newsics.com/ನ್ಯೂಸಿಕ್ಸ್
ಬಾಲಿವುಡ್ ನಟ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ನಟನೆಯ ಎರಡನೇ ಸಿನಿಮಾ ಏಕ್ ದಿನ್ ಇತ್ತೀಚೆಗೆ ಬಿಡುಗಡೆ ಆಯಿತು. ಈ ಸಿನಿಮಾ ಮೇಲೆ ಅವರಿಗೆ ಬಹಳ ನಿರೀಕ್ಷೆ ಇತ್ತು. ಆದರೆ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಮಕಾಡೆ ಮಲಗಿದೆ.
https://youtube.com/shorts/KY0wlwc-Du0?si=-28u12qk1-aiTIHP
ಸೌತ್ ಇಂಡಿಯನ್ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ನಟಿಸಿದ ಮೊದಲ ಹಿಂದಿ ಸಿನಿಮಾ ಏಕ್ ದಿನ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಈ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾಗಿದ್ದಾರೆ.
ಈ ‘ಏಕ್ ದಿನ್’ ಚಿತ್ರದ ಫಲಿತಾಂಶ ಈಗ ಸಾಯಿ ಪಲ್ಲವಿ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ ಮೇಲೆ ಬೀರಿದೆ ಎನ್ನಲಾಗುತ್ತಿದೆ.
ಸಾಯಿ ಪಲ್ಲವಿ ಅವರಿಗೆ ಹಿಂದಿ ಭಾಷೆಯ ಮೇಲೆ ಅಷ್ಟೊಂದು ಹಿಡಿತವಿಲ್ಲ ಎಂಬುದು ಪ್ರೇಕ್ಷಕರ ಅಭಿಪ್ರಾಯ. ಪ್ರಚಾರದ ವೇಳೆ ಅವರು ಮಾತನಾಡಿದ ಹಿಂದಿ ಕೂಡ ಟ್ರೋಲ್ಗೆ ಗುರಿಯಾಗಿದೆ.
ರಾಮಾಯಣ ಚಿತ್ರದಲ್ಲಿ ಸೀತಾ ಮಾತೆ ಪಾತ್ರಕ್ಕೆ ಅತ್ಯಂತ ಶುದ್ಧ ಮತ್ತು ಸ್ಪಷ್ಟವಾದ ಹಿಂದಿ ಉಚ್ಚಾರಣೆ ಅಗತ್ಯವಿದೆ.ಸಾಯಿ ಪಲ್ಲವಿ ಅವರ ಹಿಂದಿ ಉಚ್ಚಾರಣೆಯಲ್ಲಿ ದಕ್ಷಿಣ ಭಾರತದ ಪ್ರಭಾವ ಹೆಚ್ಚಿರುವುದರಿಂದ, ಚಿತ್ರತಂಡವು ಅವರಿಗೆ ಸ್ವತಃ ಡಬ್ಬಿಂಗ್ ಮಾಡಲು ಅವಕಾಶ ನೀಡದೆ, ವೃತ್ತಿಪರ ಡಬ್ಬಿಂಗ್ ಕಲಾವಿದರನ್ನು ಬಳಸಿಕೊಳ್ಳಲು ನಿರ್ಧರಿಸಿದೆ ಎಂದು ವರದಿಯಾಗಿದೆ.
https://www.newsics.com/2026/05/14/vd-satheesan-elected-as-new-cm-of-kerala/