newsics.com
ಬೆಂಗಳೂರು: ಮೂರು ಅಡಿ ಉದ್ದದ ಹಾವನ್ನು ಒಂದು ವರ್ಷದ ಪುಟ್ಟ ಪೋರನೊಬ್ಬ ಕಚ್ಚಿ ಸಾಯಸಿ ಬಿಟ್ಟಿದ್ದಾನೆ. ಬಿಹಾರದಲ್ಲಿ ಇಂತಹದೊಂದು ಅಚ್ಚರಿಯ ಘಟನೆ ನಡೆದು ಹೋಗಿದೆ.
ಬಿಹಾರದ ಗಯಾ ಜಿಲ್ಲೆಯಲ್ಲಿ ಕತ್ಹೇಪುರ ಅನ್ನೋ ಗ್ರಾಮದಲ್ಲಿ ನಡೆದಿರುವ ಘಟನೆ. ಬಾಲಕ ಅಂಗಳದಲ್ಲಿ ಆಟ ಆಡುತ್ತಿರುವಾಗ ಹಾವೊಂದು ಬಂದಿದೆ. ಅದನ್ನು ಆಟಿಗೆಯೆಂದು ತಿಳಿದ ಒಂದು ವರ್ಷದ ಬಾಲಕ ಅದರೊಂದಿಗೆ ಆಟವಾಡಲು ಶುರು ಮಾಡಿದ್ದಾನೆ.
ಕೊನೆಗೆ ಬಾಯಿಯಲ್ಲಿಟ್ಟುಕೊಂಡು ಆಟಿಗೆಯನ್ನು ಕಚ್ಚುವಂತೆ ಕಚ್ಚಿದ್ದಾನೆ. ಹಾವಿನ ಮಧ್ಯಭಾಗವನ್ನು ಬಾಲಕ ಕಚ್ಚಿದ್ದು ಹಾವು ಅಲ್ಲಿಯೇ ಸತ್ತು ಹೋಗಿದೆ.
ಮಗುವನ್ನು ಆಡಲು ಬಿಟ್ಟು ತನ್ನ ಕೆಲಸದಲ್ಲಿ ನಿರತರಾಗಿದ್ದ ತಾಯಿ, ಆಕಸ್ಮಾತಾಗಿ ಮಗು ಇರುವ ಕಡೆಗೆ ಬಂದಾಗ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾಳೆ. ಮಗುವಿನ ಬಾಯಲ್ಲಿದ್ದ ಹಾವನ್ನು ಕಂಡು ಬೆಕ್ಕಸ ಬೆರಗಾದ ತಾಯಿ, ಓಡಿ ಬಂದು ಮಗುವಿನ ಬಾಯಲ್ಲಿದ್ದ ಹಾವನ್ನು ಕಿತ್ತು ದೂರ ಎಸೆದಿದ್ದಾಳೆ. ಕೊನೆಗೆ ಹಾವು ಸತ್ತಿದೆಯಾ ಬದುಕಿದೆಯಾ ಎಂದು ನೋಡಿದಾಗ ಹಾವು ಸತ್ತು ಹೋಗಿತ್ತು.