https://youtube.com/shorts/j_XhOSnjPZw?si=vBzrpGhQDFbuiw_E
newsics.com
ಮುಂಬೈ: ಭಾರತೀಯ ಚಿತ್ರರಂಗದ ಅದ್ಭುತ ಧ್ವನಿ, ಪದ್ಮವಿಭೂಷಣ ಪುರಸ್ಕೃತ ಹಿರಿಯ ಗಾಯಕಿ ಆಶಾ ಭೋಂಸ್ಲೆ (92) ಅವರು ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಎದೆ ನೋವು ಮತ್ತು ಸೋಂಕಿನಿಂದ ಬಳಲುತ್ತಿದ್ದ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಆಶಾ ಭೋಸ್ಲೆ ಅವರು ಭಾರತ ರತ್ನ ಪುರಸ್ಕೃತ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿ ಆಗಿದ್ದು, ಅಕ್ಕನಂತೆಯೇ ಅದ್ಭುತ ಗಾಯಕಿ ಆಗಿದ್ದಾರೆ. ಎಂಟು ದಶಕಗಳಿಂದಲೂ ಗಾಯಕ ಕ್ಷೇತ್ರದಲ್ಲಿರುವ ಆಶಾ ಭೋಸ್ಲೆ ಈ ವರೆಗೆ ಸಾವಿರಾರು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.
ಆಶಾ ಭೋಸ್ಲೆ ಅವರು ಹಿಂದಿ, ಕನ್ನಡ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಅಸ್ಸಾಮೀಸ್, ಭೋಜ್ಪುರಿ, ನೇಪಾಳಿ, ಬೆಂಗಾಲಿ ಇನ್ನೂ ಹಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಗಾಯನಕ್ಕೆ ಎರಡು ರಾಷ್ಟ್ರಪ್ರಶಸ್ತಿ ಸೇರಿದಂತೆ, ಏಷ್ಯಾ ನೈಟಿಂಗೇಲ್, ಲತಾ ಮಂಗೇಶ್ಕರ್ ಪ್ರಶಸ್ತಿ, ಹಲವಾರು ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆಶಾ ಅವರ ಹಾಡುಗಳು ಮೂರು ಬಾರಿ ಪ್ರತಿಷ್ಠಿತ ಗ್ರಾಮಿಗೆ ನಾಮಿನೇಟ್ ಸಹ ಆಗಿದ್ದವು.
ಆಶಾ ಭೋಸ್ಲೆ ಅವರು ಕನ್ನಡದಲ್ಲಿ ಮೂರು ಹಾಡುಗಳನ್ನು ಹಾಡಿದ್ದಾರೆ. 1967ರಲ್ಲಿ ಬಿಡುಗಡೆ ಆಗಿದ್ದ ‘ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾನಲ್ಲಿ ‘ಏನೋ ಏನೋ’, 1973 ರಲ್ಲಿ ಬಿಡುಗಡೆ ಆದ ‘ದೂರದ ಬೆಟ್ಟ’ ಸಿನಿಮಾದ ‘ಸವಾಲು ಹಾಕಿ ಸೋಲಿಸಿ ಎಲ್ಲರ’, 2010 ರಲ್ಲಿ ‘ಮತ್ತೆ ಮುಂಗಾರು’ ಸಿನಿಮಾದ ‘ಹೇಳದೆ ಕಾರಣ’ ಹಾಡುಗಳನ್ನು ಆಶಾ ಭೋಸ್ಲೆ ಅವರು ಕನ್ನಡದಲ್ಲಿ ಹಾಡಿದ್ದಾರೆ. ಕರ್ನಾಟಕದಲ್ಲಿ ಸಾಕಷ್ಟು ಬಾರಿ ಲೈವ್ ಶೋಗಳನ್ನು ಸಹ ಅವರು ನೀಡಿದ್ದಾರೆ.