newsics.com/ನ್ಯೂಸಿಕ್ಸ್
ಚೀನಾದಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ರಾಜತಾಂತ್ರಿಕ ಚಟುವಟಿಕೆಗಳ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ ಪ್ರವಾಸವು ಭದ್ರತಾ ಹಾಗೂ ರಾಜಕೀಯ ಕಾರಣಗಳಿಂದ ಜಾಗತಿಕ ಗಮನ ಸೆಳೆದಿದೆ. ಸೈಬರ್ ಭದ್ರತಾ ಭೀತಿ ಹಿನ್ನೆಲೆ, ಈ ಭೇಟಿ ವಿಶೇಷ ಕ್ರಮಗಳೊಂದಿಗೆ ನಡೆಯುತ್ತಿರುವುದು ಗಮನಾರ್ಹವಾಗಿದೆ. ಚೀನಾ ಹ್ಯಾಕ್ ಮಾಡಬಹುದು ಎಂಬ ಭಯದಲ್ಲಿ ವೈಯಕ್ತಿಕ ಮೊಬೈಲ್ ಮತ್ತು ಲ್ಯಾಪ್‌ಟಾಪ್ , ಗ್ಯಾಜೇಟ್‌ಗಳನ್ನು ಅಮೆರಿಕದಲ್ಲೇ ಬಿಟ್ಟು ತೆರಳಿದ್ದಾರೆ ಎಂಬ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಚೀನಾದಲ್ಲಿ ಮೊಬೈಲ್ ಹ್ಯಾಕಿಂಗ್ ಅಪಾಯ ಹೆಚ್ಚಿದೆ ಎಂಬ ಅಂದಾಜಿನ ಹಿನ್ನೆಲೆಯಲ್ಲಿ, ಟ್ರಂಪ್ ಸೇರಿದಂತೆ ಅಮೆರಿಕದ ಸಚಿವರು, ಅಧಿಕಾರಿಗಳು ಹಾಗೂ ಉದ್ಯಮಿಗಳು ತಮ್ಮ ವೈಯಕ್ತಿಕ ಮೊಬೈಲ್ ಫೋನ್‌ಗಳನ್ನು ಅಮೆರಿಕದಲ್ಲೇ ಬಿಟ್ಟು ಬಂದಿದ್ದಾರೆ. ಬದಲಿಗೆ ಸುರಕ್ಷತಾ ದೃಷ್ಟಿಯಿಂದ ತಯಾರಿಸಲಾದ ಸರಳ ಫೋನ್‌ಗಳು ಮತ್ತು ತಾತ್ಕಾಲಿಕ ಬಳಕೆಗೆ ಅನುಕೂಲವಾದ ಲ್ಯಾಪ್‌ಟಾಪ್‌ಗಳನ್ನು ಮಾತ್ರ ಬಳಕೆ ಮಾಡುತ್ತಿದ್ದಾರೆ. ಈ ಕ್ರಮವನ್ನು ‘ಪೂರ್ಣ ಡಿಜಿಟಲ್ ಲಾಕ್‌ಡೌನ್’ ಎಂದು ಕರೆಯಲಾಗುತ್ತಿದ್ದು, ಚೀನಾದಲ್ಲಿ ಯಾವುದೇ ಡಿಜಿಟಲ್ ಸಾಧನವು ಸೈಬರ್ ದಾಳಿಗೆ ಒಳಗಾಗುವ ಸಾಧ್ಯತೆ ಇದೆ ಎಂಬ ಭೀತಿಯೇ ಇದಕ್ಕೆ ಕಾರಣವಾಗಿದೆ.
ಅನ್ಯರ ಯುಎಸ್‌ಬಿ ಪೋರ್ಟ್‌ಗಳಲ್ಲಿ ಫೋನ್ ಚಾರ್ಜ್ ಮಾಡಿದರೆ ‘ಜ್ಯೂಸ್ ಜ್ಯಾಕಿಂಗ್’ ಮೂಲಕ ಡೇಟಾ ಕಳವು ಸಂಭವಿಸಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಭದ್ರತಾ ನಿಯಮಗಳು ಕೇವಲ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗದೆ,ಆ್ಯಪಲ್, ಬೋಯಿಂಗ್, ಕ್ವಾಲ್‌ಕಾಮ್ ಮತ್ತು ಬ್ಲಾಕ್‌ರಾಕ್‌ನಂತಹ ಜಾಗತಿಕ ಕಂಪನಿಗಳ ಉನ್ನತ ಅಧಿಕಾರಿಗಳಿಗೂ ಇದೇ ಭೀತಿಯಿಂದ ಇದೇ ನಿಯಮಗಳನ್ನು ಪಾಲಿಸುತ್ತಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಟ್ರಂಪ್ ನಡುವಿನ ಮೂರು ದಿನಗಳ ಉನ್ನತ ಮಟ್ಟದ ಮಾತುಕತೆ ಯಾವುದೇ ಸ್ಪಷ್ಟ ಒಪ್ಪಂದವಿಲ್ಲದೆ ಅಂತ್ಯಗೊಂಡಿದೆ. ಆದಾಗ್ಯೂ, ಇಬ್ಬರೂ ನಾಯಕರು ಈ ಸಭೆಯನ್ನು “ಐತಿಹಾಸಿಕ” ಮತ್ತು “ಹೆಗ್ಗುರುತು ಮೂಡಿಸಿದ” ಸಭೆ ಎಂದು ಬಣ್ಣಿಸಿದ್ದಾರೆ. ಬೀಜಿಂಗ್‌ನ ಝೋಂಗ್ನಾನ್ಹೈನಲ್ಲಿ ನಡೆದ ಈ ಸಭೆಯಲ್ಲಿ ಜಾಗತಿಕ ರಾಜಕೀಯ, ಇರಾನ್ ಸಂಘರ್ಷ, ದ್ವಿಪಕ್ಷೀಯ ವ್ಯಾಪಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು. ಪರಸ್ಪರ ಸಹಕಾರ ವಿಸ್ತರಣೆ ಮತ್ತು ಆರ್ಥಿಕ ಸಂಬಂಧಗಳನ್ನು ಸ್ಥಿರಗೊಳಿಸುವ ಬಗ್ಗೆ ಸಾಮಾನ್ಯ ಅರಿವು ಮೂಡಿದೆ ಎಂದು ಉಭಯ ನಾಯಕರು ತಿಳಿಸಿದ್ದಾರೆ.
ಸಭೆಯ ವೇಳೆ ಕ್ಸಿ ಜಿನ್‌ಪಿಂಗ್ ತೈವಾನ್ ವಿಚಾರವನ್ನು ಅತ್ಯಂತ ನಾಜೂಕಾಗಿ ನಿರ್ವಹಿಸಬೇಕು ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ತೈವಾನ್ ಪ್ರಶ್ನೆಯನ್ನು ಸರಿಯಾಗಿ ನಿರ್ವಹಿಸಿದರೆ ಮಾತ್ರ ಉಭಯ ರಾಷ್ಟ್ರಗಳ ಸಂಬಂಧ ಸ್ಥಿರವಾಗಿರುತ್ತದೆ, ಇಲ್ಲದಿದ್ದರೆ ಅದು ಸಂಘರ್ಷಕ್ಕೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ. ಈ ಕುರಿತು ಟ್ರಂಪ್ ನೇರ ಪ್ರತಿಕ್ರಿಯೆ ನೀಡದೆ ತಪ್ಪಿಸಿಕೊಂಡಿದ್ದು ಗಮನಾರ್ಹವಾಗಿದೆ. ಚೀನಾ ತನ್ನ ಭಾಗವೆಂದು ಪರಿಗಣಿಸುವ ತೈವಾನ್ ಮಾತ್ರ ಪ್ರಾದೇಶಿಕ ಶಾಂತಿಗೆ ಚೀನಾ ಅಪಾಯಕಾರಿಯಾಗಿದೆ ಎಂದು ತಿರುಗೇಟು ನೀಡಿದೆ.
ಜುವೆಲ್ಲರೀ ಶಾಪ್ ನಲ್ಲಿ ತಿಜೋರಿ ಸಮೇತ 70 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ!