newsics.com
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಆರ್ಸಿಬಿ (RCB) ಪಂದ್ಯ ನಡೆಯುವ ಹಿನ್ನೆಲೆಯಲ್ಲಿ ಶನಿವಾರ (ಏ.18) ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ ಮಾಡಲಾಗಿದೆ.
ಮ್ಯಾಚ್ ಇರುವ ಕಾರಣ ಟ್ರಾಫಿಕ್ (Traffic) ಹೆಚ್ಚಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಸುಗಮ ಸಂಚಾರಕ್ಕಾಗಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ನಡುವೆ ಪಂದ್ಯ ನಡೆಯಲಿದ್ದು, ಮಧ್ಯಾಹ್ನ 3.30ಕ್ಕೆ ಪಂದ್ಯ ಶುರುವಾಗಲಿದೆ. ಮ್ಯಾಚ್ ಸಲುವಾಗಿ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.
ವಾಹನ ನಿಲುಗಡೆ ಸ್ಥಳಗಳು ಎಲ್ಲೆಲ್ಲಿ?
-
- ಸೇಂಟ್ ಜೋಸೆಫ್
-
- ಇಂಡಿಯನ್ ಹೈಸ್ಕೂಲ್ ಮೈದಾನ
-
- ಸೇಂಟ್ ಜೋಸೆಫ್ ಯೂರೋಪಿಯನ್ ಶಾಲೆ ಮೈದಾನ
-
- ಫ್ರೀಡಂ ಪಾರ್ಕ್ (MLCP ಪಾರ್ಕಿಂಗ್)
-
- ಗರುಡ ಮಾಲ್ ಪಾರ್ಕಿಂಗ್
-
- ಶಿವಾಜಿನಗರ ಬಸ್ ನಿಲ್ದಾಣ
-
- ಯು.ಬಿ ಸಿಟಿ ಪಾರ್ಕಿಂಗ್, ಕಂಠೀರವ ಕ್ರೀಡಾಂಗಣ
ವಾಹನ ನಿಲುಗಡೆ ನಿಷೇಧಿತ ಪ್ರದೇಶಗಳು
-
- ಕ್ವೀನ್ಸ್ ರಸ್ತೆ – ಬಾಲೇಕುಂದ್ರಿ ಸರ್ಕಲ್ನಿಂದ ಕ್ವೀನ್ಸ್ ಸರ್ಕಲ್ ಹಾಗೂ CTO ಜಂಕ್ಷನ್ವರೆಗೆ
-
- ಎಂ.ಜಿ ರಸ್ತೆ – ಅನಿಲ್ ಕುಂಬ್ಳೆ ಸರ್ಕಲ್ನಿಂದ ಕ್ವೀನ್ಸ್ ಸರ್ಕಲ್ವರೆಗೆ
-
- ಲಿಂಕ್ ರಸ್ತೆ – ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆವರೆಗೆ
-
- ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ
-
- ಸೆಂಟ್ರಲ್ ಸ್ಟ್ರೀಟ್ ರಸ್ತೆ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧ
-
- ಕಬ್ಬನ್ ರಸ್ತೆ, CTO ಸರ್ಕಲ್ನಿಂದ ಡಿಕನ್ಸನ್ ರಸ್ತೆ ಜಂಕ್ಷನ್ವರೆಗೆ
-
- ಕಾಮರಾಜ್ ರಸ್ತೆ ಜಂಕ್ಷನ್ನಿಂದ ಡಿಕ್ಕನ್ಸನ್ ರಸ್ತೆ ಜಂಕ್ಷನ್ವರೆಗೆ
-
- ಸೇಂಟ್ ಮಾರ್ಕ್ಸ್ ರಸ್ತೆ – ಕ್ಯಾಶ್ ಫಾರ್ಮಸಿ ಜಂಕ್ಷನ್ನಿಂದ ಅನಿಲ್ ಕುಂಬ್ಳೆ ಸರ್ಕಲ್ವರೆಗೆ
-
- ಕಸ್ತೂರಬಾ ರಸ್ತೆ – ಕ್ವೀನ್ಸ್ ಸರ್ಕಲ್ನಿಂದ ಹಡ್ಸನ್ ಸರ್ಕಲ್ ವರೆಗೆ
-
- ಮಲ್ಯ ಆಸ್ಪತ್ರೆ ರಸ್ತೆ – ಸಿದ್ಧಲಿಂಗಯ್ಯ ಸರ್ಕಲ್ ನಿಂದ ಆರ್.ಆರ್.ಎಂ ಸರ್ಕಲ್ವರೆಗೆ
ಓಲಾ / ಉಬರ್ / ಆಟೋ ಪಿಕ್-ಅಪ್ ಮತ್ತು ಡ್ರಾಪ್ ಸ್ಥಳಗಳು
BRV ಗ್ರೌಂಡ್ – ಗೇಟ್ ನಂ. 06 ಬಳಿ
ಮಾಣಿಕ್ ಶಾ ಪೆರೇಡ್ ಗ್ರೌಂಡ್ ಗೇಟ್ ನಂ. 03 ಬಳಿ
ಆರ್ಸಿಬಿ Vs ಡೆಲ್ಲಿ ಕ್ಯಾಪಿಟಲ್ಸ್
2026 ಐಪಿಎಲ್ ಆವೃತ್ತಿಯಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ನಾಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಐದು ಪಂದ್ಯಗಳನ್ನಾಡಿರುವ ಆರ್ಸಿಬಿ ತಂಡ, ನಾಲ್ಕು ಪಂದ್ಯಗಳಲ್ಲಿ ಗೆದ್ದು, ಒಂದು ಪಂದ್ಯದಲ್ಲಿ ಸೋಲು ಕಂಡಿದ್ದು, ಈ ಮೂಲಕ ಎಂಟು ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ.
ಮತ್ತೊಂದೆಡೆ, ಟೂರ್ನಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆದ್ದು ಶುಭಾರಂಭ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದು, ಎರಡರಲ್ಲಿ ಸೋಲು ಕಂಡಿದೆ. ಸದ್ಯ ನಾಲ್ಕು ಅಂಕಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಬಹು ಕೋಟಿ ರೂಪಾಯಿ ವಂಚನೆ ಪ್ರಕರಣ: ಅಪ್ರೂವರ್ ಆಗಲು ಜಾಕ್ವೆಲಿನ್ ಫರ್ನಾಂಡಿಸ್ ನಿರ್ಧಾರ
ಸೋಪ್ ಕಂಪನಿ ಜಾಹೀರಾತು ಪ್ರಕರಣದಲ್ಲಿ ಕೋರ್ಟ್ಗೆ ಹೋದ ತಮನ್ನಾಗೆ ಹಿನ್ನಡೆ
Young woman insulted the soldiers ಸೈನಿಕರ ಅವಹೇಳನ ಮಾಡಿದ ಯುವತಿ ಹೇಳಿದ್ದೇನು? ವಿಡಿಯೋ ನೋಡಿ