https://youtube.com/shorts/j_XhOSnjPZw?si=vBzrpGhQDFbuiw_E
newsics.com
ಚಿಕ್ಕೋಡಿ: ಪ್ಯಾಸೆಂಜರ್ ವಿಷ್ಯಕ್ಕೆ ಆಟೋ ಚಾಲಕರ ನಡುವೆ ನಡೆದ ಗಲಾಟೆಯಲ್ಲಿ ಇನ್ನೇನು ಹಸೆಮಣೆ ಏರಬೇಕಾದ ಚಾಲಕ ಮೃತಪಟ್ಟಿದ್ದಾನೆ. ಅಶೋಕ ವಡ್ಡರ್ ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ.
ಬೆಳಗಾವಿಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ನಿವಾಸಿ. ಆಟೋ ಓಡಿಸ್ತಿದ್ರೂ ಮನೆಗೆ ಆಧಾರಸ್ತಂಭನಾಗಿದ್ದ. ಯಾರ ಉಸಾಬ್ರಿಗೂ ಹೋಗ್ತಿರ್ಲಿಲ್ಲ. ಹಗಲು-ರಾತ್ರಿ ದುಡೀತಿದ್ದ. ಮದ್ವೆ ವಯಸ್ಸಾಗಿದ್ರಿಂದ ಹುಡುಗಿನೂ ಸೆಟ್ ಆಗಿದ್ಲು. ಇನ್ನು ಜಸ್ಟ್ ಇಪ್ಪತ್ತೇ ಇಪ್ಪು ದಿನ ಕಳಿದಿದ್ರೆ ಮಧುಮಗನಾಗಿ ಓಡಾಡ್ತಿದ್ದ.
ಊರಲ್ಲಿ ಮಲ್ಲಯ್ಯನ ದೇವರ ಜಾತ್ರೆ ನಡೀತಿತ್ತು. ಆ ವೇಳೆ ಭಕ್ತರ ದಂಡೇ ಹರಿದು ಬದ್ದಿತ್ತು. ಹೀಗಾಗಿ ಆಟೋ ಚಾಲಕರೆಲ್ಲಾ ಭಕ್ತರನ್ನ ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಕರೆದುಕೊಂಡು ಹೋಗೋದು ಬಿಡೋದನ್ನ ಮಾಡಿದ್ದರು. ಈ ವೇಳೆ ಅಶೊಕ್ ಸಹ ಇಬ್ರು ಪ್ರಯಾಣಿಕರನ್ನ ತನ್ನ ಆಟೋದಲ್ಲಿ ಕೂರಿಸಿಕೊಂಡ. ಇದಕ್ಕೆ ಸಿಟ್ಟಿಗೆದ್ದ ಆಟೋ ಡ್ರೈವರ್ ಶಿವಾ ವಡ್ಡರ್ ಅಶೋಕ್ ಜೊತೆ ಜಗಳವಾಡಿ ತನ್ನ ಅಣ್ಣನನ್ನ ಕರೆಸಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ರು ಆಟೋದಲ್ಲಿ ಮಲಗಿಸಿದ್ದಾರೆ.
ಜಗಳ ನಡೆದ ವೇಳೆ ತಲೆಗೆ ಹೊಡೆದ ಪರಿಣಾಮ ರಕ್ತ ಗಾಯ ಆಗಿದೆ.ಅಲ್ಲೇ ಇದ್ದ ಕೆಲ ಆಟೋ ಚಾಲಕರು ಅಲ್ಲಿ ನಡೆದ ಘಟನೆ ಬಗ್ಗೆ ಅಶೋಕ್ ಸಹೋದರನಿಗೆ ವಿಷ್ಯ ಮುಟ್ಟಿಸಿದ್ದಾರೆ. ಕೂಡಲೇ ಕುಟುಂಬಸ್ಥರೆಲ್ಲಾ ಬಂದು ಆಸ್ಪತ್ರೆಗೆ ಸೇರಿಸುವಷ್ಟ್ರಲ್ಲೇ ಅಶೋಕ್ ಪ್ರಾಣಬಿಟ್ಟಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಮೂವರನ್ನ ಬಂಧಿಸಿದ್ದಾರೆ.
https://www.newsics.com/2026/04/12/gold-prices-rise-slightly-over-the-weekend/