newsics.com
ತನ್ನ ಹೆಂಡತಿಗೆ ಪಕ್ಕದ ಮನೆಯ ಸಾಕು ನಾಯಿ ಬೊಗಳಿತು ಎಂದು ಇಲ್ಲೊಬ್ಬ ವ್ಯಕ್ತಿ ಕಟ್ಟಿ ಹಾಕಿದ್ದ ನಾಯಿ ಬಳಿ ಬಂದು ದೊಣ್ಣೆಯಿಂದ ಹಿಗ್ಗಾಮುಗ್ಗಾ ಬಾರಿಸಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅವರೆಹಳ್ಳಿಯಲ್ಲಿ ನಡೆದಿದೆ.
ನೆರೆಮನೆಯವರಾದ ನಾಯಿ ಮಾಲೀಕರು ಮನೆಯೊಳಗೆ ಕಟ್ಟಿಹಾಕಿಕೊಂಡಿದ್ದರು. ಈ ವೇಳೆ ಆ ವ್ಯಕ್ತಿಗೆ ಅದೇನಾಯ್ತೋ ಏನೋ ನಾಯಿಯ ಮೇಲೆ ಕೋಪಗೊಂಡು ಮನಬಂದಂತೆ ಹಲ್ಲೆ ಮಾಡಿದ್ದಾನೆ. ನಾಯಿಯ ಬೊಗಳುವಿಕೆ ತನ್ನ ಹೆಂಡತಿಗೆ ತೊಂದರೆ ಆಗುತ್ತಿದೆ ಎಂದು ಭಾವಿಸಿದ್ದಾನೆ ಎಂಬ ಅಸ್ಪಷ್ಟ ಮಾಹಿತಿ ಹೊರಬಂದಿದೆ. ಈ ಕೋಪದಲ್ಲಿ ಆತ ಕೈಯಲ್ಲಿ ದೊಣ್ಣೆ ಹಿಡಿದು ನೇರವಾಗಿ ನಾಯಿಯ ಬಳಿ ಹೋಗಿ, ಏನೂ ತಪ್ಪು ಮಾಡದ ಪ್ರಾಣಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾನೆ.
ಕಟ್ಟಿಹಾಕಿದ್ದರಿಂದ ಆ ನಾಯಿಗೆ ತಪ್ಪಿಸಿಕೊಳ್ಳುವ ಅವಕಾಶವೇ ಇರಲಿಲ್ಲ. ಪ್ರಾಣ ಉಳಿಸಿಕೊಳ್ಳುವ ಯತ್ನದಲ್ಲಿದ್ದ ನಾಯಿ ಜೋರಾಗಿ ಬೊಗಳಿದ್ದು, ಸದ್ಯ ಅದರ ಬೆನ್ನೆಲುಬು, ಕಾಲು, ದೇಹದ ವಿವಿಧ ಭಾಗಗಳಿಗೆ ದೊಣ್ಣೆಯಿಂದ ಬಲವಾಗಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಈ ಸಂಪೂರ್ಣ ದೃಶ್ಯ ಅಲ್ಲೇ ಅಳವಡಿಸಿದ್ದಿದ್ದ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಆದ ಕೂಡಲೇ, ಪ್ರಾಣಿಪ್ರಿಯರು, ಶ್ವಾನ ಪ್ರಿಯರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಟಿಹಾಕಿದ, ಯಾರಿಗೂ ಅಪಾಯ ಮಾಡದ ನಾಯಿಯ ಮೇಲೆ ಇಷ್ಟೊಂದು ಕ್ರೌರ್ಯ ತೋರಿಸಿದ ವ್ಯಕ್ತಿಯ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.
https://www.newsics.com/2026/04/13/stock-market-plunges-nifty-falls-1600-points-below-23600/