https://youtube.com/shorts/U8nUEfM6Yjc?si=6fq3EiIID4lUG0c4
newsics.com
ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನತೆ ದಿನೇದಿನೇ ಗಂಭೀರವಾಗುತ್ತಿದ್ದು, ಅಮೆರಿಕಾ ನೌಕಾ (ಬ್ಲಾಕೇಡ್) ದಿಗ್ಬಂಧನ ಮುಂದುವರಿಸಿದರೆ ಜಾಗತಿಕವಾಗಿ ಅತ್ಯಂತ ಪ್ರಮುಖ ಸಾಗರ ಮಾರ್ಗವಾದ ಸ್ಟ್ರೇಟ್ ಆಫ್ ಹೋರ್ಮುಜ್ ಅನ್ನು ಮತ್ತೆ ಬಂದ್ ಮಾಡುವುದಾಗಿ ಇರಾನ್ ಎಚ್ಚರಿಕೆನೀಡಿದೆ.
ಲೆಬನಾನ್ನಲ್ಲಿ ಕದನ ವಿರಾಮ ಒಪ್ಪಂದ ಏರ್ಪಟ್ಟ ನಂತರ, ಇರಾನ್ ಶುಕ್ರವಾರವಷ್ಟೇ ಈ ಜಲಸಂಧಿಯನ್ನು ಸಂಚಾರಕ್ಕಾಗಿ ಮುಕ್ತಗೊಳಿಸಿತ್ತು. ಆದರೆ, ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು ಅಮೆರಿಕ ಮುಂದುವರಿಸಿದ್ದರಿಂದ ಪರಿಸ್ಥಿತಿ ಮತ್ತೆ ವಿಕೋಪಕ್ಕೆ ಹೋಗಿದೆ.
ಇರಾನ್ ಬಂದರುಗಳ ಸುತ್ತ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವನ್ನು ತೆರವುಗೊಳಿಸದ ಕಾರಣ, ವಾಷಿಂಗ್ಟನ್ ತನ್ನ ವಾಗ್ದಾನವನ್ನು ಮುರಿದಿದೆ ಎಂದು ಇರಾನ್ ಕಿಡಿಕಾರಿದೆ.