಂಗ್ಯೂ ಜ್ವರ ಆರ್ಭಟ: ಶಂಕಿತ ಡೆಂಗ್ಯೂಗೆ ಬಾಲಕಿ ಬಲಿ
UK Election ಲೇಬರ್ ಪಾರ್ಟಿಗೆ ಪ್ರಚಂಡ ಮುನ್ನಡೆ, ಕನ್ಸರ್ವೇಟಿವ್ ಪಕ್ಷ ಹೀನಾಯ ಸೋಲು, ಸ್ವಾರಿ ಎಂದ ರಿಷಿ ಸುನಕ್