newsics.com/ನ್ಯೂಸಿಕ್ಸ್
ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಮತ್ತು ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಕಾಂಬಿನೇಷನ್‌ನ ‘ಏಕ್ ದಿನ್’ ಸಿನಿಮಾ ಮೇ 1ರಂದು ತೆರೆಕಂಡಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಈ ಸಿನಿಮಾ ವಿಫಲವಾಗಿದೆ.
ಏಕ್ ದಿನ್’ ಸಿನಿಮಾಗೆ ಸುನಿಲ್ ಪಾಂಡೆ ಅವರು ನಿರ್ದೇಶನ ಮಾಡಿದ್ದಾರೆ. ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಮೂಲಕ ಮನ್ಸೂರ್ ಖಾನ್, ಆಮಿರ್ ಖಾನ್ ಮತ್ತು ಅಪರ್ಣಾ ಪುರೋಹಿತ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು 2016ರ ಥಾಯ್ ಸಿನಿಮಾ ‘ಒನ್ ಡೇ’ ರಿಮೇಕ್. ತನ್ನ ಸಹೋದ್ಯೋಗಿಯನ್ನು ಪ್ರೀತಿಸುವ ಯುವಕನೊಬ್ಬ, ಕೇವಲ ಒಂದು ದಿನದ ಮಟ್ಟಿಗೆ ಆಕೆಯ ಪ್ರೇಮಿಯಾಗಲು ಬಯಸುವ ಕಥಾಹಂದರ ಈ ಚಿತ್ರದಲ್ಲಿದೆ.
ಬಹುಭಾಷಾ ನಟಿ ಸಾಯಿ ಪಲ್ಲವಿ ಅವರಿಗೆ ಬಾಲಿವುಡ್‌ನಲ್ಲಿ ಇದು ಮೊದಲ ಚಿತ್ರ.ಅವರು ‘ರಾಮಾಯಣ’ದಲ್ಲಿ ಸೀತೆ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ರಿಲೀಸ್ ಆದ ಬಳಿಕ ‘ಏಕ್ ದಿನ್’ ತೆರೆಗೆ ಬಂದಿದ್ದರೆ ಸಿನಿಮಾಗೆ ಹೆಚ್ಚು ಲಾಭ ಆಗುತ್ತಿತ್ತು. ಆದರೆ, ಆಮಿರ್ ಖಾನ್ ಅವರಿಗೆ ಅಷ್ಟು ಸಮಯ ಕಾಯುವ ತಾಳ್ಮೆ ಇರಲಿಲ್ಲ. ಹೀಗಾಗಿ, ಅವರು ಈ ನಿರ್ಧಾರ ಮಾಡಿದ್ದಾರೆ.
ಏಕ್ ದಿನ್’ ಸಿನಿಮಾ ಮೊದಲ ದಿನ 1 ಕೋಟಿ ರೂಪಾಯಿ ಮಾತ್ರ ಗಳಿಸಿದೆ. ಈ ಚಿತ್ರಕ್ಕೆ ದೇಶಾದ್ಯಂತ ಸಿಕ್ಕಿದ್ದು ಬರೋಬ್ಬರಿ 1,710 ಶೋ. ಆದರೂ ಸಿನಿಮಾ ಗಳಿಸಿದ್ದು ಕೇವಲ 1 ಕೋಟಿ ರೂಪಾಯಿ. ಈ ಚಿತ್ರ ಅಕ್ಯುಪೆನ್ಸಿ ಕೇವಲ 14 ಪರ್ಸೆಂಟ್ ಇತ್ತು. ಅಂದರೆ, 100 ಸೀಟ್ ಇರುವ ಚಿತ್ರಮಂದಿರದಲ್ಲಿ ತುಂಬಿದ್ದು ಕೇವಲ 14 ಸೀಟ್ ಮಾತ್ರ. ಹೀಗಾಗಿ, ಕೇವಲ 1 ಕೋಟಿ ರೂಪಾಯಿ ಮಾತ್ರ ಗಳಿಸಿದೆ.ಮುಂದಿನ ದಿನಗಳಲ್ಲಿ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
https://www.newsics.com/2026/05/03/crocodile-attack-a-serious-one/