https://youtube.com/shorts/j_XhOSnjPZw?si=vBzrpGhQDFbuiw_E
newsics.com
ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸರಣಿ ದಾಳಿಗಳು ಮುಂದುವರಿದಿವೆ. ಉದ್ರಿಕ್ತ ಗುಂಪೊಂದು ಹಿಂದೂಗಳ ಮನೆಗಳು, ವ್ಯವಹಾರಿಕ ಮಳಿಗೆಗಳು ಮತ್ತು ದೇವಸ್ಥಾನಗಳ ಮೇಲೆ ಭೀಕರ ದಾಳಿ ನಡೆಸಿದ್ದು, ಸ್ಥಳೀಯವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ವದಂತಿಯೊಂದನ್ನು ನೆಪವಾಗಿಟ್ಟುಕೊಂಡು ನೂರಾರು ಮಂದಿಯ ಉದ್ರಿಕ್ತ ಗುಂಪು ಹಿಂದೂ ಜನವಸತಿ ಪ್ರದೇಶಗಳಿಗೆ ನುಗ್ಗಿ ದಾಂಧಲೆ ನಡೆಸಿದೆ. ಮನೆಗಳಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಲಾಗಿದೆ ಎಂದು ವರದಿಯಾಗಿದೆ.
ಹಿಂದೂಗಳಿಗೆ ಸೇರಿದ ಕನಿಷ್ಠ 10ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿದ್ದು, ವ್ಯಾಪಾರಿಗಳು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.ಸ್ಥಳೀಯವಾಗಿ ಇದ್ದ ಸಣ್ಣ ದೇವಸ್ಥಾನವೊಂದರ ಮೇಲೂ ದಾಳಿ ನಡೆದಿದ್ದು, ವಿಗ್ರಹಗಳನ್ನು ಭಗ್ನಗೊಳಿಸಲಾಗಿದೆ.