https://youtube.com/shorts/RcxcteKkGZ8?si=yxDv0iURLfg799X9
newsics.com
ಸ್ಯಾಂಡಲ್ವುಡ್ನ ಖ್ಯಾತ ನಟ ನವೀನ್ ಕೃಷ್ಣ ಅವರ ಮಗ ಹರುಷ್ ಇದೀಗ ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾರೆ. ತಮ್ಮ ಸುಮಧುರ ಹಾಡಿನ ಮೂಲಕ ತೀರ್ಪುಗಾರರ ಮನಗೆದ್ದು ಹರುಷ್ ಶೋಗೆ ಸೆಲೆಕ್ಟ್ ಆಗಿದ್ದಾರೆ.
ಹರುಷ್ ಅವರ ತಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಖ್ಯಾತ ಧಾರವಾಹಿಯ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದರು. ವಿಷ್ಣುವರ್ಧನ್ ಸೇರಿದಂತೆ ಸ್ಟಾರ್ ನಟರೊಂದಿಗೆ ನಟಿಸಿದ್ದು, ಒಳ್ಳೆಯ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.
ನವಿಲೇ ಹೇ ನವಿಲೇ ಹಾಡು ಹೇಳಿ ಹರುಷ್ ಎಂಬ ಸ್ಪರ್ಧಿ ಆಯ್ಕೆಯಾಗುತ್ತಾರೆ. ತೀರ್ಪುಗಾರರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಾಡುಗಳನ್ನು ಕೇಳಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಾರೆ. ಅದೇ ರೀತಿಯಲ್ಲಿಯೇ ಹರುಷ್ ಸಹ ಆಯ್ಕೆಯಾಗಿದ್ದರು. ಸ್ಪರ್ಧಿ ಆಯ್ಕೆ ಬಳಿಕ ಪೋಷಕರು ವೇದಿಕೆಗೆ ಬಂದಾಗ ತೀರ್ಪುಗಾರರು ಸಂತೋಷದಿಂದ ಶಾಕ್ ಆದರು.
ಹಾಗೆಯೇ ಮಗ ಹರುಷ್ ಶೋಗೆ ಸೆಲೆಕ್ಟ್ ಬಳಿಕ ಮಾತನಾಡಿದ ತಂದೆ ನವೀನ್ ಕೃಷ್ಣ ಬಹಳ ಖುಷಿ ವ್ಯಕ್ತಪಡಿಸಿದ್ದಾರೆ. ಈ ಒಂದು ವೇದಿಕೆಗೆ ಬರಬೇಕಾದರೆ ತುಂಬಾ ಶ್ರದ್ಧೆ ಇರಬೇಕು, ತುಂಬಾ ಕಲಿಕೆ ಇರಬೇಕು, ಇದಕ್ಕಿಂತ ಮುಂಚೆಯೂ ನನ್ನ ಇಬ್ಬರು ಮಕ್ಕಳು ಆಡಿಷನ್ ಕೊಟ್ಟಿದ್ದರು. ಆದ್ರೆ ಇಬ್ಬರು ಆಯ್ಕೆಯಾಗಿರಲಿಲ್ಲ. ಆ ಬಳಿಕ ಇದೀಗ ನಿರಂತರ ಅಭ್ಯಾಸದ ಬಳಿಕ ಹರುಷ್ ಆಯ್ಕೆ ಆಗಿದ್ದಾನೆ ಎಂದು ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ನವೀನ್ ಕೃಷ್ಣ ಹೇಳಿದ್ದಾರೆ.