Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಬೆಂಗಳೂರೀಗ ದೇಶದ ಐಸ್‌ಕ್ರೀಂ ರಾಜಧಾನಿ!
ಕರ್ನಾಟಕಪ್ರಮುಖ

ಬೆಂಗಳೂರೀಗ ದೇಶದ ಐಸ್‌ಕ್ರೀಂ ರಾಜಧಾನಿ!

Share
2 Min Read
SHARE

newsics.com/ನ್ಯೂಸಿಕ್ಸ್

ಬೆಂಗಳೂರು: ಬೇಸಿಗೆಯ ಬಿಸಿಲಿನ ಝಳ ಹೆಚ್ಚಾಗುತ್ತಿದ್ದಂತೆ ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆ ತಂಪಾದ ಪಾನೀಯಗಳು ಹಾಗೂ ಐಸ್‌ಕ್ರೀಮ್‌ಗಳ ಮೊರೆ ಹೋಗಿದ್ದಾರೆ. ಇದಕ್ಕೆ ಸಾಕ್ಷಿ ಪ್ರಮುಖ ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್ ‘ಇನ್‌ಸ್ಟಾಮಾರ್ಟ್’ ಬಿಡುಗಡೆ ಮಾಡಿರುವ ‘ಸಮ್ಮರ್ ಟ್ರೆಂಡ್ಸ್ 2026’ರ ವರದಿ. ಇದರ ಪ್ರಕಾರ, ಬೆಂಗಳೂರಿನ ಜನ ದೇಶದಲ್ಲೇ ಅತಿ ಹೆಚ್ಚು ಐಸ್‌ಕ್ರೀಮ್ ಸೇವಿಸುತ್ತಿದ್ದು, ಉದ್ಯಾನ ನಗರಿ ಈಗ ‘ಭಾರತದ ಐಸ್‌ಕ್ರೀಮ್ ರಾಜಧಾನಿ’ಯಾಗಿ ಹೊರಹೊಮ್ಮಿದೆ.

ಇನ್‌ಸ್ಟಾಮಾರ್ಟ್ ವರದಿಯ ಪ್ರಕಾರ, ದೇಶಾದ್ಯಂತ ಹಣ್ಣುಗಳು, ತಂಪು ಪಾನೀಯಗಳು, ಕೋಲ್ಡ್ ಕಾಫಿ, ಫಿಜಿ ಡ್ರಿಂಕ್ಸ್ ಮತ್ತು ಪಾಪ್ಸಿಕಲ್‌ಗಳ ಬೇಡಿಕೆಯು ವಾರದಿಂದ ವಾರಕ್ಕೆ ಶೇ. 300ರಷ್ಟು ಏರಿಕೆಯಾಗಿದೆ. ಕೇವಲ ತಿಂಡಿ-ತಿನಿಸುಗಳು ಮಾತ್ರವಲ್ಲದೆ, ಬಿಸಿಲಿನಿಂದ ರಕ್ಷಣೆ ಪಡೆಯುವ ಸಾಧನಗಳಾದ ಫ್ಯಾನ್‌ಗಳ ಮಾರಾಟದಲ್ಲಿ ಶೇ. 280ರಷ್ಟು ಏರಿಕೆ ದಾಖಲಾಗಿದ್ದರೆ, ಸನ್‌ಗ್ಲಾಸ್‌ಗಳ ಮಾರಾಟದಲ್ಲಿ ವಾರ್ಷಿಕವಾಗಿ ಬರೋಬ್ಬರಿ ಶೇ. 650ರಷ್ಟು ವೃದ್ಧಿಯಾಗಿದೆ.

ಭಾರತೀಯರು ಅತಿ ಹೆಚ್ಚು ಐಸ್‌ಕ್ರೀಮ್ ಸೇವಿಸುವ ಸಮಯ ರಾತ್ರಿ 9 ಗಂಟೆ! ಸಂಜೆ 6 ರಿಂದ 9 ಗಂಟೆಯ ನಡುವೆ ಐಸ್‌ಕ್ರೀಮ್ ಮತ್ತು ತಂಪು ಪಾನೀಯಗಳ ಬೇಡಿಕೆ ದುಪ್ಪಟ್ಟಾಗುತ್ತಿದೆ. ವಿಶೇಷವೆಂದರೆ ವಾರಾಂತ್ಯಗಳಲ್ಲಿ ಈ ಬೇಡಿಕೆ ಇನ್ನಷ್ಟು ತಾರಕಕ್ಕೇರುತ್ತದೆ. ಐಸ್‌ಕ್ರೀಮ್ ಫ್ಲೇವರ್‌ಗಳ ವಿಚಾರಕ್ಕೆ ಬಂದರೆ, ‘ಚಾಕೊಲೇಟ್ ಐಸ್‌ಕ್ರೀಮ್’ ದೇಶದ ಜನರ ಅಚ್ಚುಮೆಚ್ಚಿನ ಆಯ್ಕೆಯಾಗಿದ್ದು, ಒಟ್ಟು ಆರ್ಡರ್‌ಗಳಲ್ಲಿ ಶೇ. 28ರಷ್ಟು ಪಾಲನ್ನು ಇದು ಹೊಂದಿದೆ. ಜೊತೆಗೆ, ಕುಟುಂಬ ಸಮೇತ ಸವಿಯಲು ಅನುಕೂಲವಾಗುವ ‘ಫ್ಯಾಮಿಲಿ-ಸೈಸ್ ಟಬ್’ ಐಸ್‌ಕ್ರೀಮ್‌ಗಳಿಗೆ ಅತಿ ಹೆಚ್ಚು ಡಿಮ್ಯಾಂಡ್ ಇದೆ.

ಇನ್ನು ಹಣ್ಣುಗಳ ರಾಜ ‘ಮಾವು’ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇನ್‌ಸ್ಟಾಮಾರ್ಟ್‌ನಲ್ಲಿ ‘ಲಾಲ್‌ಬಾಗ್‌ ಸಿಂಧೂರ ಮಾವು’ ಅತಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಬಂಗನಪಲ್ಲಿ ಮತ್ತು ಕಾಯಿ ಮಾವಿನಕಾಯಿ ನಂತರದ ಸ್ಥಾನದಲ್ಲಿವೆ. ಕೇರಳದ ಕೋಳಿಕ್ಕೋಡ್‌, ತಮಿಳುನಾಡಿನ ಮದುರೈ, ತಿರುಚ್ಚಿ, ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ನೆಲ್ಲೂರು ನಗರಗಳಿಂದ ಮಾವಿಗೆ ಭಾರೀ ಬೇಡಿಕೆ ಬರುತ್ತಿವೆ.

ಇದೇ ವೇಳೆ ಜೀರಾ ಮಸಾಲಾ ಸೋಡಾಕ್ಕೂ ಬೇಡಿಕೆ ಹೆಚ್ಚಾಗಿದ್ದು, ತಿಂಗಳಿಂದ ತಿಂಗಳಿಗೆ ಬರೋಬ್ಬರಿ ಶೇ. 900ರಷ್ಟು ಜಿಗಿತ ಕಂಡುಬಂದಿದೆ. ಕೋಲ್ಡ್ ಕಾಫಿ ಆರ್ಡರ್‌ಗಳಲ್ಲಿ ಶೇ. 700ರಷ್ಟು ಏರಿಕೆಯಾಗಿದ್ದರೆ, ಎಳನೀರು, ಮಜ್ಜಿಗೆ, ಲಸ್ಸಿ ಹಾಗೂ ಮಿಲ್ಕ್‌ಶೇಕ್‌ಗಳಿಗೆ ಸಂಜೆ 6 ರಿಂದ 9ರ ನಡುವೆ ಅತಿ ಹೆಚ್ಚು ಬೇಡಿಕೆ ಬರುತ್ತಿದೆ.

ಐಸ್‌ಕ್ರೀಮ್ ಬಳಕೆಯಲ್ಲಿ ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಪುಣೆ ಮುಂಚೂಣಿಯಲ್ಲಿವೆ. ಇನ್ನು ಸೆಂಟ್ರಲ್ ಗೋವಾ, ತ್ರಿಶೂರ್‌, ತಿರುವಲ್ಲಿ, ನಾಗರ್‌ಕೋಯಿಲ್ ಮತ್ತು ಮಣಿಪಾಲದಲ್ಲಿ ‘ಬಳಕೆದಾರರ ತಲಾ ಆರ್ಡರ್‌ʼಗಳ ಸಂಖ್ಯೆ ಹೆಚ್ಚಾಗಿದೆ. ಬೇಸಿಗೆಯ ವಸ್ತುಗಳಿಗಾಗಿ ಗ್ರಾಹಕರು ಭಾರಿ ಮೊತ್ತವನ್ನು ವ್ಯಯಿಸುತ್ತಿದ್ದು, ಬೆಂಗಳೂರಿನ ಗ್ರಾಹಕರೊಬ್ಬರು ಕೋಲ್ಡ್ ಕಾಫಿ, ಮಜ್ಜಿಗೆ, ಮಾವು, ಐಸ್‌ಕ್ರೀಮ್ ಮತ್ತು ಮೊಸರಿಗಾಗಿಯೇ ಬರೋಬ್ಬರಿ 11,000 ರೂ.ಗೂ ಹೆಚ್ಚು ಖರ್ಚು ಮಾಡಿದ್ದಾರೆ.

https://www.newsics.com/2026/04/30/bangalore-race-course-shifts-to-kunigal-englands-jockey-club-to-design-new-track/

 

 

TAGGED:Bangalore is the ice cream capital of the country!
Share This Article
Facebook Twitter Copy Link Print
Previous Article Bangalore Race Course ಬೆಂಗಳೂರು ರೇಸ್ ಕೋರ್ಸ್ ಕುಣಿಗಲ್‌ಗೆ ಶಿಫ್ಟ್ : ಹೊಸ ಟ್ರ್ಯಾಕ್‌ ವಿನ್ಯಾಸ ಮಾಡಲಿದೆ ಇಂಗ್ಲೆಂಡ್‌ನ ಜಾಕಿ ಕ್ಲಬ್!
Next Article ಕ್ರೂಸ್ ದೋಣಿ ಮುಳುಗಿ ನಾಲ್ವರು ಸಾವು, ಹಲವರು ನಾಪತ್ತೆ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?