Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಬೆವರಿಳಿಸುವ ಬೇಸಿಗೆಯಲ್ಲಿ ದೇಹ ತಂಪಾಗಿಡಲು ಈ 5 ಟ್ರಿಕ್ಸ್ ಟ್ರೈ ಮಾಡಿ​
ಲೈಫ್‌ಸ್ಟೈಲ್ಆರೋಗ್ಯ

ಬೆವರಿಳಿಸುವ ಬೇಸಿಗೆಯಲ್ಲಿ ದೇಹ ತಂಪಾಗಿಡಲು ಈ 5 ಟ್ರಿಕ್ಸ್ ಟ್ರೈ ಮಾಡಿ​

Share
2 Min Read
SHARE

ಈಗ ಬಿರು ಬೇಸಿಗೆಗಾಲ. ಮನೆಯಿಂದ ಹೊರಗೆ ಕಾಲಿಡುವ ಮುನ್ನ ಹತ್ತು ಬಾರಿ ಯೋಚಿಸುವಂತ ಪರಿಸ್ಥಿತಿ. ಅಷ್ಟರ ಮಟ್ಟಿಗೆ ತಾಪಮಾನ ಜೋರಾಗಿದೆ. ಸುಡುವ ಬಿಸಿಲಿನಲ್ಲಿ ರಸ್ತೆಯಲ್ಲಿ ಓಡಾಡುವುದು, ಒಂದು ಸೂರಿನಡಿ ಕೂರುವುದು ಕಷ್ಟಸಾಧ್ಯ ಎನ್ನುವಂತಾಗಿದೆ. ಬೇಸಿಗೆ ಬೇಗೆಗೆ ದೇಹದ ಉಷ್ಣಾಂಶ ಕೂಡ ಹೆಚ್ಚಾಗಿ, ಮೈಯಿಂದ ಬೆವರು ಮಳೆ ಹನಿಯಂತೆ ಕೆಳಗಿಳಿಯುತ್ತದೆ.

ಇಂತಹ ಸಮಯದಲ್ಲಿ ಒಂದೇ ಕಡೆ ಹೆಚ್ಚು ಸಮಯ ಕುಳಿತುಕೊಳ್ಳುವುದು ಅಥವಾ ವಾಹನ ಓಡಿಸುವುದು ಮಾಡಿದರೆ, ಮೂಲವ್ಯಾಧಿಯಂತಹ ಸಮಸ್ಯೆಗಳು ಕಾಡಲಾರಂಭಿಸುತ್ತವೆ.
ನೆತ್ತಿ ಸುಡುವ ಬಿಸಿಲಿನ ಬೇಗೆಯಲ್ಲಿ ಫ್ಯಾನ್​, ಎಸಿಗಳು ವಿಪರೀತ ಕೆಲಸ ಮಾಡುತ್ತವೆ. ಜನರು ತಾಜಾ ಹಣ್ಣಿನ, ರೆಡಿಮೇಡ್​ ಸಾಫ್ಟ್​ ಡ್ರಿಂಕ್ಸ್​ ಸೇರಿದಂತೆ ಇನ್ನಿತರ ಪಾನೀಯಗಳನ್ನು ಸೇವಿಸುತ್ತಾರೆ. ಕೆಲವರಂತು ಸೆಕೆ ತಡೆಯಲಾಗದೆ, ಕೋಲ್ಡ್​ ನೀರನ್ನು ಹೆಚ್ಚಾಗಿ ಕುಡಿಯುತ್ತಾರೆ. ಅಸಲಿಗೆ, ಇವೆಲ್ಲವೂ ನಾಲಿಗೆ ಮತ್ತು ಗಂಟಲನ್ನು ತಂಪಾಗಿರಿಸುವುದೇ ವಿನಃ ದೇಹದ ಒಳಗಲ್ಲ. ಉಷ್ಣಾಂಶತೆಯನ್ನು ಕಡಿಮೆ ಮಾಡಲು ನೈಸರ್ಗಿಕವಾದ ಈ ಐದು ಆಹಾರಗಳನ್ನು ಸೇವಿಸಿದರೆ, ದೇಹ ಕೂಲ್​ ಆಗಿರುವುದಂತು ಖಚಿತ. ಅಷ್ಟಕ್ಕೂ, ಯಾವುದು ಆ 5 ಆಹಾರಗಳು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.
ಮಜ್ಜಿಗೆ

ಜನರ ಕೈಗೆಟುಕುವ ದರದಲ್ಲಿ ಲಭ್ಯವಿರುವ ನೈಸರ್ಗಿಕ ಕೂಲ್ ಡ್ರಿಂಕ್ ಎಂದರೆ ಅದು ಮಜ್ಜಿಗೆ. ಇದು ಬೇಸಿಗೆಯಲ್ಲಿ ಉತ್ತಮ ಹಾಗೂ ಅತ್ಯಂತ ಪರಿಣಾಮಕಾರಿ. ರಿಫ್ರೆಶ್ ಮಾತ್ರವಲ್ಲದೆ ಜೀರ್ಣಕ್ರಿಯೆಗೂ ಉತ್ತಮವಾಗಿದೆ. ಪ್ರೋಬಯಾಟಿಕ್‌ಗಳಲ್ಲಿ ಹೇರಳವಾಗಿರುವ ಮಜ್ಜಿಗೆ, ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ. ಹುರಿದ ಜೀರಿಗೆ, ಬ್ಲ್ಯಾಕ್​ ಸಾಲ್ಟ್​ ಒಂದು ಚಿಟಿಕೆ ಹಾಕಿದರೆ, ರುಚಿ ಮತ್ತು ತಂಪಾಗಿಸುವ ಗುಣಗಳು ಇನ್ನಷ್ಟು ಹೆಚ್ಚುತ್ತದೆ. ದಿನಕ್ಕೊಂದು ಗ್ಲಾಸ್ ನಿಮ್ಮ ದೇಹವನ್ನು ಕೂಲ್​ ಆಗಿಡುತ್ತದೆ.
ಸೌತೆಕಾಯಿ

ಜೀರೋ ಫ್ಯಾಟ್​ ಎನ್ನಲಾದ ಸೌತೆಕಾಯಿ ತೂಕ ಇಳಿಕೆಗೆ ಮಾತ್ರವಲ್ಲ, ಬೇಸಿಗೆಯಲ್ಲಿ ದೇಹಕ್ಕೆ ಬೆಸ್ಟ್​ ಆಹಾರ. ಸಂಪೂರ್ಣ ನೀರಿನ ಅಂಶದಿಂದಲೇ ಕೂಡಿರುವ ಸೌತೆಕಾಯಿ, ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇವುಗಳ ನೈಸರ್ಗಿಕ ತಂಪಾಗಿಸುವ ಪರಿಣಾಮವು ದೇಹದ ಉಷ್ಣತೆಯನ್ನು ಹತೋಟಿಗೆ ತರುತ್ತದೆ. ಇದರಲ್ಲಿನ ನಾರಿನಾಂಶವು ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ. ವೆಜಿಟೇಬಲ್​ ಸಲಾಡ್‌, ಸ್ಯಾಂಡ್‌ವಿಚ್‌ಗಳಿಗೆ ಸೇರಿಸಿ ಅಥವಾ ಹಾಗೆಯೇ ತಿನ್ನಬಹುದು.
ಕಲ್ಲಂಗಡಿ

ಬೇಸಿಗೆಗಾಲದಲ್ಲಿ ರಸ್ತೆಯ ಪಕ್ಕದಲ್ಲಿ ಸೌತೆಕಾಯಿ ಕಂಡೆರೆ, ಮತ್ತೊಂದು ಕಡೆ ಹೆಚ್ಚಾಗಿ ಕಾಣಿಸುವುದೇ ಕೆಂಪು ಕೋಟೆಯ ಕಲ್ಲಂಗಡಿ ಹಣ್ಣು. 20 ರೂ. ಕಲ್ಲಂಗಡಿ ಪೀಸ್ ಆರೋಗ್ಯಕ್ಕೆ ಎಷ್ಟೋ ಪ್ರಯೋಜನಗಳನ್ನು ಒದಗಿಸುತ್ತದೆ. ಹೆಚ್ಚಿನ ನೀರಿನ ಅಂಶವಿರುವುದರಿಂದ, ಕಳೆದುಹೋದ ದ್ರವಗಳನ್ನು ಪುನಃ ಶೇಖರಣೆ ಮಾಡುತ್ತದೆ. ಮತ್ತು ನಿರ್ಜಲೀಕರಣವನ್ನು ದೂರವಿಡಲು ಸಹಕಾರಿ. ನೆತ್ತಿ ಸುಡುವ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಉತ್ತಮ ಆಹಾರ ಎಂಬುದರಲ್ಲಿ ಅನುಮಾನವೇ ಬೇಡ.
ಪುದೀನ

ಮಸಾಲೆಗೆ ಅಥವಾ ಕೇವಲ ಅಲಂಕಾರಕ್ಕೆ ಮಾತ್ರವಲ್ಲ ಪುದೀನ. ಇದು ನಮ್ಮ ದೇಹಕ್ಕೆ ಅತ್ಯಂತ ಶಕ್ತಿ ಒದಗಿಸುವ ತಂಪಾಗಿಸುವ ಪದಾರ್ಥ. ರಿಫ್ರೆಶಿಂಗ್​ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿರುವ ಪುದೀನ, ದೇಹವನ್ನು ತಂಪಾಗಿಸುವಲ್ಲಿ ಮುಂಚೂಣಿ. ಚಟ್ನಿ ರೂಪದಲ್ಲಿ ಅಥವಾ ನಿಂಬೆ ಜ್ಯೂಸ್​, ಇತರೆ ಪಾನೀಯಗಳೊಂದಿಗೆ ಇದನ್ನು ಸೇವಿಸಬಹುದು.
ಎಳನೀರು

ಸಕ್ಕರೆ ಸೋಡಾ, ಕೆಮಿಕಲ್​ನಿಂದ ಮಾಡಲ್ಪಟ್ಟ ಕೂಲ್​ ಡ್ರಿಂಕ್ಸ್​ ಬಿಟ್ಟು ನೈಸರ್ಗಿಕ ಎಳನೀರನ್ನು ಕುಡಿಯಿರಿ. ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್​ನಂತಹ ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿರುವ ಎಳನೀರು, ವಿಪರೀತ ಬೆವರುವ ದೇಹಗಳಿಗೆ ಭಾರೀ ಉತ್ತಮ. ಇದು ಬಾಯಾರಿಕೆಯನ್ನು ನೀಗಿಸುವುದಲ್ಲದೆ, ಆಯಾಸ ಮತ್ತು ಸ್ನಾಯು ಸೆಳೆತವನ್ನು ತಡೆಯಲು ಸಹಕಾರಿ,

ಬೆಳಗಾವಿಯಲ್ಲಿ 48 ಡಿಗ್ರಿ ದಾಟಿದ ಬಿಸಿಲು

TAGGED:Try these 5 tricks to keep your body cool in this sweaty summer
Share This Article
Facebook Twitter Copy Link Print
Previous Article Chicken biryani in front of Balakrishna ಬಾಲಕೃಷ್ಣನೆದುರು ಚಿಕನ್ ಬಿರಿಯಾನಿ: ಜಾಹೀರಾತು ನೆಪದಲ್ಲಿ ಕೇರಳ ಹೋಟೆಲ್ ಮಾಲೀಕನ ಉದ್ಧಟತನ
Next Article ನಿದ್ದೆಯಲ್ಲಿ ಜೋರಾಗಿ ಗೊರಕೆ ಹೊಡೆಯುತ್ತಿದ್ದೀರಾ? ಹಾಗಿದ್ದರೆ ಅಪಾಯ ಗ್ಯಾರಂಟಿ!

Popular Posts

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

You Might Also Like

ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?