newsics.com/ನ್ಯೂಸಿಕ್ಸ್
ರಾಯಚೂರು : ಅತ್ತನೂರು ದಿಡ್ಡಿ ಬಸವೇಶ್ವರ ಜಾತ್ರೆ ನೋಡುವುದಕ್ಕೆಂದು ಬಂದು ವಾಪಸ್ ಹೋಗುವ ವೇಳೆ ನಾಲ್ವರು ಪ್ರಯಾಣಿಸುತ್ತಿದ್ದ ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಶಾಖಾಪುರ ಮುಖ್ಯರಸ್ತೆಯ ನಡೆದಿದೆ.
https://youtube.com/shorts/eOoYZp9a9F0?si=CP6V90gKWCTFTFCS
ಮೃತರನ್ನು ಬೈಕ್ ಓಡಿಸುತ್ತಿದ್ದ 37 ವರ್ಷದ ಅಂಜಿನಯ್ಯ ನಾಯಕ ಹಾಗೂ 10 ವರ್ಷದ ಬಾಲಕಿ ಅರ್ಚನಾ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಮೃತಪಟ್ಟವರು ಹಾಗೂ ಗಾಯಾಳುಗಳು ನಿನ್ನೆ ಸಂಜೆ ಅತ್ತನೂರು ದಿಡ್ಡಿ ಬಸವೇಶ್ವರ ಜಾತ್ರೆಗೆ ಬಂದಿದ್ದರು. ಬಳಿಕ ರಾತ್ರಿ ಶಾಖಾಪುರಕ್ಕೆ ಒಂದೇ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಮಾರ್ಗಮಧ್ಯೆ ಇವರು ಸಾಗುತ್ತಿದ್ದ ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಮೃತರ ದೇಹ ನಜ್ಜುಗುಜ್ಜಾಗಿದ್ದು, ದೇಹದ ಭಾಗಗಳು ಛಿದ್ರ ಛಿದ್ರವಾಗಿವೆ.
ಗಾಯಾಳುಗಳಲ್ಲಿ 19 ಶ್ವೇತಾ ಅವರ ಕಾಲು ಕಟ್ ಆಗಿದೆ ಹಾಗೂ 22 ವರ್ಷದ ಲಕ್ಷ್ಮಿ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಬ್ಬರನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಗೆ ಸಂಬಂಧಿಸಿದಂತೆ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.newsics.com/2026/04/27/new-rules-for-lpg-booking-to-come-into-effect-from-may-1/