newsics.com
ಕಲಬುರಗಿ: ಶರಣಬಸವೇಶ್ವರ ರಥೋತ್ಸವದ ವೇಳೆ ಸಂಭವಿಸಿದ ದುರಂತದಲ್ಲಿ ಭಕ್ತನೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಹಾಗರಗುಂಡಗಿ ಗ್ರಾಮದಲ್ಲಿ ನಿನ್ನೆ ಮಂಗಳವಾರ ಸಂಜೆ ನಡೆದಿದೆ.
ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದ ಶ್ರೀ ಶರಣಬಸವೇಶ್ವರ ದೇವರ ರಥೋತ್ಸವದಲ್ಲಿ ಈ ದುರ್ಘಟನೆ ಸಂಭವಿಸಿದೆ. ರಥ ಎಳೆಯುವ ವೇಳೆ ಆಯತಪ್ಪಿದ ಗ್ರಾಮ ನಿವಾಸಿ ವಿನೋದ್ ರೆಡ್ಡಿ (40) ರಥದ ಚಕ್ರದಡಿ ಸಿಲುಕಿದ್ದಾರೆ.
ಘಟನೆಯ ವೇಳೆ ರಥದ ಚಕ್ರವು ವಿನೋದ್ ಅವರ ತೊಡೆಯ ಮೇಲಿಂದ ಹರಿದ ಪರಿಣಾಮ ಅವರು ತೀವ್ರ ರಕ್ತಸ್ರಾವಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಫರಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ತಂದೆ ಮಗನ ಲಾಕಪ್ ಡೆತ್ ಕೇಸ್ : ಖಾಕಿ ಪಡೆಯ ಕ್ರೌರ್ಯ ಬಯಲಿಗೆಳೆದ ರೇವತಿಗೆ ಭಾರಿ ಬಿಗಿ ಭದ್ರತೆ