newsics. com
ಮಂಗಳೂರು : ಪ್ರೀತಿಗೊಪ್ಪದ ಪಿಯು ವಿದ್ಯಾರ್ಥಿನಿಗೆ ಮಾರಕಾಸ್ತ್ರಗಳಿಂದ ವಿದ್ಯರ್ಥಿ ಇರಿದಿರುವ ದುರ್ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ.
ಪ್ರಥಮ ಪಿಯುಸಿ ಆರ್ಟ್ಸ್ ವಿದ್ಯಾರ್ಥಿಯಾಗಿರುವ ಯುವಕ, ಕಾಮರ್ಸ್ ವಿದ್ಯಾರ್ಥಿನಿಯನ್ನ ಪ್ರೀತಿಸುತ್ತಿದ್ದ. ವಿದ್ಯಾರ್ಥಿನಿಯನ್ನ ಕಾಲೇಜು ಬಳಿ ಫಾಲೋ ಮಾಡಿಕೊಂಡು ಬಂದಿದ್ದಾನೆ. ವಿದ್ಯಾರ್ಥಿನಿ ಬಳಿ ಬಂದು ನೀನು ಗೆಳತಿ ಅಲ್ವಾ ಅಂತ ಕೇಳಿದ್ದಾನೆ ಅಲ್ಲದೇ ನಾನು ಅವಳನ್ನು ಲವ್ ಮಾಡಲ್ಲ, ನಿನ್ನ ಲವ್ ಮಾಡ್ತೇನೆ ಅಂದ, ಆಗ ಆಕೆ ಅವನಿಗೆ ಸರಿಯಾಗಿ ಬೈದಾಗಲೂ ಮತ್ತೆ ಮತ್ತೆ ಲವ್ ಮಾಡ್ತೇನೆ ಅಂದ, ಆಗ ವಿರೋಧಿಸಿದ್ದಕ್ಕೆ ವಿದ್ಯಾರ್ಥಿನಿಯ ಕೈಗೆ ಇರಿದು ಓಡಿದ್ದಾನೆ. ಯಾವುದರಲ್ಲಿ ಇರಿದ ಎಂದು ಆಕೆಗೆ ಗೊತ್ತಾಗಿಲ್ಲ, ಬಹುಶಃ ಬ್ಲೇಡ್ ನಲ್ಲಿ ಇರಬಹುದು ಎಂದು ಸಂಶಯಪಟ್ಟಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯುವತಿಯನ್ನು ಚಿಕಿತ್ಸೆಗೆಂದು ಸರಕಾರಿ ಆಸ್ಪತ್ರೆಗೆ ಮಧ್ಯಾಹ್ನ ಕರೆತಂದಾಗ ನೂರಾರು ಜನ ಸೇರಿದ್ದರು. ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿದ್ದು ಸಮಗ್ರ ತನಿಖೆ ಆಗಬೇಕು ಎಂದು ಮುಸ್ಲಿಂ ಮುಖಂಡರು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಮಧ್ಯಾಹ್ನ ಎಸ್‌ಡಿಪಿಐ ಕಾರ್ಯಕರ್ತರು, ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಆಸ್ಪತ್ರೆ ವಠಾರದಲ್ಲಿ ಜಮಾಯಿಸಿ ಘಟನೆಯ ಬಗ್ಗೆ ಪೊಲೀಸರು ಸಮಗ್ರ ತನಿಖೆ ಮಾಡಿ, ಆರೋಪಿಯ ಮೇಲೆ ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕ ವಾತಾವರಣದಲ್ಲಿ ಇಂಥ ಘಟನೆ ಮರುಕಳಿಸದಂತೆ ಖಾತ್ರಿಪಡಿಸಬೇಕೆಂದು ಎಂದ ಆಗ್ರಹಿಸಿದ್ದಾರೆ.