https://youtube.com/shorts/U8nUEfM6Yjc?si=6fq3EiIID4lUG0c4
newsics.com
ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆಯ ನಡುವೆ ಇರಾನ್ ಜೊತೆಗಿನ ಹೊಸ ಶಾಂತಿ ಒಪ್ಪಂದದ ಮಾತುಕತೆಗಳಿಗೆ ಬುಧವಾರದವರೆಗೆ ಅಂತಿಮ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಒಮ್ಮತ ಮೂಡದಿದ್ದರೆ ಮತ್ತೆ ಭೀಕರ ವೈಮಾನಿಕ ದಾಳಿಗಳು ನಡೆಯಲಿವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಇರಾನ್ ಈ ಒಪ್ಪಂದಕ್ಕೆ ಒಪ್ಪಲೇಬೇಕು. ಇಲ್ಲದಿದ್ದರೆ ಬುಧವಾರದ ನಂತರ ಪರಿಸ್ಥಿತಿ ಬದಲಾಗಲಿದೆ. ಮತ್ತೆ ಬಾಂಬ್‌ಗಳು ಬೀಳಲಿವೆ ಎಂದು ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಗುಡುಗಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸಬೇಕು ಮತ್ತು ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂಬುದು ಅಮೆರಿಕದ ಪ್ರಮುಖ ಬೇಡಿಕೆಯಾಗಿದೆ.
ಮಾತುಕತೆ ವಿಫಲವಾದರೆ ಇರಾನ್‌ನ ಇಂಧನ ಘಟಕಗಳು ಮತ್ತು ಮೂಲಸೌಕರ್ಯಗಳ ಮೇಲೆ ‘ಆಪರೇಷನ್ ಎಪಿಕ್ ಫ್ಯೂರಿ’ ಅಡಿಯಲ್ಲಿ ದಾಳಿ ಮುಂದುವರಿಸುವುದಾಗಿ ಶ್ವೇತಭವನ ತಿಳಿಸಿದೆ.
https://www.newsics.com/2026/04/18/yuzvendra-chahal-moves-court-against-bollywood-actress/