newsics. com
ಬೆಂಗಳೂರು: ಕೆಂಪುಕೋಟೆಯಲ್ಲಿ ರಾಹುಲ್ ಗಾಂಧಿಗೆ ಲಾಸ್ಟ್ ಬೆಂಚ್ ನೀಡಿದ್ದಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಜೆಪಿ- ಕಾಂಗ್ರೆಸ್ ನಡುವೆ ಜಟಾಪಟಿ ಶುರುವಾಗಿದೆ
ಇಂದು ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ
ಲೋಕ ಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಎರಡನೇ ಕೊನೆಯ ಸಾಲಿನಲ್ಲಿ ಆಸನವನ್ನು ನಿಗದಿಪಡಿಸಿ ಶಿಷ್ಟಾಚಾರ ಉಲ್ಲಂಘಿಸಿದ್ದಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರೋಟೋಕಾಲ್ ಪ್ರಕಾರ, ಉಭಯ ಸದನಗಳ ಪ್ರತಿಪಕ್ಷ ನಾಯಕರು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು. ರಾಹುಲ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಸನಗಳು 5 ನೇ ಸಾಲಿನಲ್ಲಿದ್ದವು.
ಈ ಕುರಿತು ಮಾತನಾಡಿರು ಬಿಜೆಪಿ “ಈ ವರ್ಷ, ಒಲಿಂಪಿಕ್ ಕ್ರೀಡಾಕೂಟದ ಪದಕ ವಿಜೇತರನ್ನು ಗೌರವಿಸಲು ನಿರ್ಧರಿಸಲಾಯಿತು. ಒಲಿಂಪಿಕ್ ಕ್ರೀಡಾಕೂಟದ ಪದಕ ವಿಜೇತರ ಹಿಂದೆ ಕೆಲವು ಕೇಂದ್ರ ಸಚಿವರು ಸಹ ಕುಳಿತಿದ್ದರು ಎಂಬುದನ್ನು ಗಮನಿಸಬಹುದು” ಎಂಬುದಾಗಿ ಸಮರ್ಥಿಸಿಕೊಂಡಿದೆ.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಒಲಿಂಪಿಯನ್ಗಳ ಮೇಲಿನ ಗೌರವದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ರಕ್ಷಣಾ ಸಚಿವಾಲಯದ ದುರ್ಬಲ ವಿವರಣೆಯು ಸರಿಯಾಗಿಲ್ಲ. . ಒಲಿಂಪಿಯನ್ಗಳು ಪ್ರತಿಯೊಂದು ಗೌರವಕ್ಕೂ ಅರ್ಹರಾಗಿದ್ದರೂ, ಅಮಿತ್ ಶಾ ಅಥವಾ ನಿರ್ಮಲಾ ಸೀತಾರಾಮನ್ ಅವರಂತಹ ಕ್ಯಾಬಿನೆಟ್ ಮಂತ್ರಿಗಳು ಅವರಿಗಿಂತ ಮುಂದೆ ಮುಂದಿನ ಸಾಲಿನ ಆಸನಗಳನ್ನು ಹೇಗೆ ಪಡೆಯುತ್ತಾರೆ” ಎಂದು ಕಿಡಿಕಾರಿದ್ದಾರೆ.