Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್, ಡ್ರಾಪ್ ಕೇಳಿದ ಯುವತಿಯನ್ನು ಶೆಡ್‌ಗೆ ಕರೆದೊಯ್ದಿದ್ದ ಬೈಕ್ ಸವಾರ!
Uncategorized

ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್, ಡ್ರಾಪ್ ಕೇಳಿದ ಯುವತಿಯನ್ನು ಶೆಡ್‌ಗೆ ಕರೆದೊಯ್ದಿದ್ದ ಬೈಕ್ ಸವಾರ!

Share
2 Min Read
SHARE

newsics.com

ಬೆಂಗಳೂರು: ಬೆಂಗಳೂರಿನಲ್ಲಿ ಪದವಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೊದಲು ಆಟೋದಲ್ಲಿ ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಬೈಕ್‌ನಲ್ಲಿ ಡ್ರಾಪ್ ಕೊಡುವುದಾಗಿ ಕರೆದೊಯ್ದ ವ್ಯಕ್ತಿಯೇ ಯುವತಿಯನ್ನು ನಿರ್ಜನ ಪ್ರದೇಶದ ಶೆಡ್‌ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿ ಯುವತಿಯ ಬಟ್ಟೆಯನ್ನು ಹರಿದು ಘಾಸಿಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಈ ಘಟನೆ ಶನಿವಾರ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ನಡೆದಿದೆ. ಸಂತ್ರಸ್ತ ಯುವತಿ ಮಹಾರಾಷ್ಟ್ರ ಮೂಲದವಳಾಗಿದ್ದು, ಆನೇಕಲ್ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಳು. ನಿನ್ನೆ ಸ್ನೇಹಿತನ ಜತೆ ಕೋರಮಂಗಲದ ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಪಾರ್ಟಿಗೆ ಹೋಗಿದ್ದಾಳೆ. ನಂತರ ರಾತ್ರಿ ವೇಳೆ ವಾಪಸ್ ರೂಮಿಗೆ ಹೋಗುವಾಗ ಯುವತಿ ಸ್ನೇಹಿತನ ಕಾರನ್ನು ತಾನೇ ಓಡಿಸುವುದಾಗಿ ಹೇಳಿ ಕಾರು ಚಾಲನೆ ಮಾಡಿದ್ದಾಳೆ. ಈ ವೇಳೆ ಮೂರು ಆಟೋಗಳಿಗೆ ಟಚ್ ಮಾಡಿದ್ದಾಳೆ. ಆಟೋ ಚಾಲಕರು ಯುವತಿ ಮೇಲೆ ಗಲಾಟೆ ಮಾಡಲು ಮುಂದಾಗಿದ್ದಾರೆ. ಆಗ ಯುವತಿ ಭಯದಿಂದ ಪೊಲೀಸರ ಸಹಾಯವಾಣಿ 112ಗೆ ಕರೆ ಮಾಡಿದ್ದಾಳೆ ಎಂದು ತಿಳಿಸಿದರು.

ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ತನ್ನನ್ನು ವಶಕ್ಕೆ ಪಡೆಯಬಹುದು ಎಂಬ ಭಯದಿಂದ ಯುವತಿ ಅಲ್ಲಿಂದ ತನ್ನ ರೂಮಿಗೆ ಹೋಗಲು ತಡರಾತ್ರಿ ಅಪರಿಚಿತ ಬೈಕ್ ಸವಾರರಿಗೆ ಅಡ್ಡ ಹಾಕಿ ಡ್ರಾಪ್ ಕೇಳಿದ್ದಾಳೆ. ಬೈಕ್ ಸವಾರನನ್ನು ಗೋಗರೆದು ತನ್ನನ್ನು ಡ್ರಾಪ್ ಮಾಡುವಂತೆ ಕೇಳಿದ್ದಾಳೆ. ಆಗ ಬೈಕ್‌ನವನು ಡ್ರಾಪ್ ಮಾಡಲು ಒಪ್ಪಿಕೊಳ್ಳುತ್ತಿದ್ದಂತೆ ಸ್ನೇಹಿತನನ್ನು ಸ್ಥಳದಲ್ಲಿಯೇ ಬಿಟ್ಟು ತೆರಳಿದ್ದಾಳೆ.

ಬೈಕ್‌ನಲ್ಲಿ ಯುವತಿ ಕುಳಿತ ನಂತರ ತನ್ನ ಮೊಬೈಲ್‌ನಲ್ಲಿದ್ದ ಅಲರ್ಟ್ ಆ್ಯಪ್ ಆನ್ ಮಾಡಿ ತನ್ನ ಸ್ನೇಹಿತೆ ಹಾಗೂ ಅಪ್ಪನಿಗೆ ತುರ್ತು ಸಹಾಯದ ಕುರಿತು ಸಂದೇಶ ಹೋಗುವಂತೆ ಲೊಕೇಷನ್ ಆನ್ ಮಾಡಿದ್ದಾಳೆ.

ಅಷ್ಟೊತ್ತಿಗಾಗಲೇ ಮುಖ್ಯ ರಸ್ತೆಯನ್ನು ಬಿಟ್ಟು ಒಳ ರಸ್ತೆಯಲ್ಲಿ ಸಾಗಿದ್ದ ಬೈಕ್ ಸವಾರ ಖಾಲಿ ಶೆಡ್ ಬಳಿ ಬೈಕ್ ನಿಲ್ಲಿಸಿ ಆಕೆಯನ್ನು ಶೆಡ್‌ನೊಳಗೆ ಕೂಡಿಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಷ್ಟೊತ್ತಿಗಾಗಲೇ ಆಕೆಯ ಸ್ನೇಹಿತೆ ಪೊಲೀಸರನ್ನು ಸಂಪರ್ಕಿಸಿ ಯುವತಿ ಇರುವ ಲೈವ್ ಲೊಕೇಷನ್ ಸ್ಥಳಕ್ಕೆ ತಲುಪಿದ್ದಾಳೆ ಎಂದರು.

ಪೊಲೀಸರ ವಾಹನ ಶೆಡ್ ಬಳಿಗೆ ಹೋಗುತ್ತಿದ್ದಂತೆ ಬೈಕ್‌ನಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ, ಇದಕ್ಕೂ ಮೊದಲೇ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ವಿರೋಧ ಮಾಡಿದಾಗ ಆಕೆಯನ್ನು ಥಳಿಸಿ, ಮೈಮೇಲಿದ್ದ ಬಟ್ಟೆಯನ್ನು ಹರಿದು ಹಾಕಿದ್ದಾನೆ. ಪೊಲೀಸರು ಯುವತಿಯನ್ನು ನೋಡಿದಾಗ ಹರಿದ ಬಟ್ಟೆಯಲ್ಲಿ ಅಸ್ವಸ್ಥಳಾಗಿ ಬಿದ್ದಿದ್ದಳು. ನಂತರ ಅಲ್ಲಿಯೇ ಪಕ್ಕದ ಗೂಡ್ಸ್ ವಾಹನವೊಂದರಲ್ಲಿದ್ದ ಟಾರ್ಪಲ್ ಸುತ್ತಿ ಯುವತಿಯನ್ನು ಹೆಬ್ಬಗೋಡಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಿದರು.

ಈ ಘಟನೆಯಲ್ಲಿ ಯುವತಿ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ಆಗಿರುವುದು ಖಚಿತವಾಗಿದೆ. ಆದರೆ, ಅತ್ಯಾಚಾರ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ವರದಿ ಬಂದ ನಂತರ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ.

ನೂಡಲ್ಸ್ ತಿಂದ್ಮೇಲೆ ದೇಹದೊಳಗೆ ಹೀಗೆಲ್ಲ ಆಗತ್ತೆ…

ಬಸ್- ಕಾರು ಡಿಕ್ಕಿ: ಒಂದೇ ಕುಟುಂಬದ ನಾಲ್ವರ ಸಾವು

NASA ಪ್ರಕಾರ.. ನಾಳೆ ನೀವು ಚಂದ್ರನ ಹೇಗೆ ನೋಡಬಹುದು..?

TAGGED:Twist in girl student rape case: Bike rider took young woman to shed after asking for drop
Share This Article
Facebook Twitter Copy Link Print
Previous Article ನೂಡಲ್ಸ್ ತಿಂದ್ಮೇಲೆ ದೇಹದೊಳಗೆ ಹೀಗೆಲ್ಲ ಆಗತ್ತೆ…
Next Article ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌.. ಹೊಸ ಮಾರ್ಗದ ಕಾಮಗಾರಿ ಪೂರ್ಣ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

Uncategorized

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read
Uncategorized

Cockroach ಜಿರಳೆ ಕಂಡರೆ ಮಹಿಳೆಯರು ಅಷ್ಟೊಂದು ಕಿರುಚಾಡುವುದೇಕೆ? ಇದರ ಹಿಂದಿರುವ ಅಸಲಿ ಸೈಕಾಲಜಿ ಇಲ್ಲಿದೆ

2 Min Read
Uncategorizedಕರ್ನಾಟಕಪ್ರಮುಖ

Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

2 Min Read
Uncategorized

Rain Water ಮಳೆಯಲ್ಲಿ ನೆನೆದರೆ ಜ್ವರ ಬರುತ್ತೆ ಅನ್ಕೋಬೇಡಿ, ಹತ್ತು ನಿಮಿಷ ಮಳೆನೀರಿನಲ್ಲಿ ನೆನೆಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?