ಹಾಸನದಲ್ಲಿ ಮಾರಕ ಡೆಂಗ್ಯೂ ಜ್ವರ ಆರ್ಭಟ: ಶಂಕಿತ ಡೆಂಗ್ಯೂಗೆ ಬಾಲಕಿ ಬಲಿ

newsics.com ಹಾಸನ: ಹಾಸನ ಜಿಲ್ಲೆಯಲ್ಲಿ ಮಾರಕ ಡೆಂಗ್ಯೂ ಜ್ವರ ಆರ್ಭಟ ಮುಂದುವರಿದಿದ್ದು, ಶಂಕಿತ ಡೆಂಗ್ಯೂವಿಗೆ ಮತ್ತೊಬ್ಬ ಬಾಲಕಿ ಬಲಿಯಾಗಿದ್ದಾಳೆ. ಈ ಮೂಲಕ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂವಿನಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ. ಮೃತ ಬಾಲಕಿಯನ್ನು ಹೊಳೆನರಸೀಪುರ ತಾಲ್ಲೂಕಿನ, ದೊಡ್ಡಳ್ಳಿ ಗ್ರಾಮದ ಸಮೃದ್ಧಿ (8) ಎಂದು ಗುರುತಿಸಲಾಗಿದೆ. ಬಾಲಕಿ ಗ್ರಾಮದ ರಮೇಶ್-ಅಶ್ವಿನಿ ದಂಪತಿಯ ಪುತ್ರಿಯಾಗಿದ್ದು, ಕಳೆದ 4 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಮೂರು ದಿನದ ಹಿಂದೆ ಬಾಲಕಿಯನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಾಣದ … Continue reading ಹಾಸನದಲ್ಲಿ ಮಾರಕ ಡೆಂಗ್ಯೂ ಜ್ವರ ಆರ್ಭಟ: ಶಂಕಿತ ಡೆಂಗ್ಯೂಗೆ ಬಾಲಕಿ ಬಲಿ