newsics.com
ಕಚ್ಚಾ ಅಥವಾ ಹಸಿ ಹಾಲು ಪಾಶ್ಚೀಕರಿಸದ ಹಾಲು ಆಗಿದೆ. ಇದು ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ರೋಗಕಾರಕ ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ತುಂಬಾ ಜನರು ಕಚ್ಚಾ ಅಥವಾ ಹಸಿ ಹಾಲು ಸೇವಿಸಲು ಹಿಂಜರಿಯುತ್ತಾರೆ.
ಹಸಿ ಹಾಲು ಒಂದು ಡೈರಿ ಉತ್ಪನ್ನವಾಗಿದೆ. ಅದು ಪಾಶ್ಚರೀಕರಣ ಪ್ರಕ್ರಿಯೆಗೆ ಒಳಗಾಗಿಲ್ಲ. ಹಸಿ ಹಾಲು ನೇರವಾಗಿ ಹಸುವಿನ ಕೆಚ್ಚಲಿನಿಂದ ಗ್ರಾಹಕರಿಗೆ ತಲುಪುತ್ತದೆ. ಇದನ್ನು ಕಚ್ಚಾ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹಾಲನ್ನು ಬಿಸಿ ಮಾಡಿ ಸೇವಿಸುವುದು ತುಂಬಾ ಮುಖ್ಯ ಎಂದು ತಜ್ಞರು ಹೇಳ್ತಾರೆ.
ಹಸಿ ಹಾಲು ಕ್ಯಾಂಪಿಲೋಬ್ಯಾಕ್ಟರ್, ಕ್ರಿಪ್ಟೋಸ್ಪೊರಿಡಿಯಮ್, ಇ.ಕೋಲಿ, ಲಿಸ್ಟೇರಿಯಾ, ಬ್ರೂಸೆಲ್ಲಾ ಮತ್ತು ಸಾಲ್ಮೊನೆಲ್ಲಾಗಳಂತಹ ಹಾನಿಕಾರಕ ಸೂಕ್ಷ್ಮಜೀವಿ ಹೊಂದಿದೆ. ಹಾಗಾಗಿ ಇದನ್ನು ಕುಡಿದರೆ ಅನಾರೋಗ್ಯ, ಅತಿಸಾರ, ವಾಕರಿಕೆ, ಜ್ವರ, ವಾಂತಿ, ಆಯಾಸ ಉಂಟು ಮಾಡುತ್ತದೆ. ಈ ರೋಗಾಣುಗಳು ಹಸಿ ಹಾಲನ್ನು ಕುಡಿಯುವ ಅಥವಾ ಹಸಿ ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ತಿನ್ನುವವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಬಿಸಿ ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್-ಡಿ ಮತ್ತು ಪೊಟ್ಯಾಸಿಯಮ್ ಕೂಡ ಇದೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಿಸಿ ಹಾಲು ಯಾವುದೇ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ.
ಹಸಿ ಹಾಲನ್ನು ಕಾಯಿಸದೆ ಕುಡಿದರೆ ಏನಾಗುತ್ತೆ..?