newsics.com
ನವದೆಹಲಿ: ರಾಖಿ ಪೌರ್ಣಮಿಯಂದು ತೆಲಂಗಾಣದ ಗದ್ವಾಲ ಡಿಪೋಗೆ ಸೇರಿದ ಸರ್ಕಾರಿ ಬಸ್‌ನಲ್ಲಿ ಜನಿಸಿದ ಮಗುವಿಗೆ ಜೀವನ ಪರ್ಯಂತ ರಾಜ್ಯಾದ್ಯಂತ ಉಚಿತ ಪ್ರಯಾಣಕ್ಕೆ ಬಸ್ ಪಾಸ್ ನೀಡುವುದಾಗಿ ಟಿಜಿಎಸ್‌ಆರ್‌ಟಿಸಿ ಆಡಳಿತ ಮಂಡಳಿ ಪ್ರಕಟಿಸಿದೆ.
ಬಸ್ಸಿನಲ್ಲಿ ಪ್ರಯಾಣಿಸುವಾಗ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸುವ ಮೂಲಕ ಗದ್ವಾಲ್ ಡಿಪೋದ ಕಂಡಕ್ಟರ್ ಭಾರತಿ, ಡ್ರೈವರ್ ಅಂಜಿ ಮತ್ತು ನರ್ಸ್ ಅಲಿವೇಲು ಮಂಗಮ್ಮ ಅವರನ್ನು ಟಿಜಿಎಸ್‌ಆರ್‌ಟಿಸಿ ಆಡಳಿತ ಮಂಡಳಿ ಅಭಿನಂದಿಸಿದೆ.
ಕಂಡಕ್ಟರ್ ಸಹಿತ ಗರ್ಭಿಣಿಯ ಹೆರಿಗೆಗೆ ಸಹಕರಿಸಿದ ವನಪರ್ತಿಯ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಅಲಿವೇಲು ಮಂಗಮ್ಮ ಅವರಿಗೆ ಡಿಲಕ್ಸ್ ಮತ್ತು ಸೂಪರ್ ಐಷಾರಾಮಿ ಬಸ್ಗಳಲ್ಲಿ ಒಂದು ವರ್ಷದವರೆಗೆ ಉಚಿತ ಬಸ್ ಪಾಸ್ ನೀಡಿದೆ. ಬಸ್ಸಿನಲ್ಲಿ ಪ್ರಯಾಣಿಸುವಾಗ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸುವ ಮೂಲಕ ಗದ್ವಾಲ್ ಡಿಪೋದ ಕಂಡಕ್ಟರ್ ಭಾರತಿ, ಡ್ರೈವರ್ ಅಂಜಿ ಮತ್ತು ನರ್ಸ್ ಅಲಿವೇಲು ಮಂಗಮ್ಮ ಅವರನ್ನು ಟಿಜಿಎಸ್‌ಆರ್‌ಟಿಸಿ ಆಡಳಿತ ಮಂಡಳಿ ಅಭಿನಂದಿಸಿದೆ.