newsics.com
ಬೆಂಗಳೂರು: ದೇಶದ ಹಿರಿಯ ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜ್ಯ ಸರ್ಕಾರವು ಭರ್ಜರಿ ಕೊಡುಗೆಯೊಂದನ್ನು ನೀಡಿದೆ. 92ರ ಇಳಿವಯಸ್ಸಿನಲ್ಲೂ ಸಕ್ರಿಯ ರಾಜಕಾರಣದಲ್ಲಿರುವ ಗೌಡರ ಪ್ರಯಾಣದ ಸೌಕರ್ಯಕ್ಕಾಗಿ 1.25 ಕೋಟಿ ರೂ. ಬೆಲೆಯ ಐಷಾರಾಮಿ ಕಾರು ಖರೀದಿಸಲು ಸರ್ಕಾರ ಅಧಿಕೃತ ಒಪ್ಪಿಗೆ ಸೂಚಿಸಿದೆ.
ಗರಿಷ್ಠ ಸುರಕ್ಷತೆಗೆ ಹೆಸರಾಗಿರುವ Volvo XC90 (ವೋಲ್ವೋ ಎಕ್ಸ್‌ಸಿ 90) ಮಾಡೆಲ್‌ನ ಕಾರನ್ನು ದೇವೇಗೌಡರಿಗಾಗಿ ಖರೀದಿಸಲಾಗುತ್ತಿದೆ. ಇದರ ಒಟ್ಟು ವೆಚ್ಚ ಅಂದಾಜು 1,25,65,388 ರೂ. ಆಗಿರಲಿದೆ.
ಪಾರದರ್ಶಕತೆ ಕಾಯ್ದೆಯಿಂದ (KTPP Act) ವಿನಾಯಿತಿ ನೀಡಿ, ಬೆಂಗಳೂರಿನ ಮಾರ್ಷಲ್ ಮೋಟಾರ್ಸ್‌ನಿಂದ ನೇರವಾಗಿ ಕಾರು ಖರೀದಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸರ್ಕಾರ ಅನುಮತಿ ನೀಡಿದೆ.