newsics.com/ನ್ಯೂಸಿಕ್ಸ್
ಇಟಲಿ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಆ ದೇಶದ ಪಿಎಂ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಟಾಫಿ ಚಾಕೊಲೆಟ್ ಪೊಟ್ಟಣವನ್ನು ಉಡುಗೊರೆಯಾಗಿ ನೀಡಿದ್ದರು. ಆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗುತ್ತಿದ್ದಂತೆ, ಪಾರ್ಲೆ ಇಂಡಸ್ಟ್ರೀಸ್ ಚೇತರಿಕೆ ಕಂಡಿವೆ.
ಇಟಲಿಯ ಮೆಲೋನಿಗೆ ಮೆಲೋಡಿ ಚಾಕಲೇಟ್ ನೀಡುತ್ತಿದ್ದಂತೆ ಇತ್ತ ಭಾರತದ ಸ್ಟಾಕ್ ಮಾರ್ಕೆಟ್ ಪಂಟರ್ಗಳು ಪಾರ್ಲೆ ಚಾಕಲೇಟ್ನ್ನು ಪಾರ್ಲೆ ಇಂಡಸ್ಟ್ರೀಸ್ ಎಂಬ ಕಂಪನಿ ತಯಾರಿಸುತ್ತದೆ ಎಂದು ತಪ್ಪು ತಿಳಿದು, ತಪ್ಪು ಕಂಪನಿಯಲ್ಲಿ ಹೂಡಿಕೆ ಮಾಡಿದ ಪರಿಣಾಮ, ಚಾಕಲೇಟ್ ತಯಾರಿಕೆಯೊಂದಿಗೆ ಯಾವುದೇ ಸಂಬಂಧ ಹೊಂದಿರದ ಪಾರ್ಲೆ ಇಂಡಸ್ಟ್ರಿಸ್ ಕಂಪನಿಯ ಶೇರ್ ಮೌಲ್ಯದಲ್ಲಿ ಶೇ.5 ರಷ್ಟು ಏರಿಕೆ ಕಂಡಿದ್ದು, ಇವತ್ತಿನ ಅಪ್ಪರ್ ಸರ್ಕ್ಯೂಟ್ನ್ನು ಇದು ದಾಖಲಿಸಿದೆ.
ಪಾರ್ಲೆ ಷೇರುಗಳು ದಿನದ ವಹಿವಾಟಿನಲ್ಲಿ ಶೇ 5ರಷ್ಟು ಏರಿಕೆಯಾಗಿದ್ದು, ₹ 5.25ಗೆ ತಲುಪಿವೆ. ಇದರೊಂದಿಗೆ ಈ ಕಂಪನಿಯ ಷೇರುಗಳು ಕಳೆದ ಒಂದು ವಾರದಿಂದ ಶೇ 7ರಷ್ಟು ಪ್ರಗತಿ ಸಾಧಿಸಿದಂತಾಗಿದೆ.
ವಿಚಿತ್ರವೆಂದರೆ, ಮೋದಿ ಉಡುಗೊರೆಯಾಗಿ ನೀಡಿರುವ ಮೆಲೋಡಿ ತಯಾರಕ ಕಂಪನಿಗೂ, ಪಾರ್ಲೆ ಇಂಡಸ್ಟ್ರೀಸ್‌ಗೂ ಸಂಬಂಧವೇ ಇಲ್ಲ.
ಈ ಪಾರ್ಲೆ ಕಂಪನಿ ನೆನ್ನೆ, ಮೊನ್ನೆ ಹುಟ್ಟಿಕೊಂಡ ಸಂಸ್ಥೆಯಲ್ಲ. ಇದನ್ನು ಮೋಹಲ್ಲಾಲ್ ದಯಾಲ್ ಅವರು ಹೌಸ್ ಆಫ್ ಪಾರ್ಲೆ ಎಂದು 1929 ರಲ್ಲಿ ಆರಂಭಿಸಿದರು. ಈ ಕಂಪನಿ ಸ್ಥಾಪನೆಗೊಂಡು ಸುಮಾರು 97 ವರ್ಷ ಕಳೆದಿದ್ದು, ಈ ಕಂಪನಿಯ ಹ್ಯಾಪಿ ಹ್ಯಾಪಿ, 20-20, ಮೆಲೋಡಿ, ಹೈಡ್&ಸಿಕ್ ಮತ್ತು ಪಾರ್ಲೆಜಿ ಇವರ ಅತೀ ಹೆಚ್ಚು ಮಾರಾಟವಾಗುವ ಖಾದ್ಯ ಪದಾರ್ಥಗಳಾಗಿವೆ. ಭಾರತದಾದ್ಯಂತ ಈ ಪಾರ್ಲೆ ಕಂಪನಿಯ ಸುಮಾರು 125 ಫ್ಯಾಕ್ಟರಿಗಳಿದ್ದು, ಇವರು ಕೇಕ್, ಬಿಸ್ಕಿಟ್, ಚಾಕಲೇಟ್, ರಸ್ಕ್ ಮೊದಲಾದವುಗಳನ್ನು ತಯಾರಿಸುವ ಪಾರ್ಲೆ ಪ್ರಾಡಕ್ಟ್ ಇದು ಭಾರತದ ಪ್ರತಿಷ್ಟಿತ ಬ್ರ್ಯಾಂಡ್ ಎಂದರೆ ತಪ್ಪಾಗದು.
Vande Mataram ಪಶ್ಚಿಮ ಬಂಗಾಳದ ಎಲ್ಲ ಮದ್ರಸಾಗಳಲ್ಲಿ ಇನ್ಮುಂದೆ ವಂದೇ ಮಾತರಂ ಕಡ್ಡಾಯ