newsics.com/ನ್ಯೂಸಿಕ್ಸ್
ಸ್ಯಾಂಡಲ್ವುಡ್ನ ಜನಪ್ರಿಯ ನಟ ‘ಡಾಲಿ’ ಧನಂಜಯ್ ಹಾಗೂ ಧನ್ಯತಾ ದಂಪತಿ ಶೀಘ್ರದಲ್ಲೇ ಪಾಲಕರಾಗಲಿರುವ ಸುದ್ದಿಯನ್ನು ಇತ್ತೀಚೆಗಷ್ಟೇ ಹಂಚಿಕೊಂಡಿದ್ದರು. ಇದೀಗ ಮೇ 2ರಂದು ಈ ದಂಪತಿಗೆ ಮಗು ಜನಿಸಿದ್ದು, ಮನೆಯಲ್ಲಿ ಸಂಭ್ರಮ ಮನೆಮಾಡಿದೆ.
https://youtube.com/shorts/4WeDGkWkv1E?si=V5-kEiXb0VaUEmaX
ಅವರ ಮನೆಯಲ್ಲೀಗ ಹೊಸ ಸದಸ್ಯರ ಆಗಮನದ ಸಂಭ್ರಮ ಮನೆ ಮಾಡಿದೆ. ತಮ್ಮ ಮೊದಲ ಮಗುವಿನ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಡಾಲಿ ಧನಂಜಯ್ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಸೂರ್ಯ ಉದಯಿಸುತ್ತಿದ್ದಂತೆ, ನಮ್ಮ ದೊಡ್ಡ ಸಂತೋಷ, ನಮ್ಮ ಗಂಡು ಮಗು ಎಂದು ಮಗುವಿನ ಕೈ ಫೋಟೋ ಹಾಕಿ ಅಭಿಮಾನಿಗಳಿಗೆ ಸಂತೋಷದ ವಿಚಾರ ತಿಳಿಸಿದ್ದಾರೆ. ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
https://www.instagram.com/p/DX0dCDKk0iF/?igsh=MXNwcnV1Mmt5aWpwdQ==