newsics.com/ನ್ಯೂಸಿಕ್ಸ್
ಬೆಲೆ ಏರಿಕೆಯ ಬಿಸಿಯಲ್ಲಿ ತತ್ತರಿಸಿರುವ ಸಾಮಾನ್ಯ ಜನರಿಗೆ ಬಿಎಂಟಿಸಿ ಮತ್ತು ಮೆಟ್ರೋ ಆಡಳಿತ ಮಂಡಳಿ ಕೊಂಚ ನಿರಾಳದ ಸುದ್ದಿ ನೀಡಿದೆ. ಸದ್ಯಕ್ಕೆ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡದಿರಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಬಿಎಂಆರ್‌ಸಿಎಲ್ ಟಿಕೆಟ್ ದರ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಸದ್ಯಕ್ಕೆ ದರ ಏರಿಕೆ ಬೇಡ ಎಂದು ನಿರ್ದೇಶನ ನೀಡಿದ್ದಾರೆ.
ಬೋರ್ಡ್ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿದ್ದು, ಸದ್ಯಕ್ಕೆ ಟಿಕೆಟ್ ದರ ಏರಿಕೆಯನ್ನು ಕೈಬಿಡಲಾಗಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಲು ನಿರ್ಧರಿಸಲಾಗಿದೆ.ಈಗಾಗಲೇ ನಿತ್ಯದ ಖರ್ಚು-ವೆಚ್ಚಗಳಿಂದ ತೊಂದರೆಗೀಡಾಗಿರುವ ಮೆಟ್ರೋ ಪ್ರಯಾಣಿಕರಿಗೆ, ಸದ್ಯಕ್ಕೆ ಟಿಕೆಟ್ ದರ ಏರಿಕೆ ಬಿಸಿ ತಟ್ಟದಿರುವುದು ಕೊಂಚ ನೆಮ್ಮದಿ ತಂದಿದೆ.
Astro Tips ಬಾಗಿಲಿನ ಹಿಂದೆ ಒದ್ದೆ ಬಟ್ಟೆಯಲ್ಲಿ ಏಕೆ ನೇತು ಹಾಕಬಾರದು?