newsics.com
ಬೆಂಗಳೂರು: ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ.
ಡ್ಯಾಂ ತಜ್ಞ ಕನ್ಹಯ್ಯ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆದಿದ್ದು, ಕಿತ್ತು ಹೋಗಿದ್ದ ಗೇಟ್ ನಂಬರ್ 19ರ ಜಾಗದಲ್ಲಿ ಸ್ಟಾಪ್ ಲಾಗ್ ಅಳವಡಿಸಲಾಗಿದೆ.
ಡ್ಯಾಂ ತಜ್ಞ ಕನ್ಹಯ್ಯ ಅವರ ತಂಡ ಟಿಬಿ ಡ್ಯಾಂ ಸ್ಟಾಪ್ ಲಾಗ್ ಅಳವಡಿಸೋ ಕಾರ್ಯ ಆರಂಭಿಸಿತ್ತು. ಕಿತ್ತು ಹೋಗಿದ್ದ ಗೇಟ್ ನಂಬರ್ 19ರ ಜಾಗದಲ್ಲಿ ಇದೀಗ ಮೊದಲ ಸ್ಟಾಪ್ ಲಾಗ್ ಅಳವಡಿಸಲಾಗಿದೆ. 60 ಅಡಿ ಅಗಲ 4 ಅಡಿ ಉದ್ದದ ಮೊದಲ ಸ್ಟಾಪ್ ಲಾಗ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದ್ದು, ಇದು 25 ಟಿಎಂಸಿ ನೀರು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.
ಕಳೆದ 2 ದಿನಗಳಿಂದ ಎದುರಾದ ತಾಂತ್ರಿಕ ಸವಾಲುಗಳ ಮಧ್ಯೆ ಇಂದು ಸಂಜೆ ಗೇಟ್ ಅಳವಡಿಕೆಗೆ ಇಡೀ ತಂಡ ಸಜ್ಜಾಗಿತ್ತು. ಸಚಿವ ಶಿವರಾಜ ತಂಗಡಗಿ ಅವರು ಪೂಜೆ ಮಾಡಿ ಗೇಟ್ ಅಳವಡಿಕೆಗೆ ಚಾಲನೆ ನೀಡಿದರು. ಗೇಟ್ ಯಶಸ್ವಿಯಾಗಿ