newsics.com/ನ್ಯೂಸಿಕ್ಸ್
ಶಿವಮೊಗ್ಗ : ಸ್ಯಾಂಡಲ್‌ವುಡ್ ಮತ್ತೊಬ್ಬ ಪ್ರತಿಭಾವಂತ ತಂತ್ರಜ್ಞನನ್ನು ಕಳೆದುಕೊಂಡಿದೆ. ಕನ್ನಡದ ಯುವ ಬರಹಗಾರ ಹಾಗೂ ಸಹ ನಿರ್ದೇಶಕರಾಗಿದ್ದ ನಂದೀಶ್ ಜಿ.ಟಿ (37) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಮೂಲಗಳ ಪ್ರಕಾರ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿರುವ ತಮ್ಮ ನಿವಾಸದಲ್ಲಿದ್ದ ವೇಳೆಯೇ ನಂದೀಶ್ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಕೇವಲ 37ನೇ ವಯಸ್ಸಿಗೆ ಅವರು ಇಹಲೋಕ ತ್ಯಜಿಸಿರುವುದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.
ನಂದೀಶ್ ಅವರು ಕನ್ನಡ ಸಿನಿಮಾ ಹಾಗೂ ಧಾರಾವಾಹಿ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಕಥೆ, ಚಿತ್ರಕಥೆ ಮತ್ತು ಚುರುಕಾದ ಸಂಭಾಷಣೆ ಬರೆಯುವುದರಲ್ಲಿ ಸೈ ಎನಿಸಿಕೊಂಡಿದ್ದ ಇವರು, ಚಿತ್ರರಂಗದಲ್ಲಿ ಭರವಸೆಯ ತಂತ್ರಜ್ಞನಾಗಿ ಗುರುತಿಸಿಕೊಂಡಿದ್ದರು.