https://youtube.com/shorts/RcxcteKkGZ8?si=yxDv0iURLfg799X9
newsics.com
ಮಹಿಳಾ ವಿದ್ಯಾರ್ಥಿನಿಯರು ಉಡುಪಿನ ಬಗ್ಗೆ ನೀಡಿರುವ ಕೀಳುಮಟ್ಟದ ಹೇಳಿಕೆ ನೀಡಿರುವ ತಮಿಳುನಾಡು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ವಿ ನಾಗರಾಜ್ ಅವರು ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ತರಗತಿಯ ಪ್ರತಿನಿಧಿಗಳೊಂದಿಗೆ ನಡೆಸಿದ ಸಾಮಾನ್ಯ ಸಭೆಯಲ್ಲಿ ಕುಲಪತಿಗಳು ಈ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಮಹಿಳಾ ವಿದ್ಯಾರ್ಥಿನಿಯರು ಇಂತಹ ಬಟ್ಟೆ ಧರಿಸುವುದು ಸರಿಯಲ್ಲ ಎನ್ನುವ ಮೂಲಕ, ಕಿರುಕುಳಕ್ಕೆ ಸಂತ್ರಸ್ತೆಯರ ಬಟ್ಟೆಯೇ ಕಾರಣ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.
ಕುಲಪತಿಗಳ ನಡೆಯನ್ನು ಖಂಡಿಸಲು ವಿದ್ಯಾರ್ಥಿಗಳು ವಿಭಿನ್ನ ಹಾದಿ ತುಳಿದರು. ನೂರಾರು ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿಯೇ ಶಾರ್ಟ್ಸ್ ಧರಿಸಿ ಬಂದು ಕುಲಪತಿಗಳ ಕಚೇರಿ ಮುಂದೆ ನಿಂತು ಪ್ರತಿಭಟನೆ ನಡೆಸಿದರು. ನಮ್ಮ ಬಟ್ಟೆಗಳನ್ನು ಬದಲಿಸುವಂತೆ ಹೇಳುವ ಬದಲು ನಿಮ್ಮ ಕೊಳಕು ಮನಸ್ಥಿತಿಯನ್ನು ಬದಲಿಸಿಕೊಳ್ಳಿ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಪ್ರೊಫೆಸರ್ ನಾಗರಾಜ್ ಅವರು ಈ ಹೇಳಿಕೆಯನ್ನು ತಂದೆಯ ಸ್ಥಾನದಲ್ಲಿ ನಿಂತು ನೀಡಿದ ಸಲಹೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರಾದರೂ, ವಿದ್ಯಾರ್ಥಿಗಳು ಅದನ್ನು ಕಿಂಚಿತ್ತೂ ಒಪ್ಪಲಿಲ್ಲ. ಕ್ಷಮೆಯಾಚನೆ ಮಾಡಲೇಬೇಕು ಎಂದು ಪಟ್ಟು ಹಿಡಿದರು.
ಒಡಿಶಾ ಮತ್ತು ಜಬಲ್‌ಪುರದ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಕುಲಪತಿಯಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ನಾಗರಾಜ್ ಅವರು ವಿದೇಶಿ ವಿವಿಗಳಲ್ಲೂ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕಾನೂನು ಕಲಿಸುವ ಮತ್ತು ಸಂವಿಧಾನದ ಸಮಾನತೆಯನ್ನು ಎತ್ತಿ ಹಿಡಿಯಬೇಕಾದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೇ ಈ ರೀತಿ ಲೈಂಗಿಕ ಕಿರುಕುಳವನ್ನು ಸಮರ್ಥಿಸುವಂತೆ ಮಾತನಾಡಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.
https://www.newsics.com/2026/04/19/father-slits-the-throats-of-twin-daughters/