newsics.com
ಭಾರತ ಚಿತ್ರರಂಗದ ಕಂಡ ಅತ್ಯಂತ ಯಶಸ್ವಿ ನಾಯಕಿಯರಲ್ಲಿ ಶ್ರೀದೇವಿ ಸಹ ಒಬ್ಬರು. ಶ್ರೀದೇವಿ ತೆರೆಯ ಮೇಲೆ ಹಾಗೂ ತೆರೆಯ ಆಚೆ ಏರಿಳಿತ ಜೀವನ ಕಂಡವರು. ಅವರ ಸಾವು ಸಹ ಸಾಕಷ್ಟು ಅನುಮಾನ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂದಿಗೂ ಸಹ ಆಗಾಗ್ಗೆ ಸುದ್ದಿಯಲ್ಲಿರುವ, ಚರ್ಚೆಯಲ್ಲಿರುವ ನಟಿ ಶ್ರೀದೇವಿ.
ಇದೀಗ ಶ್ರೀದೇವಿ ಅವರ ನಿಗೂಢ ಸಾವಿಗೆ ಮೂರು ದಶಕಗಳ ನಂತರವೂ ತೆರೆದುಕೊಳ್ಳದ ರಹಸ್ಯವೊಂದು ಪ್ಯಾರಾನಾರ್ಮಲ್ ತನಿಖೆಯ ಮೂಲಕ ಹೊರಬಿದ್ದಿದೆ. ಹೌದು, ಅತೀಂದ್ರಿಯ ಸಂಶೋಧಕ ಸೌರಭ್ ಪೂನಿಯಾ ಅವರು ಶ್ರೀದೇವಿ ಆತ್ಮವನ್ನು ಮಾತನಾಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಪ್ರಕಾರ, ಶ್ರೀದೇವಿ ಅವರ ಸಾವು ಕೇವಲ ಅಪಘಾತವಲ್ಲ, ಕೊಲೆ. ಎಂದು ಆತ್ಮವೇ ಹೇಳಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ್ದಾರೆ.
ಶ್ರೀದೇವಿ ಅವರು ಚಿತ್ರ ನಿರ್ಮಾಪಕ ಬೋನಿ ಕಪೂರ್ ಜೊತೆ ಮದುವೆಯಾದರು. ಇವರಿಗೆ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಎಂಬ ಮಕ್ಕಳಿದ್ದಾರೆ. ಶ್ರೀದೇವಿ ಅವರು ಬೋನಿ ಕಪೂರ್ ಸಂಬಂಧಿಕರಾದ ಮೋಹಿತ್ ಮಾರ್ವಾ ಮದುವೆಯಲ್ಲಿ ಭಾಗವಹಿಸಲು ದುಬೈಗೆ ಹೋಗಿದ್ದರು. ಬಾತ್ಟಬ್ನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾದರು. ದುಬೈ ಪೊಲೀಸರು ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ, ಶ್ರೀದೇವಿ ಅವರು ಬಾತ್ಟಬ್ನಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಅವರ ದೇಹದಲ್ಲಿ ಮದ್ಯದ ಅಂಶವೂ ಇತ್ತಂತೆ.
ಆರಂಭದಲ್ಲಿ ನಾನು ತನಿಖೆ ಮಾಡಿದಾಗ ಶ್ರೀದೇವಿ ಆತ್ಮ ಏನೂ ಹೇಳಲಿಲ್ಲ, ಪದೇ ಪದೇ ಕೇಳಿದೆ. ಅದಾದ ಬಳಿಕ ನಾನು ಯಾರು ನಿಮಗೆ ಹೊಡೆದು ಬಾತ್ಟಬ್ನಲ್ಲಿ ಮುಳುಗಿಸಿದ್ದಾರೆ ಎಂದು ಪ್ರಶ್ನೆ ಕೇಳಿದೆ. ಆಗ ಅವರ ಆತ್ಮ ಬೋನಿ ಕಪೂರ್ ಎಂದು ಸ್ಪಷ್ಟವಾಗಿ ಹೇಳಿದೆ. ನಾನು ಇದನ್ನೆಲ್ಲ ಹೇಳಿದರೆ ಯಾರೂ ನಂಬೋದಿಲ್ಲ, ನನ್ನ ಬಳಿ ಆಡಿಯೋ ರೆಕಾರ್ಡ್ ಕೂಡ ಇದೆ ಎಂದು ಹೇಳಿದ್ದಾರೆ.