newsics.com/ನ್ಯೂಸಿಕ್ಸ್
ಯಾವುದಾದರೂ ಹೀರೋ ಜೊತೆ ಈಗಾಗಲೇ ಕೆಲಸ ಮಾಡಿದ್ದರೆ ಅಥವಾ ಮುಂದೆ ಕೆಲಸ ಮಾಡುವ ಒಪ್ಪಂದ ಆಗಿದ್ದರೆ ಮಾತ್ರ ನಿರ್ಮಾಣ ಸಂಸ್ಥೆಗಳು ಆ ಹೀರೋಗಳಿಗೆ ಬರ್ತ್ಡೇ ವಿಶ್ ಮಾಡುತ್ತಾರೆ. ಜೂ.ಎನ್‌ಟಿಆರ್ ಜೊತೆ ಸಿನಿಮಾ ಮಾಡೋದಾಗಿ ಮೈತ್ರಿ ಮೂವೀ ಮೇಕರ್ಸ್ ಈ ಮೊದಲೇ ಘೋಷಣೆ ಮಾಡಿತ್ತು. ಅಂದಿನಿಂದಲೂ ಜೂ.ಎನ್‌ಟಿಆರ್ ಜನ್ಮದಿನಕ್ಕೆ ಈ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡುತ್ತಾ ಬರುತ್ತಿದೆ. ಈಗ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಜೂ.ಎನ್ಟಿಆರ್ಗೆ ಜನ್ಮದಿನದ ವಿಶ್ ಬಂದಿದ್ದು ಸಾಕಷ್ಟು ಕುತೂಹಲ ಮೂಡಿದೆ.
ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ, ಒಂದು ಡ್ರ್ಯಾಗನ್ ಮೇಲೇರುತ್ತದೆ. ಒಂದು ಸಾಮೂಹಿಕ ಘರ್ಜನೆ. ಎಂತಹ ಸ್ಫೋಟಕ ನೋಟ, ಪ್ರತಿ ಫ್ರೇಮ್ ಮಾಸ್ ಮತ್ತು ಮ್ಯಾಜಿಕ್ ಅನ್ನು ತೋರಿಸುತ್ತಿದೆ. ಡೆವಿಲ್ ಎನ್‌ಟಿಆರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.. ಎಂದು ಬರೆದುಕೊಂಡಿದೆ. ಮೇಲ್ನೋಟಕ್ಕೆ ಇದು ಕೇವಲ ಜನ್ಮದಿನದ ಶುಭಾಶಯದ ಪೋಸ್ಟ್‌ನಂತೆ ಕಂಡರೂ, ಇದರ ಹಿಂದೆ ತೆರೆಮರೆಯಲ್ಲಿ ದೊಡ್ಡದೊಂದು ಸಿನಿಮೀಯ ಲೆಕ್ಕಾಚಾರ ಅಡಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಸದ್ಯ ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ‘ಡ್ರ್ಯಾಗನ್’ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಹೀಗಿದ್ದರೂ, ಹೊಂಬಾಳೆ ಫಿಲ್ಮ್ಸ್ ಈ ಚಿತ್ರದ ಗ್ಲಿಂಪ್ಸ್ ಅನ್ನು ಶೇರ್ ಮಾಡಿ ಸಂಭ್ರಮಿಸಿದೆ. ಈ ಪೋಸ್ಟ್ ನೋಡಿದ ಪ್ರೇಕ್ಷಕರು ಮತ್ತು ಟ್ರೇಡ್ ಅನಾಲಿಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಒಂದು ಪ್ರಶ್ನೆಯನ್ನು ಹುಟ್ಟಾಕಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಜೂನಿಯರ್ ಎನ್‌ಟಿಆರ್ ಸಿನಿಮಾ ಮಾಡಬಹುದೇ? ಅನ್ನೋ ಅನುಮಾನವಂತೂ ಮೂಡಿದೆ.
https://www.instagram.com/p/DYi-wPGR0Mu/?igsh=dTR3YnA4Y2h2ZG9o
ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ಕಡ್ಡಾಯ : ಸುಪ್ರೀಂಕೋರ್ಟ್ ಆದೇಶ