newsics.com
ಬೆಂಗಳೂರು: ಮಾರುತಿ ಸುಜುಕಿ ತನ್ನ ಮೇಡ್ ಇನ್ ಇಂಡಿಯಾ ಕಾರ್ ಫ್ರಾಂಕ್ಸ್ ಅನ್ನು ರಫ್ತು ಮಾಡಲು ಪ್ರಾರಂಭಿಸಿದೆ.
ಮೇಡ್ ಇನ್ ಇಂಡಿಯಾ ಕಾರ್ ಆಗಿದ್ದು, ಜಪಾನ್‌ನಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಗುತ್ತಿದೆ. ಕಂಪನಿಯು ಈ ಕಾರನ್ನು ಭಾರತದಿಂದ ಜಪಾನ್‌ಗೆ ರಫ್ತು ಮಾಡಲಿದೆ.
ಕಾರುಗಳನ್ನು ಕಂಪನಿಯ ಗುಜರಾತ್ ಪ್ಲ್ಯಾಂಟ್‌ನಲ್ಲಿ ತಯಾರಿಸಲಾಗುತ್ತಿದೆ. 1600 ಯುನಿಟ್‌ಗಳನ್ನು ಪಿಪಾವಾವ್ ಬಂದರಿನ ಮೂಲಕ ಗುಜರಾತ್‌ನಿಂದ ಜಪಾನ್‌ಗೆ ರಫ್ತು ಮಾಡಲಾಗಿದೆ.ಕಾರನ್ನು ಮೊದಲ ಬಾರಿಗೆ ಗ್ಲೋಬಲ್ ಆಟೋ ಎಕ್ಸ್‌ಪೋ 2023 ರಲ್ಲಿ ಅನಾವರಣಗೊಳಿಸಲಾಯಿತು, ನಂತರ ಕಂಪನಿಯು ಈ ಕಾರನ್ನು 24 ಏಪ್ರಿಲ್ 2023 ರಂದು ಬಿಡುಗಡೆ ಮಾಡಿತು.
ಜಪಾನ್ ಮಾತ್ರವಲ್ಲದೆ, ಮಾರುತಿ ಸುಜುಕಿ ಈ ಕಾರ್‌ಗಳನ್ನು ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಂತಹ ದೇಶಗಳಿಗೆ ರಫ್ತು ಮಾಡುತ್ತದೆ.ಕಾರಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 7.51 ಲಕ್ಷ ರೂಪಾಯಿ ಆಗಿದೆ.