https://youtube.com/shorts/AWyQA9JMFI4?si=6teca9JBs0VZQurx
newsics.com
ಚೆನ್ನೈ: ತಂದೆ ಹಾಗೂ ಮಗನಿಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಅವರ ಸಾವಿಗೆ ಕಾರಣರಾಗಿದ್ದ ತಮಿಳುನಾಡಿನ 9 ಜನ ಪೊಲೀಸರಿಗೆ ಮಧುರೈ ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ.ಈ ಪ್ರಕರಣದಲ್ಲಿ, ಸಹೋದ್ಯೋಗಿಗಳ ಬೆದರಿಕೆಯ ನಡುವೆಯೂ ಧೈರ್ಯವಾಗಿ ಸಾಕ್ಷಿ ಹೇಳಿದ ಮಹಿಳಾ ಕಾನ್ಸ್‌ಟೇಬಲ್ ರೇವತಿ ಅವರಿಗೆ ನ್ಯಾಯಾಲಯವು ಭಾರಿ ಭದ್ರತೆ ಒದಗಿಸಿದೆ.
9 ಕ್ರೂರಿ ಪೊಲೀಸರನ್ನು ಎದುರು ಹಾಕಿಕೊಂಡು ನ್ಯಾಯದ ಪರ ನಿಂತು ದಿಟ್ಟವಾಗಿ ಸಾಕ್ಷಿ ಹೇಳಿದ ರೇವತಿಯ ಜೀವಕ್ಕೆ ಈಗ ಅಪಾಯ ಇರುವುದು ಸಹಜ ಹೀಗಾಗಿ ಈ ಪ್ರಕರಣದಲ್ಲಿ ಸಾಕ್ಷಿ ಹೇಳಿದ ಆಕೆಗೆ ನ್ಯಾಯಾಲಯ ಭಾರಿ ಭದ್ರತೆ ಒದಗಿಸುವುದಕ್ಕೆ ಸೂಚನೆ ನೀಡಿದೆ.
ತಮ್ಮ ಸಹೋದ್ಯೋಗಿಗಳಿಂದ ತೀವ್ರವಾದ ಒತ್ತಡ ಹಾಗೂ ಬೆದರಿಕೆಯ ನಡುವೆಯೂ ಅವರು ಜಯರಾಜ್ ಹಾಗೂ ಅವರ ಪುತ್ರ ಬೆನಿಕ್ಸ್ ಅವರ ಭೀಕರ ಹತ್ಯೆಯ ಬಗ್ಗೆ ಸಾಕ್ಷಿ ನುಡಿದಿದ್ದರು. ತಂದೆ ಹಾಗೂ ಮಗನನ್ನು ಪೊಲೀಸ್ ಠಾಣೆಯೊಳಗೆ ಕೂಡಿ ಹಾಕಿ ರಾತ್ರಿಯೆಲ್ಲಾ ಅವರ ಮೇಲೆ ಲಾಠಿಯಿಂದ ಭೀಕರವಾಗಿ ಹಲ್ಲೆ ಮಾಡಲಾಗಿದೆ ಎಂದು ಅವರು ವಿವರವಾದ ಮಾಹಿತಿ ನೀಡಿದ್ದರು.
https://www.newsics.com/2026/04/08/farmer-killed-in-early-morning-wild-elephant-attack/