newsics.com
ಚಿನ್ನದ ಬೆಲೆ ಏರುತ್ತಿರೋ ಸುದ್ದಿ ಕೇಳಿ ಚಿನ್ನ ಪ್ರಿಯರಿಗೆ ಬೇಜಾರಾಗಿತ್ತು. ಆದರೆ ಜಸ್ಟ್ 30 ಸಾವಿರಕ್ಕೆ 10 ಗ್ರಾಂ ಚಿನ್ನ ಸಿಗ್ತಿದೆ. ಈ ದೇಶಕ್ಕೆ ಹೋದಾಗ ನೀವು ಚಿನ್ನವನ್ನು ಖರೀದಿ ಮಾಡಿ ಯಾವುದು ಟ್ಯಾಕ್ಸ್ ಕಟ್ಟದೇ ಭಾರತಕ್ಕೆ ಬರಬಹುದು. ಫುಯೆನ್‌ಶೋಲಿಂಗ್ ಅಥವಾ ಥಿಂಪುಗೆ ಭೇಟಿ ನೀಡುವ ಭಾರತೀಯರಿಗೆ ಚಿನ್ನವನ್ನು ತೆರಿಗೆ ಮುಕ್ತವಾಗಿ ಖರೀದಿಸಲು ಭೂತಾನ್ ಅನುಮತಿ ನೀಡಿದೆ.
ಸದ್ಯ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 66,700 ರೂ. ಆಗಿದೆ. ಆದರೆ, ಈಗ ಭಾರತೀಯರು ಅಗ್ಗದ ಬೆಲೆಯಲ್ಲಿ ಚಿನ್ನವನ್ನು ಖರೀದಿಸಬಹುದು. ಇನ್ನು ಭೂತಾನ್ ಪ್ರವಾಸಿಗರಿಗೆ 20 ಗ್ರಾಂ ಡ್ಯೂಟಿ-ಫ್ರೀ ಚಿನ್ನವನ್ನು ಖರೀದಿಸಲು ಅನುಮತಿ ನೀಡಲು ಪ್ರಾರಂಭಿಸಿದೆ. ಅಧಿಕೃತವಾಗಿ, ಭೂತಾನ್ ಪ್ರವಾಸೋದ್ಯಮ ಇಲಾಖೆಯು ಭೂತಾನ್ ಡ್ಯೂಟಿ-ಫ್ರೀ (BDF) ಸಹಭಾಗಿತ್ವದಲ್ಲಿ ಸುಂಕ-ಮುಕ್ತ ಚಿನ್ನವನ್ನು ನೀಡಲು ಪ್ರಾರಂಭಿಸಿದೆ. ಭಾರತೀಯರಿಗೆ ಅಗ್ಗದ ಚಿನ್ನವನ್ನು ನೀಡುವ ಮೂಲಕ ಭೂತಾನ್ ತನ್ನ ಪ್ರವಾಸೋದ್ಯಮ ಆದಾಯವನ್ನು ಹೆಚ್ಚಿಸುವುದರ ಜೊತೆಗೆ ವಿದೇಶಿ ವಿನಿಮಯವನ್ನು ಗಳಿಸಲು ಪ್ರಯತ್ನಿಸುತ್ತಿದೆ.
ಕೆಲ ರೂಲ್ಸ್ ಫಾಲೋ ಮಾಡುವ ಮೂಲಕ ಭಾರತೀಯ ಪ್ರವಾಸಿಗರು ಈಗ ಭೂತಾನ್‌ನಲ್ಲಿ 20 ಗ್ರಾಂ ಚಿನ್ನವನ್ನು ಖರೀದಿಸಬಹುದು. ಪ್ರವಾಸಿಗರು SDF ಅನ್ನು ಪಾವತಿಸಬೇಕಾಗುತ್ತದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ಪ್ರಮಾಣೀಕರಿಸಿದ ಹೋಟೆಲ್‌ನಲ್ಲಿ ಕನಿಷ್ಠ ಒಂದು ರಾತ್ರಿಯನ್ನು ಕಳೆದಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ರಸೀದಿಯನ್ನು ಒದಗಿಸಬೇಕು. US ಡಾಲರ್‌ಗಳಲ್ಲಿ ಪಾವತಿಯನ್ನು ಮಾಡಬೇಕಾಗುತ್ತದೆ. ಹೀಗೆ ಮಾಡಿದ್ರೆ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ನೀವು ಜಸ್ಟ್ 27 ರಿಂದ 30 ಸಾವಿರ ಅಷ್ಟೇ ಪಾವತಿಸಬೇಕು.