Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಯುರೇನಿಯಂ ಒಪ್ಪಿಸದಿದ್ದರೆ ಇರಾನ್‌ ಮೇಲೆ ಮತ್ತೆ ದಾಳಿ ಮಾಡೇ ಮಾಡ್ತೀವಿ: ಅಮೆರಿಕ
ವಿದೇಶ

ಯುರೇನಿಯಂ ಒಪ್ಪಿಸದಿದ್ದರೆ ಇರಾನ್‌ ಮೇಲೆ ಮತ್ತೆ ದಾಳಿ ಮಾಡೇ ಮಾಡ್ತೀವಿ: ಅಮೆರಿಕ

Share
2 Min Read
SHARE

ಇರಾನ್ ತನ್ನ ಬಳಿ ಇರುವ ಯುರೇನಿಯಂ ಅನ್ನು ಹಸ್ತಾಂತರಿಸಬೇಕು, ಇಲ್ಲದಿದ್ದರೆ ಅಮೆರಿಕ ಮತ್ತು ಇಸ್ರೇಲ್‌ನಿಂದ ಮರು ದಾಳಿ ಅಥವಾ ಭೂಸೇನೆ ಕಾರ್ಯಾಚರಣೆ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್‌ ಎಚ್ಚರಿಸಿದ್ದಾರೆ.

ಇರಾನ್ ತನ್ನ ಸಮೃದ್ಧ ಯುರೇನಿಯಂ ಅನ್ನು ಹಸ್ತಾಂತರಿಸುವಂತೆ ಅಮೆರಿಕ ಒತ್ತಾಯಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಗ್ಸೆತ್‌, ‘ಇರಾನ್‌ ಸ್ವಯಂಪ್ರೇರಿತವಾಗಿ ಯುರೇನಿಯಂ ಅನ್ನು ನೀಡಿದರೆ ಒಳ್ಳೆಯದು. ಇಲ್ಲದಿದ್ದರೆ ನಾವೇ ವಶಪಡಿಸಿಕೊಳ್ಳುತ್ತೇವೆ’ ಎಂದಿದ್ದಾರೆ.

‘ಕಳೆದ ವರ್ಷ ಇಸ್ರೇಲ್‌ನ 12 ದಿನಗಳ ಯುದ್ಧದ ಸಂದರ್ಭದಲ್ಲಿ ಅಮೆರಿಕ ನಡೆಸಿದ ‘ಮಿಡ್‌ನೈಟ್ ಹ್ಯಾಮರ್’ ಬಾಂಬ್ ದಾಳಿಯಂತಹ ಕಾರ್ಯಾಚರಣೆ ನಡೆಸುವ ಆಯ್ಕೆಯೂ ನಮ್ಮ ಮುಂದಿದೆ’ ಎಂದೂ ಅವರು ಹೇಳಿದ್ದಾರೆ.

ಅಮೆರಿಕ, ಇಸ್ರೇಲ್‌ ಹಾಗೂ ಇರಾನ್‌ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಬುಧವಾರ ಸಮ್ಮತಿಸಿದ್ದವು. ಇರಾನ್ ಯುರೇನಿಯಂ ಅನ್ನು ಹಸ್ತಾಂತರಿಸಬೇಕು ಎಂದು ಪೀಟ್ ಹೆಗ್ಸೆತ್‌ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒತ್ತಾಯಿಸಿದ್ದಾರೆ.

‘ಇರಾನ್‌ ತನ್ನ ಎಲ್ಲಾ ಸಮೃದ್ಧೀಕರಿಸಿದ ಯುರೇನಿಯಂ ಅನ್ನು ಒಪ್ಪಂದದ ಮೂಲಕ ದೇಶದಿಂದ ಹೊರಹಾಕಬೇಕು’ ಎಂದು ನೆತನ್ಯಾಹು ಆಗ್ರಹಿಸಿದ್ದಾರೆ.

ಒಪ್ಪಂದದ ಗೊಂದಲ: ಕದನ ವಿರಾಮ ಒಪ್ಪಂದದ ಭಾಗವಾಗಿ ಇರಾನ್‌ಗೆ ಯುರೇನಿಯಂ ಸಮೃದ್ಧಗೊಳಿಸಲು ಅವಕಾಶವಿದೆಯೇ ಎಂಬ ಬಗ್ಗೆ ಗೊಂದಲ ಮುಂದುವರಿದಿದೆ.

ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಪರ್ಷಿಯನ್ ಭಾಷೆಯ ಒಪ್ಪಂದದ ಪ್ರತಿಯಲ್ಲಿ ‘ಸಮೃದ್ಧಗೊಳಿಸುವಿಕೆಗೆ ಅಂಗೀಕಾರ’ ಎಂಬ ಅಂಶವಿದೆ. ಆದರೆ, ಇಂಗ್ಲಿಷ್ ಆವೃತ್ತಿಯಲ್ಲಿ ಅದು ಇಲ್ಲ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್‌ ಖಾಲೀಬಾಫ್ ಮಾತನಾಡಿ, ಅಮೆರಿಕ ಈ ಹಕ್ಕನ್ನು ನಿರಾಕರಿಸುವ ಮೂಲಕ ಒಪ್ಪಂದ ಉಲ್ಲಂಘಿಸಿದೆ ಎಂದು ದೂರಿದ್ದಾರೆ.

ಇದೇ ವೇಳೆ ಟ್ರಂಪ್ ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ‘ಟ್ರೂಥ್‌ ಸೋಷಿಯಲ್‌’ನಲ್ಲಿ ಪೋಸ್ಟ್‌ ಮಾಡಿದ್ದು, ‘ಇರಾನ್‌ನಲ್ಲಿ ಯಾವುದೇ ಯುರೇನಿಯಂ ಸಮೃದ್ಧಗೊಳಿಸುವಿಕೆ ನಡೆಯುವುದಿಲ್ಲ. ಅಮೆರಿಕವು ಇರಾನ್ ಜೊತೆ ಸೇರಿ ಭೂಮಿಯ ಆಳದಲ್ಲಿ ಹೂತುಹಾಕಲಾದ ಎಲ್ಲಾ ಅಣು ತ್ಯಾಜ್ಯವನ್ನು ಹೊರತೆಗೆಯಲಿದೆ’ ಎಂದು ಹೇಳಿದ್ದಾರೆ.

ಭೂಸೇನೆ ಕಾರ್ಯಾಚರಣೆ ಭೀತಿ: ಟ್ರಂಪ್ ಅವರ ಕೋರಿಕೆಯ ಮೇರೆಗೆ ಅಮೆರಿಕದ ಭೂಸೇನೆ ಇರಾನ್‌ನೊಳಗೆ ನುಗ್ಗಿ ಯುರೇನಿಯಂ ದಾಸ್ತಾನುಗಳನ್ನು ವಶಪಡಿಸಿಕೊಳ್ಳುವ ವಿಶೇಷ ಕಾರ್ಯಾಚರಣೆಯ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ಈ ಯೋಜನೆಯು ಅತ್ಯಂತ ಅಪಾಯಕಾರಿಯಾಗಿದ್ದು, ಸಾವಿರಾರು ಸೈನಿಕರು ರಹಸ್ಯವಾಗಿ ಇರಾನ್ ಒಳಗೆ ಪ್ರವೇಶಿಸಬೇಕಾಗುತ್ತದೆ. ಭೂಗತವಾಗಿರುವ ವಿಕಿರಣಶೀಲ ವಸ್ತುಗಳನ್ನು ಹೊರತೆಗೆಯಲು ರಹಸ್ಯ ರನ್‌ವೇ ನಿರ್ಮಿಸಿ ವಿಮಾನದ ಮೂಲಕ ಸಾಗಿಸಬೇಕಾಗುತ್ತದೆ. ತಜ್ಞರ ಪ್ರಕಾರ ಇದು ಅತ್ಯಂತ ಅವಾಸ್ತವಿಕ ಯೋಜನೆಯಾಗಿದ್ದು, ಪೂರ್ಣಗೊಳ್ಳಲು ವಾರಗಳ ಸಮಯ ಬೇಕಾಗಬಹುದು.

ಹೆಚ್ಚಿದ ಆತಂಕ: ಇಸ್ರೇಲ್ ಬುಧವಾರ ಲೆಬನಾನ್ ಮೇಲೆ ನಡೆಸಿದ ಭೀಕರ ದಾಳಿಯಿಂದಾಗಿ ಕದನ ವಿರಾಮ ಒಪ್ಪಂದವು ಅಳಿವಿನ ಅಂಚಿನಲ್ಲಿದೆ. ಈ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಮತ್ತೆ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದೆ ಎಂದು ವರದಿಯಾಗಿದೆ.

‘ಕದನ ವಿರಾಮವೋ ಅಥವಾ ಇಸ್ರೇಲ್ ಮೂಲಕ ಯುದ್ಧವೋ ಎಂಬುದನ್ನು ಅಮೆರಿಕವೇ ನಿರ್ಧರಿಸಲಿ. ಎರಡೂ ಒಟ್ಟಿಗೆ ಸಾಧ್ಯವಿಲ್ಲ. ಈಗ ಚೆಂಡು ಅಮೆರಿಕದ ಅಂಗಳದಲ್ಲಿದೆ’ ಎಂದು ಇರಾನ್‌ ವಿದೇಶಾಂಗ ಸಚಿವ ಸೈಯದ್‌ ಅಬ್ಬಾಸ್‌ ಅರಾಗ್ಚಿ ವಾಗ್ದಾಳಿ ನಡೆಸಿದ್ದಾರೆ.

TAGGED:Will attack Iran again if it doesn't hand over uranium: US
Share This Article
Facebook Twitter Copy Link Print
Previous Article ಪಿಯುಸಿ ನಂತರ AI ಲೋಕಕ್ಕೆ ಎಂಟ್ರಿ; ಇಲ್ಲಿದೆ ನಿಮ್ಮ ಭವಿಷ್ಯದ ಹಾದಿ
Next Article ಕಾಲೇಜು ಫೀಸ್ ಕಟ್ಟದಿದ್ದಕ್ಕೆ ನರ್ಸಿಂಗ್ ವಿದ್ಯಾರ್ಥಿನಿಯಿಂದ 3 ದಿನ ಶೌಚಾಲಯ ತೊಳೆಸಿದ ಸಿಬ್ಬಂದಿ.

Popular Posts

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read

ಹೊಸದಾಗಿ ಮದ್ವೆಯಾದ ಮಹಿಳೆಯರು Googleನಲ್ಲಿ ಮೊದ್ಲು ಏನು ಹುಡುಕ್ತಾರೆ?

2 Min Read

ಸದ್ದಿಲ್ಲದೆ ಭಾರತದಾದ್ಯಂತ ಹರಡುತ್ತಿದೆ ನೈಟಿ ಕ್ರೇಜ್; ಈ ವಿಚಿತ್ರ ಟ್ರೆಂಡ್‌ನ ರಹಸ್ಯವೇನು?

2 Min Read

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

2 Min Read

You Might Also Like

ಪ್ರಮುಖವಿದೇಶ

300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?

2 Min Read
ದೇಶಪ್ರಮುಖವಿದೇಶ

ಹಾರ್ಮುಜ್ ಜಲಸಂಧಿ ಮೂಲಕ ಟೋಲ್-ಫ್ರೀ ಸಾಗಣೆ ಪ್ರಾರಂಭ: ಟ್ರಂಪ್ ಘೋಷಣೆ

1 Min Read
ದೇಶಪ್ರಮುಖವಿದೇಶ

ಒಮಾನಿ ಕಡಲಲ್ಲಿ ಮುಳುಗಿದ 14 ಭಾರತೀಯರಿದ್ದ ಹಡಗು; ಅಮೆರಿಕ ನೌಕಾಪಡೆಯಿಂದ ರಕ್ಷಣೆ

1 Min Read
ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?