Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಗರ್ಲ್‌ಫ್ರೆಂಡ್‌ಗಾಗಿ ಪುಟ್ಟ ಮಗನನ್ನು 2 ವರ್ಷ ವ್ಯಾನ್ ಒಳಗೆ ಕೂಡಿಹಾಕಿದ್ದ ಪಾಪಿ ತಂದೆ!
ವಿದೇಶ

ಗರ್ಲ್‌ಫ್ರೆಂಡ್‌ಗಾಗಿ ಪುಟ್ಟ ಮಗನನ್ನು 2 ವರ್ಷ ವ್ಯಾನ್ ಒಳಗೆ ಕೂಡಿಹಾಕಿದ್ದ ಪಾಪಿ ತಂದೆ!

Share
2 Min Read
SHARE

ತಂದೆಯೇ ತನ್ನ ಮಗುವನ್ನು ವರ್ಷಗಳ ಕಾಲ ವ್ಯಾನ್‌ನಲ್ಲಿ ಬಂಧಿಸಿಟ್ಟ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ. ಇಲ್ಲಿ, ಚಿಕ್ಕ ಮಗುವನ್ನು ಅವನ ಸ್ವಂತ ಜನರು ಎಂತಹ ಸ್ಥಿತಿಯಲ್ಲಿ ಇರಿಸಿದ್ದಾರೆಂದರೆ, ಆ ಸ್ಥಿತಿ ಅದು ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಮಕ್ಕಳ ಪ್ರತಿಯೊಂದು ಅಗತ್ಯವನ್ನು ನಾವು ನೋಡಿಕೊಳ್ಳುತ್ತೇವೆ, ಆದರೆ ಒಂದು ಮಗುವಿಗೆ ಎರಡು ವರ್ಷಗಳ ಕಾಲ ತನ್ನ ಮೂಲಭೂತ ಅವಶ್ಯಕತೆಗಳು ಸಹ ಸಿಗಲಿಲ್ಲ. ನೆರೆಹೊರೆಯವರು ದೂರು ನೀಡದಿದ್ದರೆ, ಬಹುಶಃ ಅವನು ಆ ನರಕದಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ.

ಕೆಲ ವರದಿಗಳ ಪ್ರಕಾರ, ಪೂರ್ವ ಫ್ರಾನ್ಸ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 2024 ರಿಂದ ತನ್ನ ತಂದೆಯೇ ವ್ಯಾನ್‌ನಲ್ಲಿ ತನ್ನ 9ವರ್ಷದ ಮಗನನ್ನು ಬಂಧಿಸಲ್ಪಟ್ಟಿದ್ದ. ಅವನ್ನು ಈಗ ರಕ್ಷಿಸಲಾಗಿದೆ. ಮಗುವನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ತಂದೆಯನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ.

ಘಟನೆ ಬೆಳಕಿಗೆ ಬಂದಿದ್ದೇಗೆ?

ಸೋಮವಾರ ಹ್ಯಾಗೆನ್‌ಬುಚ್ ಪಟ್ಟಣದ ನೆರೆಹೊರೆಯವರು ವ್ಯಾನ್ ಒಳಗಿನಿಂದ ಮಗುವಿನ ಧ್ವನಿ ಬರುತ್ತಿರುವುದನ್ನು ಕೇಳಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆಯ ಸಮಯದಲ್ಲಿ ವ್ಯಾನ್ ಅನ್ನು ಬಲವಂತವಾಗಿ ತೆರೆಯಬೇಕಾಯಿತು. ಆಗ ಕಂಡಿದ್ದ ದೃಶ್ಯ ಮನಕಲಕುವಂಥದ್ದು.

ಅಧಿಕಾರಿಗಳು ವ್ಯಾನ್ ತೆರೆದಾಗ, ಒಳಗಿನ ದೃಶ್ಯ ಭಯಾನಕವಾಗಿತ್ತು. ಮಗು ಕಂಬಳಿಯಲ್ಲಿ ಸುತ್ತಿಕೊಂಡು, ಕಸದ ರಾಶಿಯ ಮೇಲೆ, ಹೊಲಸು ಮತ್ತು ಮಲದಿಂದ ಆವೃತವಾಗಿ ಬಿದ್ದಿತ್ತು. ಅವನು ಸಂಪೂರ್ಣವಾಗಿ ಬೆತ್ತಲೆಯಾಗಿದ್ದನು. ಸ್ಥಳೀಯ ಪ್ರಾಸಿಕ್ಯೂಟ‌ರ್ ನಿಕೋಲಸ್ ಹೈಟ್ಸ್ ಪ್ರಕಾರ, ಮಗು ಅಪೌಷ್ಟಿಕತೆಯಿಂದ ಬಳಲುತ್ತಿತ್ತು ಮತ್ತು ಸುಮಾರು ಎರಡು ವರ್ಷಗಳ ಕಾಲ ಅದೇ ಸ್ಥಳದಲ್ಲಿ ಸಿಲುಕಿದ ನಂತರ ನಡೆಯಲು ಸಾಧ್ಯವಾಗಲಿಲ್ಲ ಅಷ್ಟು ಹೀನ ಸ್ಥಿಗೆ ಆ ಮಗು ತಲುಪಿತ್ತು.

ತನಿಖೆಯ ಸಮಯದಲ್ಲಿ, ಮಗುವಿನ ತಂದೆ ನವೆಂಬರ್ 2024 ರಲ್ಲಿ ಮಗುವನ್ನು ಸುರಕ್ಷಿತವಾಗಿಡಲು ವ್ಯಾನ್‌ನಲ್ಲಿ ಇರಿಸಿದ್ದಾಗಿ ಹೇಳಿದ್ದಾರೆ. ತನ್ನ ಸಂಗಾತಿ ಅವನನ್ನು ಮಾನಸಿಕ ಆಸ್ಪತ್ರೆಗೆ ಕಳುಹಿಸಲು ಬಯಸಿದ್ದರು ಎಂದು ಅವರು ಹೇಳಿದ್ದಾರೆ. ಇದಲ್ಲದೇ, ಪ್ರಾಸಿಕ್ಯೂಟರ್ ಪ್ರಕಾರ, ಮಗುವಿಗೆ ಯಾವುದೇ ಮಾನಸಿಕ ಅಸ್ವಸ್ಥತೆ ಇದೆ ಎಂದು ಸೂಚಿಸುವ ಯಾವುದೇ ವೈದ್ಯಕೀಯ ದಾಖಲೆ ಕಂಡುಬಂದಿಲ್ಲ. ಪೊಷಕರ ಹೇಳಿಕೆ ವಿರುದ್ಧವಾಗಿ, ಘಟನೆಯ ಮೊದಲು, ಅವನು ಶಾಲೆಯಲ್ಲಿ ಉತ್ತಮ ಶ್ರೇಣಿಗಳನ್ನು ಗಳಿಸುತ್ತಿದ್ದನು ಎನ್ನುವುದು ದಾಖಲಾಗಿದೆ. ಇದಲ್ಲದೇ ತನ್ನ ಸಂಗಾತಿಗಾಗಿ ಈ ಕೃತ್ಯ ಎಸಗಿದ್ದಾನೆ ಎನ್ನುವ ಆರೋಪಗಳು ಕೇಳಿಬಂದಿವೆ.

ಇರಾನ್ ಜೊತೆಗಿನ ಮಾತುಕತೆ ವಿಫಲ: ಟ್ರಂಪ್‌ ಘೋಷಣೆಗೆ ಇಡೀ ವಿಶ್ವವೇ ಸ್ತಬ್ಧ!

TAGGED:A sinful father locked his little son inside a van for 2 years for his girlfriend!
Share This Article
Facebook Twitter Copy Link Print
Previous Article ಇರಾನ್ ಜೊತೆಗಿನ ಮಾತುಕತೆ ವಿಫಲ: ಟ್ರಂಪ್‌ ಘೋಷಣೆಗೆ ಇಡೀ ವಿಶ್ವವೇ ಸ್ತಬ್ಧ!
Next Article ರಾಜ್ಯದಲ್ಲಿ ಹೊಸ `ಮೋಟಾರು ವಾಹನಗಳ ತೆರಿಗೆ ತಿದ್ದುಪಡಿ ಕಾಯ್ದೆ’ ಜಾರಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ವಿದೇಶ

England New Prime Minister: ಆಂಡಿ ಬರ್ನ್‌ಹ್ಯಾಮ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ – ಯಾರು ಈ ನಾಯಕ? ಬ್ರಿಟನ್ ಮುಂದೆ ಇರುವ ಸವಾಲುಗಳೇನು?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?