newsics.com
ಕೋಲ್ಕತ್ತಾದಲ್ಲಿ ನಡೆದ ವೈದ್ಯೆಯ ಹತ್ಯೆ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದು, ಘಟನೆ ಖಂಡಿಸಿ ವೈದ್ಯರುಗಳ ಪ್ರತಿಭಟನೆ 10ನೇ ದಿನಕ್ಕೆ ಕಾಲಿರಿಸಿದೆ. ಈ ಘಟನೆಯ ಬಗ್ಗೆ ಲೈಂಗಿಕ ಕಾರ್ಯಕರ್ತೆಯೊಬ್ಬರು ಪ್ರತಿಕ್ರಿಯಿಸಿದ್ದು, ಅವರ ಮಾತುಗಳು ಅನೇಕರನ್ನು ಭಾವುಕಗೊಳಿಸಿವೆ.
ನಿಮಗೆ ಮಹಿಳೆಯರ ಬಗ್ಗೆ ಲೈಂಗಿಕ ಕಾಮನೆ ಅತೀಯಾಗಿ ಇದ್ದರೆ ನಮ್ಮ ಬಳಿ ಬನ್ನಿ, ಆದರೆ ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿರುವ ಮಹಿಳೆಯರ ಮೇಲೆ ದಯವಿಟ್ಟು ಅತ್ಯಾಚಾರ ಮಾಡಬೇಡಿ. ಇಲ್ಲಿ ನಾವು ಅತೀ ವಿಶಾಲವಾದ ರೆಡ್‌ಲೈಟ್ ಏರಿಯಾವನ್ನು ಹೊಂದಿದ್ದೇವೆ. ನೀವು ಇಲ್ಲಿಗೆ ಬರಬಹುದು. ಆದರೆ ದಯವಿಟ್ಟು ಬೇರೆ ಹೆಣ್ಣು ಮಕ್ಕಳನ್ನು ನಿಮ್ಮ ಕಾಮತೃಷೆಗೆ ಗುರಿಯಾಗಿಸಬೇಡಿ ಎಂದು ಹೃದಯ ತಟ್ಟುವಂತೆ ಮಾತನಾಡಿದ್ದಾರೆ.
ಸದ್ಯ ಇವರ ಈ ಪ್ರಬುದ್ಧ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಇನ್ನು ವೃತ್ತಿ ಯಾವುದೇ ಇರಲಿ ದೇಹಕ್ಕಿಂತ ಆತ್ಮಶುದ್ಧಿ ತುಂಬಾ ಅಗತ್ಯ ಎಂಬುದನ್ನು ಈ ಮಹಿಳೆ ಸಾಬೀತುಪಡಿಸಿದ್ದಾರೆ.