newsics.com/ನ್ಯೂಸಿಕ್ಸ್
ಬೆಂಗಳೂರು: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಸದ್ಯ ಅವರ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಸ್ಥಾನ ರದ್ದಾಗಿದೆ.
https://youtube.com/shorts/A7gPa–K6QY?si=UClQxtCV5fiwGWUd
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸಭಾಧ್ಯಕ್ಷರ ಪಾತ್ರ ಮತ್ತು ನಿಯಮಗಳ ಕುರಿತು ಎದ್ದಿರುವ ಗೊಂದಲಗಳಿಗೆ ತೆರೆ ಎಳೆದರು.
ಯಾವುದೇ ಒಬ್ಬ ಜನಪ್ರತಿನಿಧಿಯು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ತಕ್ಷಣ, ನಿಯಮಗಳ ಪ್ರಕಾರ ಅವರ ಶಾಸಕ ಸ್ಥಾನ ತಾನಾಗಿಯೇ ರದ್ದಾಗುತ್ತದೆ. ಇದನ್ನು ರದ್ದು ಮಾಡುವ ವಿಶೇಷ ಅಧಿಕಾರ ಸಭಾಧ್ಯಕ್ಷರಿಗಿಲ್ಲ. ಒಂದು ವೇಳೆ ನ್ಯಾಯಾಲಯವು ಈ ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ ಮಾತ್ರ ಅವರ ಸದಸ್ಯತ್ವ ಮರುಸ್ಥಾಪನೆಯಾಗುತ್ತದೆ,ಎಂದು ಯು.ಟಿ. ಖಾದರ್ ವಿವರಿಸಿದರು.
ಕೇವಲ ಶಾಸಕ ಸ್ಥಾನ ರದ್ದಾಗುವುದು ಮಾತ್ರವಲ್ಲ, ಅವರು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ದಿನದಿಂದ ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಗೆ (ಶಾಸಕ, ಸಂಸದ ಇತ್ಯಾದಿ) ಸ್ಪರ್ಧಿಸುವಂತಿಲ್ಲ.
https://www.newsics.com/2026/04/29/stalins-party-wins-in-tamil-nadu-ndas-calculations-are-reversed/