Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Women Alert ಪಿರಿಯೆಡ್ಸ್‌ ಮುಂದೂಡಲು ಔಷಧಿ ತೆಗೆದುಕೊಳ್ಳುವ ಮುನ್ನ ಎಚ್ಚರ
ಪ್ರಮುಖಆರೋಗ್ಯ

Women Alert ಪಿರಿಯೆಡ್ಸ್‌ ಮುಂದೂಡಲು ಔಷಧಿ ತೆಗೆದುಕೊಳ್ಳುವ ಮುನ್ನ ಎಚ್ಚರ

Share
2 Min Read
SHARE

newsics.com/ನ್ಯೂಸಿಕ್ಸ್

ಪಿರಿಯೆಡ್ಸ್‌ ಮುಂದೂಡುವ ಬಗ್ಗೆ ನೀವು ಕೇಳಿರಬಹುದು. ಪ್ರತಿ ಮಹಿಳೆಯರು ಒಂದಲ್ಲ ಒಂದು ಸಂದರ್ಭದಲ್ಲಿ ಪಿರಿಯೆಡ್ಸ್‌ನ್ನು ಮುಂದೂಡಲು ಬಯಸಿರುತ್ತಾರೆ. ಅದು ಮದುವೆಯಾಗಿರಬಹುದು, ಪೂಜಾ ಕಾರ್ಯವಾಗಿರಬಹುದು ಅಥವಾ ದೂರದ ಪ್ರಯಾಣದ ಕಾರಣದಿಂದಾಗಿ ಪಿರಿಯೆಡ್ಸ್ ಮುಂದೂಡುವ ಮಾತ್ರೆಗಳನ್ನು ತೆಗೆದುಕೊಂಡಿರುತ್ತಾರೆ.

https://youtube.com/shorts/qM17NYCF6QQ?si=P9kdXfY-X5l0cveO

ಈ ಔಷಧಿಗಳು ನಿಮ್ಮ ಅವಧಿಗಳನ್ನು ತಾತ್ಕಾಲಿಕವಾಗಿ ವಿಳಂಬಗೊಳಿಸುವ ಮೂಲಕ ನಿಮ್ಮ ನಿರ್ಣಾಯಕ ದಿನಗಳಲ್ಲಿ ಅವಧಿಯ ಅಸ್ವಸ್ಥತೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ಬೇಕಾಬಿಟ್ಟೆಯಾಗಿ ಮಾತ್ರೆಗಳು ಲಭ್ಯವಿದ್ದು, ಕೆಲವೊಮ್ಮೆ ಇದರ ಪ್ರಮೋಷನ್​ಗೆ ನಟಿಯರೂ ಕಾಣಿಸಿಕೊಂಡು, ಜನರು ಮರುಳಾಗುವುದು ಇದೆ. ಈ ಮಾತ್ರೆಗಳು ನೇರವಾಗಿ ಗರ್ಭಕೋಶದ ಮೇಲೆ ಪರಿಣಾಮ ಬೀರುವುದರಿಂದ ಕ್ರಮೇಣ ಇದು ಹಲವು ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಇಂಥದ್ದೇ ಒಂದು ಘಟನೆ ನಡೆದಿದ್ದು, ಯುವತಿಯೊಬ್ಬಳು ಮುಟ್ಟನ್ನು ಮುಂದೂಡುವ ಮಾತ್ರೆಯನ್ನು ನುಂಗಿದ ಬಳಿಕ ಸಾವನ್ನಪ್ಪಿದ್ದಾಳೆ.

ಮನೆಯಲ್ಲಿ ಪೀರಿಯಡ್ಸ್ ಮುಂದೂಡಲು ಬಳಸುವ ಮಾತ್ರೆಗಳಲ್ಲಿ ಪ್ರಮುಖವಾಗಿ ‘ಪ್ರೊಜೆಸ್ಟರಾನ್’  ಎಂಬ ಹಾರ್ಮೋನ್ ಇರುತ್ತದೆ. ನೈಸರ್ಗಿಕವಾಗಿ ದೇಹದಲ್ಲಿ ಈ ಹಾರ್ಮೋನ್ ಮಟ್ಟ ಕಡಿಮೆಯಾದಾಗ ಗರ್ಭಾಶಯದ ಒಳಪದರವು ಕರಗಿ ಋತುಸ್ರಾವ ಆರಂಭವಾಗುತ್ತದೆ. ಆದರೆ ನೀವು ಮಾತ್ರೆಗಳನ್ನು ತಿಂದಾಗ ಕೃತಕವಾಗಿ ಈ ಹಾರ್ಮೋನ್ ಮಟ್ಟ ಹೆಚ್ಚಾಗಿ ಪೀರಿಯಡ್ಸ್ ನಿಲ್ಲುತ್ತದೆ. ಮಾತ್ರೆ ನಿಲ್ಲಿಸಿದ ತಕ್ಷಣ ಆ ಹಾರ್ಮೋನ್ ಮಟ್ಟ ಒಮ್ಮೆಲೇ ಕುಸಿದುಬಿಡುತ್ತದೆ. ಇದು ದೇಹಕ್ಕೆ ತಕ್ಷಣದ ಶಾಕ್ ನೀಡುತ್ತದೆ.

ಈ ಮಾತ್ರೆಗಳಿಂದ ಎದುರಾಗುವ 5 ಭೀಕರ ಅಪಾಯಗಳು

1. ಹಾರ್ಮೋನ್ಗಳ ಏರುಪೇರು 

ಈ ಮಾತ್ರೆಗಳ ಬಳಕೆಯಿಂದ ಮಹಿಳೆಯರ ನೈಸರ್ಗಿಕ ಹಾರ್ಮೋನ್ ಬ್ಯಾಲೆನ್ಸ್ ಸಂಪೂರ್ಣವಾಗಿ ಹದಗೆಡುತ್ತದೆ. ಇದರ ಪರಿಣಾಮವಾಗಿ ಮುಂದಿನ ತಿಂಗಳುಗಳಲ್ಲಿ ಪೀರಿಯಡ್ಸ್ ಸರಿಯಾದ ಸಮಯಕ್ಕೆ ಬಾರದಿರುವುದು, ವಿಪರೀತ ಕಿರಿಕಿರಿ, ಮೂಡ್ ಸ್ವಿಂಗ್ಸ್ ಮತ್ತು ತೀವ್ರ ಮಾನಸಿಕ ಒತ್ತಡ ಕಾಡಬಹುದು.

2. ರಕ್ತ ಹೆಪ್ಪುಗಟ್ಟುವುದು 

ಈ ಮಾತ್ರೆಗಳಿಂದ ಎದುರಾಗುವ ಅತ್ಯಂತ ದೊಡ್ಡ ಅಪಾಯ ಇದು. ಇವು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ  ಅಪಾಯವನ್ನು ಹೆಚ್ಚಿಸುತ್ತವೆ. ಆ ರಕ್ತದ ಗಡ್ಡೆಗಳು ಹೃದಯ, ಶ್ವಾಸಕೋಶ ಅಥವಾ ಮೆದುಳಿಗೆ ತಲುಪಿದರೆ ಹಾರ್ಟ್ ಅಟ್ಯಾಕ್ ಅಥವಾ ಪಾರ್ಶ್ವವಾಯು ಬರುವ ಸಾಧ್ಯತೆ ಇರುತ್ತದೆ. ಇದು ನೇರವಾಗಿ ಪ್ರಾಣಕ್ಕೇ ಸಂಚಕಾರ ತರಬಲ್ಲದು.

 

3. ಸಂತಾನಹೀನತೆ ಸಮಸ್ಯೆ

ಪದೇ ಪದೇ ಈ ಮಾತ್ರೆಗಳನ್ನು ಬಳಸುವುದರಿಂದ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವ ಪ್ರಕ್ರಿಯೆಗೆ ಧಕ್ಕೆಯಾಗುತ್ತದೆ. ದೀರ್ಘಕಾಲದಲ್ಲಿ ಇದು ಗರ್ಭಧರಿಸಲು ಸಮಸ್ಯೆಯಾಗಿ ಪರಿಣಮಿಸಬಹುದು.

4. ನರಕಯಾತನೆ ನೀಡುವ ರಕ್ತಸ್ರಾವ:

ಮಾತ್ರೆಯ ಪ್ರಭಾವ ಮುಗಿದ ನಂತರ ಬರುವ ಪೀರಿಯಡ್ಸ್ ತೀವ್ರವಾದ ಹೊಟ್ಟೆನೋವಿನಿಂದ ಕೂಡಿರುತ್ತದೆ. ವಿಪರೀತ ರಕ್ತಸ್ರಾವವಾಗುತ್ತದೆ. ಕೆಲವರಲ್ಲಿ ಮಾತ್ರೆ ನಿಲ್ಲಿಸಿದ ಮೇಲೂ ವಾರಗಟ್ಟಲೆ ರಕ್ತಸ್ರಾವ ನಿಲ್ಲುವುದೇ ಇಲ್ಲ.

5. ಲಿವರ್ ಮತ್ತು ಕಿಡ್ನಿಗಳ ಮೇಲೆ ಒತ್ತಡ:

ನೀವು ತೆಗೆದುಕೊಳ್ಳುವ ಈ ಹಾರ್ಮೋನ್ ಮಾತ್ರೆಗಳನ್ನು ಕರಗಿಸಲು ಲಿವರ್ (ಯಕೃತ್ತು) ಹೆಚ್ಚುವರಿ ಶ್ರಮ ಹಾಕಬೇಕಾಗುತ್ತದೆ. ನಿಮಗೆ ಮೊದಲೇ ಏನಾದರೂ ಆರೋಗ್ಯ ಸಮಸ್ಯೆಗಳಿದ್ದರೆ ಇದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ.

ಈ ಅಪಾಯಗಳು ಯಾವಾಗಲೂ ಸ್ಪಷ್ಟವಾಗಿಲ್ಲದ ಕಾರಣ, ವೈದ್ಯರು ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುತ್ತಾರೆ ಮತ್ತು ಕೆಲವೊಮ್ಮೆ ಮುಟ್ಟಿನ ವಿಳಂಬ ಮಾತ್ರೆಗಳನ್ನು ಸುರಕ್ಷಿತವಾಗಿ ಶಿಫಾರಸು ಮಾಡಬಹುದೇ ಎಂದು ನಿರ್ಧರಿಸುವ ಮೊದಲು ಪರೀಕ್ಷೆಗಳನ್ನು ಆದೇಶಿಸುತ್ತಾರೆ. ಆದ್ದರಿಂದ ತಜ್ಞ ವೈದ್ಯರನ್ನು ಸಂಪರ್ಕಿಸಿ ಇಂಥ ಮಾತ್ರೆ ತೆಗೆದುಕೊಳ್ಳಿ ಎನ್ನುವುದು ವೈದ್ಯರ ಸಲಹೆ.

https://www.newsics.com/2026/05/17/woman-kills-lover-along-with-husband/

TAGGED:Caution before taking medication to delay periods
Share This Article
Facebook Twitter Copy Link Print
Previous Article ಬೆಚ್ಚಿ ಬೀಳಿಸೋ ಮತ್ತೊಂದು ನೀಲಿ ಡ್ರಮ್ ಕಥೆ : ಗಂಡನ ಜೊತೆ ಸೇರಿ ಪ್ರಿಯಕರನ ಕೊಂದ ಮಹಿಳೆ
Next Article ದೀಪಿಕಾ ರೆಡ್ಡಿ, ಬಿಂದು ಗೌಡ ಸೇರಿದಂತೆ ಇಡೀ KPYCC ಪದಾಧಿಕಾರಿಗಳ ವಜಾ ಮಾಡಿದ ಭಾರತೀಯ ಯುವ ಕಾಂಗ್ರೆಸ್‌

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?