https://youtube.com/shorts/j_XhOSnjPZw?si=vBzrpGhQDFbuiw_E
newsics.com
ಇರಾನ್ ಪರ ಚೀನಾ ನಿಂತರೆ ಅಮೆರಿಕ-ಚೀನಾ ನಡುವೆ ಭೀಕರ ಸಂಘರ್ಷ ಭುಗಿಲೇಳಬಹುದು, ಇದು ಮೂರನೇ ಮಹಾಯುದ್ಧಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇರಾನ್ ಹಾರ್ಮುಜ್ ಜಲಸಂಧಿ ಮತ್ತು ಅಮೆರಿಕ ವಿಮಾನಗಳ ಮೇಲೆ ಚೀನಾದ ಸಹಾಯದಿಂದ ದಾಳಿ ಮಾಡುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
ಇರಾನ್ ಬೆನ್ನಿಗೆ ನಿಂತಿರುವ ಚೀನಾಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆ ಈಗ ಮೂರನೇ ಮಹಾಯುದ್ಧದ ಭೀತಿಯನ್ನು ಹುಟ್ಟುಹಾಕಿದೆ. ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಬಿಕ್ಕಟ್ಟು ಈಗ ಅಮೆರಿಕ ಮತ್ತು ಡ್ರ್ಯಾಗನ್ ದೇಶ ಚೀನಾವನ್ನು ಮುಖಾಮುಖಿಯಾಗಿಸಿದೆ. ಇರಾನ್‌ಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಚೀನಾಗೆ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ನೆಲಬಾಂಬ್‌ಗಳನ್ನು ಅಳವಡಿಸಿ ಜಾಗತಿಕ ತೈಲ ಸಾರಿಗೆಯನ್ನು ತಡೆಯಲು ಯತ್ನಿಸುತ್ತಿದೆ.ಆ ಮಾರ್ಗವನ್ನು ನಿರ್ಬಂಧಿಸಲು ನಾವು ಬಿಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇರಾನ್ ಒಪ್ಪಂದಕ್ಕೆ ಸಹಿ ಹಾಕದಂತೆ ಚೀನಾ ತೆರೆಮರೆಯಲ್ಲಿ ಪ್ರಚೋದಿಸುತ್ತಿದೆ ಎಂಬ ಆಘಾತಕಾರಿ ಮಾಹಿತಿ ಈಗ ಹೊರಬಿದ್ದಿದೆ.
https://www.newsics.com/2026/04/12/92485engineering-course-fees-increased-by-7-5-percent/