newsics.com/ನ್ಯೂಸಿಕ್ಸ್
ನವದೆಹಲಿ: ದುಡ್ಡಿಲ್ಲ ಎಂಬ ಕಾರಣಕ್ಕೆ ಬಡವರಿಗೆ ಚಿಕಿತ್ಸೆ ಸಿಗದೇ ಇರಬಾರದು. ಸಾಮಾನ್ಯ ಜನರ ಆರೋಗ್ಯದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಖಾಸಗಿ ಆಸ್ಪತ್ರೆಗಳ ವಿರುದ್ಧ ಗುಡುಗಿದೆ.
ಸರ್ಕಾರದಿಂದ ಕಡಿಮೆ ಬೆಲೆಗೆ ಜಾಗ (ಭೂಮಿ) ಪಡೆದುಕೊಂಡು, ಈಗ ಬಡವರಿಗೆ ಉಚಿತ ಸೇವೆ ನೀಡಲು ಹಿಂದೇಟು ಹಾಕುತ್ತಿರುವ ಆಸ್ಪತ್ರೆಗಳ ಆಡಳಿತ ಮಂಡಳಿಗೆ ನ್ಯಾಯಾಲಯ ಗಂಭೀರ ಎಚ್ಚರಿಕೆ ನೀಡಿದೆ.
ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ವರ್ತಿಸುತ್ತಿರುವ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ಸರ್ಕಾರದ ಸಬ್ಸಿಡಿ ದರದಲ್ಲಿ ಜಾಗ ಪಡೆದ ಎಲ್ಲಾ ಕಾರ್ಪೊರೇಟ್ ಮತ್ತು ಖಾಸಗಿ ಆಸ್ಪತ್ರೆಗಳು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು
25% ಒಪಿಡಿ ಉಚಿತ: ಹೊರರೋಗಿ ವಿಭಾಗಕ್ಕೆ (OPD) ಬರುವ ಶೇ. 25 ರಷ್ಟು ಬಡ ರೋಗಿಗಳಿಗೆ ಸಂಪೂರ್ಣ ಉಚಿತ ತಪಾಸಣೆ ನಡೆಸಬೇಕು.
10% ಬೆಡ್ಗಳು ಮೀಸಲು: ಒಳರೋಗಿ ವಿಭಾಗದಲ್ಲಿ (IPD) ಶೇ. 10 ರಷ್ಟು ಹಾಸಿಗೆಗಳನ್ನು ಆರ್ಥಿಕವಾಗಿ ಹಿಂದುಳಿದವರಿಗಾಗಿ ಕಾಯ್ದಿರಿಸಬೇಕು.
ಈ ಉಚಿತ ಚಿಕಿತ್ಸೆಯ ಅಡಿಯಲ್ಲಿ ಕೇವಲ ಬೆಡ್ ಅಥವಾ ಕನ್ಸಲ್ಟೇಶನ್ ಮಾತ್ರವಲ್ಲದೆ, ಔಷಧಗಳು, ಲ್ಯಾಬ್ ಟೆಸ್ಟ್ಗಳು, ಆಪರೇಷನ್ ಸೇರಿದಂತೆ ಆಸ್ಪತ್ರೆಯ ಯಾವುದೇ ಶುಲ್ಕವನ್ನು ರೋಗಿಗಳಿಂದ ವಸೂಲಿ ಮಾಡುವಂತಿಲ್ಲ.
Personality Test ನಿಮ್ಮ ನೆಚ್ಚಿನ ಹಣ್ಣು ಕೂಡ ಬಹಿರಂಗಪಡಿಸುತ್ತೆ ವ್ಯಕ್ತಿತ್ವದ ಗುಟ್ಟು!