newsics.com/ನ್ಯೂಸಿಕ್ಸ್
ತಮಿಳುನಾಡು : ತಮಿಳುನಾಡಲ್ಲಿ 234 ಕ್ಷೇತ್ರಗಳಲ್ಲಿ 108 ಪೈಕಿ ಗೆದ್ದಿರುವ ದಳಪತಿ ನಟ ವಿಜಯ್ ನೇತೃತ್ವದ TVK ಪಕ್ಷವು, ಇದೀಗ ತಮಿಳುನಾಡಲ್ಲಿ ಮೊದಲ ಬಾರಿ ಸರ್ಕಾರ ರಚನೆಗೆ ಮುಂದಾಗಿದೆ. ಹಾಗಾಗಿ ಈಗಾಗಲೇ ADMK ಜೊತೆ ಮೈತ್ರಿ ತಿರಸ್ಕರಿಸಿರುವ ವಿಜಯ್ ಕಾಂಗ್ರೆಸ್ ಹಾಗು ಎಡಪಕ್ಷಗಳ ಜೊತೆ ಕೈ ಜೋಡಿಸಿ ಸರ್ಕಾರ ರಚನೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
https://youtube.com/shorts/iatQVbaFb3g?si=I11csgvje-MFvvAP
ಬಹುಮತಕ್ಕೆ ಕೆಲವೇ ಸ್ಥಾನಗಳ ಅಂತರವಿರುವ ಹಿನ್ನೆಲೆಯಲ್ಲಿ, ಪ್ರಮುಖ ಪ್ರತಿಪಕ್ಷವಾದ ADMK ವಿಜಯ್ ಅವರೊಂದಿಗೆ ಕೈಜೋಡಿಸಲು ಮುಂದಾಗಿತ್ತು.
ಆದರೆ, ತನ್ನ ಸಿದ್ಧಾಂತ ಮತ್ತು ಪಕ್ಷದ ಸ್ವತಂತ್ರ ಅಸ್ತಿತ್ವಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ವಿಜಯ್ ಅವರು ADMK ಜೊತೆಗಿನ ಮೈತ್ರಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಸದ್ಯದ ಮಾಹಿತಿಯ ಪ್ರಕಾರ, ವಿಜಯ್ ಅವರು ಕಾಂಗ್ರೆಸ್ ಹಾಗೂ ಎಡಪಕ್ಷಗಳ (CPI, CPI-M) ಬೆಂಬಲದೊಂದಿಗೆ ಮೈತ್ರಿ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ವಿಜಯ್ ತಮ್ಮ ಮೈತ್ರಿಯ ಆಯ್ಕೆಗಳನ್ನು ಮುಕ್ತವಾಗಿಟ್ಟಿದ್ದು, ಸಮಾನ ಮನಸ್ಕ ಪಕ್ಷಗಳನ್ನು ಆಹ್ವಾನಿಸಲು ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್ ಜೊತೆಗೆ VCK, IUML ನಂತಹ ಪ್ರಾದೇಶಿಕ ಶಕ್ತಿಗಳು ವಿಜಯ್ ಕೈ ಹಿಡಿದರೆ, ತಮಿಳುನಾಡಿನಲ್ಲಿ ಹೊಸ ಯುಗ ಆರಂಭವಾಗುವುದು ಖಚಿತ ಎನ್ನಲಾಗುತ್ತಿದೆ.
https://www.newsics.com/2026/05/05/vijay-elected-as-leader-of-tvk-legislature-party/